ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರೆಂಟಿಗಳ ಮೂಲಕ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈಗ ತೆಲಂಗಾಣ Telangana ಚುನಾವಣೆಯಲ್ಲಿ ಆರು ಗ್ಯಾರೆಂಟಿಗಳನ್ನು ನೀಡುವ ಮೂಲಕ ಇದೇ ತಂತ್ರವನ್ನು ಮುಂದುವರೆಸಿದೆ.
ತೆಲಂಗಾಣಕ್ಕೆ ಆರು ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನೂರು ದಿನಗಳ ಒಳಗಾಗಿ ಇವುಗಳನ್ನು ಜಾರಿ ಮಾಡುವುದಾಗಿ ಹೇಳಿದೆ.
ಯಾವುವು ಆರು ಗ್ಯಾರೆಂಟಿಗಳು?
ಗ್ಯಾರಂಟಿ 1 – ಪ್ರತಿ ತಿಂಗಳು ಅತ್ತೆಗೆ ರೂ. 4,000, ಸೊಸೆಗೆ ರೂ. 2,500
ಗ್ಯಾರಂಟಿ 2 – ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು ರೂ. 2,500 (ಮಹಾಲಕ್ಷ್ಮಿ ಯೋಜನೆ)
ಗ್ಯಾರಂಟಿ 3 – ಪಿಂಚಣಿ ಮೊತ್ತ ರೂ.2,000 ನಿಂದ ರೂ.4,000ಕ್ಕೆ ಹೆಚ್ಚಳ
ಗ್ಯಾರಂಟಿ 4 – 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
ಗ್ಯಾರAಟಿ 5 – ಮನೆ ನಿರ್ಮಾಣಕ್ಕೆ ರೂ. 5 ಲಕ್ಷ್ಮಿ ನೆರವು
ಗ್ಯಾರಂಟಿ 6 – ಬಡವರಿಗೆ 200 ಯೂನಿಟ್’ವರೆಗೂ ಉಚಿತ ವಿದ್ಯುತ್
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ Karnataka CM Siddaramaiah ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ DK Shivakumar ಅವರುಗಳು ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ದು, ಕರ್ನಾಟಕ ಮಾದರಿಯಂತೆಯೇ ಅಲ್ಲೂ ಸಹ ಗ್ಯಾರೆಂಟಿ ಜಾರಿ ಮಾಡಲಾಗುವುದು ಎಂದಿದ್ದಾರೆ.
Also read: ಸರ್ಕಾರಿ ಬಸ್-ಓಮ್ನಿ ಅಪಘಾತ | ಐವರ ದಾರುಣ ಸಾವು
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮಾತನಾಡಿ, ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















