ಶಿವಮೊಗ್ಗ: ಅಂಗಾಂಗ ಧಾನ ಮಾಡಲು ಜೀರೋ ಟ್ರಾಫಿಕ್ ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಮಾನವೀಯತೆ ಮೆರೆದ ಇವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಭದ್ರಾವತಿಯ ಜೇಡಿಕಟ್ಟೆಯ ನಿವಾಸಿ ಹರೀಶ್ (32) ಇವರಿಗೆ ನಿನ್ನೆ ಬೆಳಗಿನ ಜಾವ 4 ಗಂಟೆಗೆ ಫಿಟ್ಸ್ ನಿಂದಾಗಿ ಒದ್ದಾಡುತ್ತಿದ್ದರು. ಈ ಫಿಟ್ಸ್ ನಿಂದ ಅವರ ಮಾತು ನಿಂತಿತ್ತು. ಇದನ್ನ ಮನೆಯಲ್ಲೇ ಇದ್ದ ತಾಯಿಗೆ ತಿಳಿಸುತ್ತಾರೆ. ತಕ್ಷಣವೇ ಅವರು ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸುತ್ತಾರೆ.
ಆದರೆ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಆದರೆ ಅಲ್ಲಿನ ತಜ್ಞರು ಪರೀಕ್ಷಿಸಿ ನಾಲ್ಕು ಬಾರಿ ಸ್ಟ್ರೋಕ್ ಆಗಿದೆ. ಶೇ.80 ರಷ್ಟು ಉಳಿಸಿಕೊಳ್ಳುವುದು ಕಷ್ಟ. ಇನ್ನೂ ಶೇ.20 ರಷ್ಟು ಭಾಗ ಭರವಸೆ ನೀಡುವುದು ಕಷ್ಟ. ಹೃದಯ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ ಎಂದಾಕ್ಷಣ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಹರೀಶನ ಕುಟುಂಬ ಹಾಗೂ ಆತನ ಸ್ನೇಹಿತರು ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ವಿಚಾರ ಮಾಡುತ್ತಾರೆ. ಆದರೆ ಮಣಿಪಾಲಿಗೆ ಹೋದರೂ ಸಹ ಇದೆ ಪರಿಸ್ಥಿತಿ ಇರುತ್ತದೆ ಎಂದು ನಿರ್ಧರಿಸುತ್ತಾರೆ. ಆದರೂ ಹರೀಶ್ ಗೆ ವೆಂಟಿಲೇಟರ್ ನಲ್ಲಿ ಸಾವು ಮರಣದ ಮಧ್ಯೆ ಹೋರಾಟ ನಡೆಸಿ ಕೃತಕ ಉಸಿರಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಇವುಗಳ ಮದ್ಯೆ ಹರೀಶ್ ಅವರನ್ನು ಉಳಿಸಿಕೊಳ್ಳುವುದು ಕಷ್ಟ ಎಂದಾದರೆ ಅವನ ಲಂಗ್ಸ್, ಕೃದಯ, ಮೂತ್ರಪಿಂಡ ಮೊದಲಾದ ಅಂಗಾಂಗಳು ಚೆನ್ನಾಗಿ ಕೆಲಸ ಮಾಡುತ್ತಿರುವುದರಿಂದ ಈ ಅಂಗಾಂಗಗಳಉ್ನ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ಧಾನ ಮಾಡಲು ಕಠಿಣ ನಿರ್ಧಾರ ಕೈಗೊಳ್ಳುತ್ತದೆ.
ಹಾಗಾಗಿ ಹರೀಶ್ ನ ಕುಟುಂಬ ಮತ್ತು ಆತನ ಸ್ನೇಹಿತರು ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿರುತ್ತಾರೆ. ಇಂದು ಬೆಳಿಗ್ಗೆ 6:30ಕ್ಕೆ ಎಸ್ಪಿ ಅಭಿನವ ಖರೆ ಅವರು ಶಿವಮೊಗ್ಗ ಮತ್ತು ಬೆಂಗಳೂರಿನ ರಸ್ತೆಯಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಹರೀಶ್ ನನ್ನ ಅಂಬ್ಯುಲೆನ್‌ಸ್ನಲ್ಲಿ ಕಳುಹಿಸಿಕೊಟ್ಟಿದ್ದಾರೆ.
ಹಿಂದೆ ರೋಗಿಯೊಬ್ಬರನ್ನು ತುರ್ತಾಗಿ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲು ಝೀರೋ ಟ್ರಾಫಿಕ್ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದ ಅಭಿನವ್ ಖರೆ ಅವರು ಈಗ ಮತ್ತೊಮ್ಮೆ ಇಂತಹುದ್ದೇ ಕಾರ್ಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Discussion about this post