ನ್ಯೂಯಾರ್ಕ್: ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಮ್ಮ ಜೀವನದ ಕಷ್ಟದ ದಾರಿಗಳನ್ನು ಎದುರಿಸಲು ಹೋರಾಡುತ್ತಿದ್ದೇನೆ ಎಂದಿದ್ದಾರೆ.
🤞🌞 #SwitchOnTheSunshine (1/2) pic.twitter.com/zz7SwJXlhz
— Sonali Bendre Behl (@iamsonalibendre) July 10, 2018
43 ವರ್ಷದ ಸೋನಾಲಿ ಬೇಂದ್ರೆ ಹೈ ಗ್ರೇಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಕಳೆದ ವಾರವಷ್ಟೇ ಬೆಳಕಿಗೆ ಬಂದಿದ್ದು, ಇದಕ್ಕಾಗಿ ಅವರು ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು, ಚಿಕಿತ್ಸೆ ಪಡೆಯುತ್ತಿರುವ ಅವರು, ಇದಕ್ಕಾಗಿ ತಮ್ಮ ಕೇಶ ವಿನ್ಯಾಸವನ್ನು ಬದಲಾವಣೆ ಮಾಡಿಕೊಂಡಿದ್ದು, ಇದರ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
🤞🌞 #SwitchOnTheSunshine (2/2) pic.twitter.com/Lw6wum2xaf
— Sonali Bendre Behl (@iamsonalibendre) July 10, 2018
ಇದರೊಂದಿಗೆ ತಮಗೆ ಈ ಖಾಯಿಲೆ ಇದೆ ಎಂದು ತಿಳಿದ ನಂತರ ಅಭಿಮಾನಿಗಳ ಪ್ರೀತಿ ಹಾಗೂ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
Discussion about this post