ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಭಾರತದ ಮಹೋತ್ತರ ಸ್ವಚ್ಛತಾ ಯೋಜನೆಗಳಲ್ಲಿ ಒಂದಾದ ಸ್ವಚ್ಛೋತ್ಸವ – ಸ್ವಚ್ಛತಾ ಹೀ ಸೇವಾ 2025 ಭಾಗವಾಗಿ, ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ಸೆ.17ರಿಂದ ಅ.2ರವರೆಗೆ ವಿಭಾಗಾದ್ಯಂತ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮಾದರಿ ಕಾರ್ಯಗಳನ್ನು ಕೈಗೊಂಡಿದೆ.
ಮೊದಲ ದಿನ:
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಪ್ರತಿಜ್ಞೆ ನಡೆಸುವುದರಿಂದ ಆರಂಭವಾಯಿತು. ಕೇಂದ್ರ ಸಚಿವ ಪಹ್ಲಾದ್ ಜೋಶಿ ಅವರು ಪಾಲ್ಗೊಂಡು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಯಾನವನ್ನು ಉದ್ಘಾಟಿಸಿ, ಸಸಿಗಳನ್ನು ನೆಟ್ಟರು.
ಎರಡನೇ ದಿನ:
ಸುಮಾರು 12 ರೈಲು ನಿಲ್ದಾಣಗಳಲ್ಲಿ ಸಫಾಯಿ ಸುರಕ್ಷಾ ಶಿಬಿರಗಳು ಮತ್ತು ಆರೋಗ್ಯ ತಪಾಸಣಾ ಶಿಬಿರಗಳು ನಡೆಯಿತು.
ಮೂರನೇ ದಿನ:
ಹುಬ್ಬಳ್ಳಿ ನಿಲ್ದಾಣದ ಎರಡನೇ ಪ್ರವೇಶದ ಗೇಟಿನಿಂದ ಮೊದಲನೆಯ ಪ್ರವೇಶದ ಗೇಟಿನವರೆಗೆ ವಾಕ್ಥಾನ್ ಆಯೋಜಿಸಲಾಯಿತು. ವಿಭಾಗೀಯ ರೈಲು ವ್ಯವಸ್ಥಾಪಕರಾದ ಬೇಲಾ ಮೀನಾ ಹಾಗೂ ಹಿರಿಯ ರೈಲು ಅಧಿಕಾರಿಗಳೊಂದಿಗೆ ಈ ವಾಕ್ಥಾನ್’ನಲ್ಲಿ ಭಾಗವಹಿಸಿದರು.
ನಾಲ್ಕನೇ ದಿನ:
ಗದಗ ರಸ್ತೆ ರೈಲು ಮೈದಾನದಲ್ಲಿ ಸ್ವಚ್ಛ ಭಾರತ ಮಿಷನ್ ಕ್ರೀಡಾ ಸ್ಪರ್ಧೆಗಳು ನಡೆಯಿತು. ಶಾಲಾ ಮಕ್ಕಳು ಮತ್ತು ಕ್ರೀಡೆ ಪ್ರಿಯರು ಉತ್ಸಾಹದಿಂದ ಪಾಲ್ಗೊಂಡರು.
ಐದನೇ ದಿನ:
ನಿಲ್ದಾಣಗಳು, ಕಾಲೋನಿಗಳು ಮತ್ತು ಕಚೇರಿಗಳಲ್ಲಿ ಸಸಿಗಳನ್ನು ನೆಡಲಾಯಿತು. ರೈಲು ಸೌಧದಲ್ಲಿ , ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥೋರ್ ಅವರು ಸಸಿಗಳನ್ನು ನೆಟ್ಟು, ಹಸಿರು ಪರಿಸರದ ಮಹತ್ವವನ್ನು ವಿವರಿಸಿದರು.
ಆರನೆಯ ದಿನ, ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕ ವತಿಯಿಂದ ರೈಲು ಕಾಲೊನಿಗಳಲ್ಲಿ ಮನೆ-ಮನೆಯಾಗಿ ವಸ್ತು ಸಂಗ್ರಹಣಾ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಅಭಿಯಾನವು ಆರ್’ಆರ್’ಆರ್ ತತ್ತ್ವವನ್ನು ಪ್ರಚಾರ ಮಾಡಿದ್ದು, ಸಂಗ್ರಹಿಸಲಾದ ಮರುಬಳಕೆಯ ವಸ್ತುಗಳನ್ನು ಅಗತ್ಯವಿರುವವರಿಗೆ ವಿತರಿಸಲಾಯಿತು.
ಹುಬ್ಬಳ್ಳಿ ವಿಭಾಗೀಯ ಕಚೇರಿಯಲ್ಲಿ, ಇಎಂಡಿ ಶೆಡ್ ಸಿಬ್ಬಂದಿ, ಖ್ಟ.ಈIಉ/ಇಟ-ಟ್ಟb ಮತ್ತು ಖ್ಟ.ಈIಉ/ಈಜಿಛಿoಛ್ಝಿ ಅವರ ಮಾರ್ಗದರ್ಶನದಲ್ಲಿ, ತ್ಯಾಜ್ಯ ವಸ್ತುಗಳನ್ನು ಬಳಸಿ ಸ್ವಿಂಗ್ ಪೆಂಡುಲಂ ಗಡಿಯಾರವನ್ನು ತಯಾರಿಸಿದರು.
ಅದೇ ರೀತಿಯಲ್ಲಿ, ಬಾಗಲಕೋಟೆ, ಗದಗ-ಬೆಟೆಗೇರಿ, ವಾಸ್ಕೋ-ಡಾ-ಗಾಮಾ (ಗೋವಾ) ನಿಲ್ದಾಣಗಳಲ್ಲಿ ತೆಂಗಿನಕಾಯಿ ಎಲೆ, ಗಾಜಿನ ಬಾಟಲಿಗಳು, ಕಾಡ್ಬೋðರ್ಡ್ ಮತ್ತು ಹಳೆಯ ಕಾಗದಗಳನ್ನು ಬಳಸಿ ಅಲಂಕಾರಿಕ ಗಾಡಿಗಳು, ಬೈಕ್ ಮಾದರಿಗಳು ಮತ್ತು ದೀಪಗಳನ್ನು ತಯಾರಿಸಿದರು
ಏಳನೇ ದಿನ:
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮರುಬಳಕೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಈ ಕಾರ್ಯಕ್ರಮವು ಶುದ್ಧತೆ ಮತ್ತು ಪರಿಸರ ಖಾಳಜಿಯನ್ನ ಉತ್ತೇಜಿಸುವುದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದರಲ್ಲಿ ಸಹಕಾರ ನೀಡಿತು.
ಮುಂದಿನ ದಿನಗಳಲ್ಲಿ, ವಿಭಾಗವು ಶ್ರಮದಾನ ಚಟುವಟಿಕೆಗಳು, ಪರಿಸರ ಜಾಗೃತಿ ಅಭಿಯಾನಗಳು ಮತ್ತು ಮನೆಮನೆಗೆ ಸ್ವಚ್ಛತಾ ವಾಕ್ಥಾನ್’ಗಳನ್ನು ಆಯೋಜಿಸಲು ಯೋಜನೆ ಮಾಡಿದೆ, ಇದು ಅಭಿಯಾನದ ಉದ್ದೇಶ ಮತ್ತು ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post