ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು–ಬಂಗಾರಪೇಟೆ–ಎಸ್ಎಂವಿಟಿ ಬೆಂಗಳೂರು ಮೆಮು ರೈಲಿಗೆ (ಸಂಖ್ಯೆ 06527/06528) #MEMU trains ಫೆಬ್ರವರಿ 27 ರಿಂದ ಮೇ 31, 2026ರವರೆಗೆ ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ದೇವನಗೊಂದಿ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಒದಗಿಸಲು ನಿರ್ಧರಿಸಿದೆ.
ಅದರಂತೆ, ರೈಲು ಸಂಖ್ಯೆ 06528 ಎಸ್ಎಂವಿಟಿ ಬೆಂಗಳೂರು–ಬಂಗಾರಪೇಟೆ ಮೆಮು ರೈಲು ದೇವನಗೊಂದಿ ನಿಲ್ದಾಣಕ್ಕೆ ಬೆಳಿಗ್ಗೆ 04:40ಕ್ಕೆ ಆಗಮಿಸಿ, 04:41ಕ್ಕೆ ನಿರ್ಗಮಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 06527 ಬಂಗಾರಪೇಟೆ–ಎಸ್ಎಂವಿಟಿ ಬೆಂಗಳೂರು ಮೆಮು ರೈಲು ರಾತ್ರಿ 09:24ಕ್ಕೆ ನಿಲ್ದಾಣಕ್ಕೆ ಬಂದು, 09:25ಕ್ಕೆ ತನ್ನ ಪ್ರಯಾಣ ಮುಂದುವರಿಸಲಿದೆ.
ಸ್ಥಳೀಯ ಪ್ರಯಾಣಿಕರ ಅನುಕೂಲಕ್ಕಾಗಿ ಈ ಪ್ರಾಯೋಗಿಕ ನಿಲುಗಡೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















