ಕಲ್ಪ ಮೀಡಿಯಾ ಹೌಸ್
ಉಡುಪಿ ಜಿಲ್ಲೆಗೆ ಸೇರಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕರಾವಳಿಯ ಹೆಮ್ಮೆಯ ಪ್ರದೇಶ ಬೈಂದೂರು. ಪ್ರಾಕೃತಿಕ ಸೌಂದರ್ಯವನ್ನು ಹೊದ್ದುಕೊಂಡಿರುವ ಇಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ದಿಯ ಪರ್ವವೇ ಸಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಕನಸುಗಾರ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ.
ಹೌದು… ಜನಾನುರಾಗಿ ಗುರುತಿಸಿಕೊಂಡಿರುವ ಅಭಿವೃದ್ದಿಯ ಹರಿಹಾರ ಸುಕುಮಾರ ಶೆಟ್ಟರು ಶಾಸಕರಾಗಿ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಗೆ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ. ಅದರ ಯಥಾವತ್ ಹೀಗಿದೆ.
ಸಾಧನೆ ನೂರಾರು
ಭಗವತಿ ಕೊಲ್ಲೂರು ಮೂಕಾಂಬಿಕೆಯ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದಾಗಿ 23 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಿ ಮೂರು ವರ್ಷ.
ಮೂರು ವರ್ಷಗಳ ಹಿಂದಿನ ಈ ದಿನ ನೆನಪಿದೆ. ಆ ದಿನ ಸಂಭ್ರಮಿಸಲು ಅದರ ಹಿಂದಿನ ನಿಮ್ಮೆಲ್ಲರ ಪರಿಶ್ರಮ ಕೂಡ ಸ್ಪಷ್ಟವಾಗಿ ನೆನಪಿದೆ. ನವ ಬೈಂದೂರು ನಿರ್ಮಾಣದ ಕನಸನ್ನು ಬಿತ್ತರಿಸಿ, ಕುಡಿಯುವ ನೀರಿನ ಸಮಸ್ಯೆ ಆದಿಯಾಗಿ ಬೈಂದೂರಿನ ಅಮೂಲಾಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ಹೊರಟು ನಿಂತಾಗ ಅನೇಕ ಸವಾಲುಗಳು ಸಾಮಾನ್ಯವಾಗಿದ್ದವು. ಆದರೆ ಸ್ವತಃ ನೀವುಗಳೇ ಅಭ್ಯರ್ಥಿ ಎಂಬಂತಹ ಉತ್ಸಾಹದೊಂದಿಗೆ, ನನ್ನನ್ನು ಗೆಲ್ಲಿಸಿದರೆ ಪ್ರಾಮಾಣಿಕವಾಗಿ ಸಮಗ್ರ ಬೈಂದೂರಿನ ಅಭಿವೃದ್ಧಿ ಆಗುತ್ತದೆ ಎಂಬ ಭರವಸೆಯೊಂದಿಗೆ ಹಗಲು ಇರುಳು ಎನ್ನದೆ ಹೋರಾಟ ನೀಡಿದ್ದೀರಿ. ವಿರೋಧಿಗಳ ಟೀಕೆಗಳಿಗೆ ಗಟ್ಟಿ ಧ್ವನಿಯಲ್ಲಿ ಉತ್ತರ ನೀಡಿದ್ದಿರಿ.
ನಿಮ್ಮೆಲ್ಲರ ಕನಸಿನಂತ, ನಿಮ್ಮಗಳ ಹೋರಾಟದಿಂದ ಬಹುದೊಡ್ಡ ಅಂತರದ ಗೆಲುವನ್ನು ಸಂಪಾದಿಸಿ ಕೊಟ್ಟಿದ್ದೀರಿ. ಚುನಾವಣೆಯ ಮಾತುಗಳನ್ನು ಕೇವಲ ಅತ್ತಿಗೆ ಸೀಮಿತವಾಗಿರಿಸದೇ ಚಲಾವಣೆಗೂ ತರುವಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ, ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಯಾವತ್ತೂ ಮುಲಾಜಿಗೆ ಒಳಗಾಗದೇ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದರಾದ ಬಿ.ವೈ. ರಾಘವೇಂದ್ರ ಅವರ ಸಂಪೂರ್ಣ ಸಹಕಾರದಿಂದಾಗಿ ಬೈಂದೂರಿಗೆ ಸಾವಿರದ ಎಂಟುನೂರು ಕೋಟಿಗೂ ಮಿಕ್ಕಿ ಅನುದಾನ ತರುವಲ್ಲಿ ಶ್ರಮಿಸಿದ್ದೇನೆ.
ನನ್ನ ಗೆಲುವಿಗೆ ಶ್ರಮಿಸಿದ ತೆರೆಯ ಮರೆಯ ನೀವುಗಳು ಸೇರಿ, ಈಗ ಸಂಪರ್ಕದಲ್ಲಿರುವ ನಿಮ್ಮೆಲ್ಲರ ಶ್ರಮವನ್ನು ಜೀವನಪರ್ಯತ ಮರೆಯಲು ಸಾಧ್ಯವಿಲ್ಲ ಬಂಧುಗಳೇ. ಹಾಗಂತ I am not perfect! ಕೊಂಚ ಸಿಡುಕನಿರಬಹುದು. ಆದರೆ ಕೆಡುಕನಲ್ಲ, ಭ್ರಷ್ಟನಲ್ಲ. ನನಗಾಗಿ ಒಂದಿನಿತು ಕೆಲಸವನ್ನು ಮಾಡಿಸಿಕೊಂಡವನಲ್ಲ, ನನ್ನ ವೈಯಕ್ತಿಕ ಕಾರಣಕ್ಕೆ ಅಧಿಕಾರಗಳ ಜೊತೆ ಮಾತನಾಡಿದನಲ್ಲ, ನನ್ನವರೆಂಬ ನಿಮಗಾಗಿ ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ದುಂಬಾಲು ಬಿದ್ದು ಅನುದಾನ ತಂದಿದ್ದೇನೆ.
ಅಭಿವೃದ್ಧಿ ಎಂದರೆ ಬೇರೆ ಕ್ಷೇತ್ರಗಳಲ್ಲಿ ಕೈಗಾರಿಕೆ, ಉದ್ಯೋಗ ನಿರ್ಮಾಣ. ಅದೇ ನಿಜ ಆದರೆ ನಮ್ಮ ಕ್ಷೇತ್ರದ ಹಲವಷ್ಟು ಕಡೆ ಮೂಲಭೂತ ಸೌಕರ್ಯಗಳು ಇರಲಿಲ್ಲ. ಅದಕ್ಕಾಗಿ ಶ್ರಮಿಸುತ್ತ ಮೂರು ವರ್ಷ ಸವೆದಿದೆ. ಕೊಟ್ಟ ಮಾತಿನಂತೆ ಸಮಗ್ರ ಬೈಂದೂರಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಇದೆ. ಕನಸುಗಳ ಪಟ್ಟಿಯಲ್ಲಿ ಬೈಂದೂರಿಗೆ ವಿಮಾನ ನಿಲ್ದಾಣ, ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ, ಇವೆಲ್ಲ ಇದೆಯಾದರೂ ಲೋಕಕಂಟದ ವ್ಯಾದಿ ಅಭಿವೃದ್ಧಿ ಕುಂಠಿತಗೊಳಿಸಿದ್ದು ಸತ್ಯ.
ಇದು ಗೆಲುವನ್ನು ಸಂಭ್ರಮಿಸುವ ಸಮಯವಲ್ಲ. ಕೋವಿಡ್‌ನ್ನು ಗೆಲ್ಲುವಲ್ಲಿ ಶ್ರಮಿಸಬೇಕಾದ ಸಮಯ. ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಅದರ ಬಗ್ಗೆ ನಮಗೂ ಕಾಳಜಿಯಿದೆ, ಹಾಗಾಗಿ ಬೈಂದೂರಿನಲ್ಲಿ ಶೀಘ್ರವಾಗಿ ಆಕ್ಸಿಜನ್ ಘಟಕ ಆರಂಭ ಆಗಲಿದೆ. ನೀವೆಲ್ಲರೂ ಧೈರ್ಯದಿಂದ ಇರಿ. ಬೈಂದೂರು ಭವಿಷ್ಯತ್ ಬದಲಾಗಿಸುವ ಪಣತೊಟ್ಟ ನನ್ನ ಜೊತೆಗಿದ್ದು ಬೃಹತ್ ಅಂತರದ ಗೆಲುವನ್ನು ಸಂಪಾದಿಸಿ ಕೊಟ್ಟ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಸಂಕಷ್ಟವನ್ನು ನೀವುಗಳು ನಿಶ್ಚಿತವಾಗಿ ಗೆಲ್ಲುವಲ್ಲಿ ನಾನು ನಿಮ್ಮ ಜೊತೆಗಿರಲಿದ್ದೇನೆ. ತಮಗೆಲ್ಲರಿಗೂ ಕೊಲ್ಲೂರು ಮೂಕಾಂಬಿಕೆಯು ರಕ್ಷಣೆಯನ್ನು ನೀಡಿ, ಸುಖ-ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post