ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಮಗುವಿನ ಚರ್ಮ ಕಪ್ಪಾಗಿದೆ ಎಂಬ ಕಾರಣಕ್ಕಾಗಿ ತನ್ನ 18 ತಿಂಗಳ ಮಗಳನ್ನೇ ವಿಷಪೂರಿತ ಪ್ರಸಾದ ತಿನ್ನಿಸಿ ತಂದೆಯೇ ಕೊಂದಿರುವ ದಾರುಣ ಘಟನೆ ನಡೆದಿದೆ.
ಮೃತ ಮಗುವನ್ನು ಅಕ್ಷಯಾ, ಪಾಪಿ ತಂದೆಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಹೈದರಾಬಾದ್’ನ ಕೆರಂಪುಡಿ ಎಂಬಲ್ಲಿ ನಡೆದಿದೆ.
ಆರೋಪಿ ತಂದೆ ಮಹೇಶ್ ಪ್ರಸಾದದಲ್ಲಿ ವಿಷವನ್ನು ಸೇರಿಸಿ ಮಗುವಿಗೆ ತನ್ನಿಸಿದ್ದನು. ಇದರಿಂದಾಗಿ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಮಗುವಿಗೆ ಏನೋ ಆಗಿದೆ ಎಂದು ಆತ ತನ್ನ ಪತ್ನಿಗೆ ತಿಳಿಸಿದ್ದಾನೆ.
ಆದರೆ, ಅನುಮಾನಗೊಂಡ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಮಹೇಶನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ ನಂತರ ಸತ್ಯ ಹೊರಬಂದಿದೆ.
ಆರೋಪಿ ಪತ್ನಿ ಶ್ರಾವಣಿ ಹೇಳಿಕೆಯಂತೆ, ಕಪ್ಪು ಮೈಬಣ್ಣದ ಮಗುವಿಗೆ ಜನ್ಮ ನೀಡಿದ್ದಕ್ಕೆ ತನ್ನ ಪತಿ ಮತ್ತು ಅತ್ತೆಯಂದಿರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Also read: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕಾರಿಗೆ ವ್ಯಕ್ತಿ ಬಲಿ | ಇಷ್ಟಕ್ಕೂ ನಡೆದಿದ್ದೇನು?
ಶ್ರಾವಣಿ ಅವರ ಹೇಳಿಕೆಯ ಪ್ರಕಾರ, ಮಾರ್ಚ್ 31 ರಂದು 18 ತಿಂಗಳ ಮಗುವಿನ ಮೂಗು ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದೆ.
ಕರೆಂಪುಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಕೊಲೆಯಾದ ಮಗುವಿನ ತಾಯಿ ತನ್ನ ಪತಿಯಿಂದ ದೌರ್ಜನ್ಯದ ವಿವರವನ್ನು ಸಂಬAಧಿಕರಿಗೆ ಬಹಿರಂಗಪಡಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹೇಶ್ ಈ ಹಿಂದೆಯೂ ಹಲವು ಬಾರಿ ತನ್ನ ಮಗಳನ್ನು ಕೊಲ್ಲಲು ಯತ್ನಿಸಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶ್ರಾವಣಿ ಪ್ರಕಾರ, ಮಹೇಶ್ ತಮ್ಮ ಮಗಳನ್ನು ಗೋಡೆಗೆ ಎಸೆದು, ಮತ್ತೊಂದು ಬಾರಿ ನೀರಿನ ತೊಟ್ಟಿಯಲ್ಲಿ ಮುಳುಗಿಸಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post