ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಚಲನಚಿತ್ರರಂಗದಲ್ಲಿ ಎತ್ತರಕ್ಕೆ ಬೆಳದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೃಷಿಯಲ್ಲೂ ತೊಡಗಿಕೊಂಡಿರುವ ಜೊತೆಯಲ್ಲಿ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಂಸಿಸಿದರು.
ಕೃಷಿ ಕಾಯಕದ ರಾಯಭಾರಿ ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಅಪರೂಪದ ವಿಶೇಷ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾಡಿದ್ದಾರೆ. ಚಲನಚಿತ್ರ ರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ದರ್ಶನ್ ನಟನೆಯ ಜೊತೆಗೆ ಕೃಷಿಕ ರೈತಾಪಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ. ರೈತರ ಪರವಾಗಿ ದರ್ಶನ್‌ಗೆ ಅಭಿನಂದನೆಗಳು. ಕೃಷಿ ಇಲಾಖೆಗೆ ಕೃಷಿ ರಂಗಕ್ಕೆ ದರ್ಶನ್ ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಮೆಚ್ಚುಗೆಯ ಸಂಗತಿ. ನಾನು ಸಹ ದರ್ಶನ್ ಅವರ ರಾಬರ್ಟ್ ಚಿತ್ರವನ್ನು ನೋಡುತ್ತೇನೆ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಇದು ಕೃಷಿ ಇಲಾಖೆಯ ಅಭೂತಪೂರ್ವ ಕಾರ್ಯಕ್ರಮವಾಗಿದೆ. ಚಾಲೆಂಜಿಂಗ್ ಸ್ಟಾರ್ ಚಿತ್ರರಂಗದಲ್ಲಿ ನಟನೆಯ ಜೊತೆಗೆ ಕೃಷಿ ಪಶುಸಂಗೋಪನೆ ಚಟುವಟಿಕೆಗಳನ್ನೂ ನಡೆಸುತ್ತಿರುವ ದರ್ಶನ್ ಕೃಷಿ ಕಾಯಕದ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ. ರೈತ ನಾಯಕರಾಗಿ ರೈತಪರ ಹೋರಾಟ ಮಾಡಿ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿರುವ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತಸದ ವಿಚಾರ. ದರ್ಶನ್ ಎತ್ತರವಿರುವಷ್ಟು ಅವರ ಹೃದಯವೂ ಅಷ್ಟೇ ವಿಶಾಲವಾಗಿದೆ ಎಂದರು.
ದರ್ಶನ್‌ಗೆ ರೈತರ ಪರ ಕಳಕಳಿ ಇರುವ ಸ್ಟಾರ್ ಎಂಬುದು ಹೆಮ್ಮೆಯ ವಿಚಾರ. ದರ್ಶನ್ ಫಾರ್ಮ್ ಎನ್ನುವುದು ಸಣ್ಣ ಝೂ ಇದ್ದಂತಿದೆ. ದರ್ಶನ್ ಸ್ವತಃ ಕೃಷಿ ಚಟುವಟಿಕೆಯನ್ನೂ ಮಾಡುತ್ತಾರೆ. ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿರುವುದು ಖುಷಿಯ ವಿಚಾರ. ದೊಡ್ಡದೊಡ್ಡ ಕೆಲ ಸೂಪರ್ ಸ್ಟಾರ್‌ಗಳು ಸಂಭಾವನೆ ಪಡೆದು ದೊಡ್ಡ ದೊಡ್ಡ ಕಂಪೆನಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ. ಆದರೆ ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿರುವುದು ದರ್ಶನ್ ಅವರಲ್ಲಿರುವ ಕೃಷಿ ಉತ್ಸಾಹ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.
ದರ್ಶನ್ ನಟನೆಯ ರಾಬರ್ಟ್ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ವತಃ ಸ್ಫೂರ್ತಿಯಿಂದ ಅಭಿಮಾನಿಗಳು ಜನರು ಸೇರಿರುವುದು ನೋಡಿದರೆ ಅವರಿಗೆ ಜನರ ಅಭಿಮಾನ ಎಷ್ಟಿದೆ ಎಂದು ಎದ್ದು ತೋರಿಸುತ್ತದೆ. ಸಂಗೊಳ್ಳಿ ರಾಯಣ್ಣ ಪಾತ್ರಕ್ಕೂ ಸೈ, ಇತರೆ ಎಲ್ಲಾ ಪಾತ್ರಗಳೊನಾನು ಅಧುನಿಕ ಕೌರವನಾಗಿ ನಟನೆ ಮಾಡಿದ್ದೆ. ಆದರೆ ಪೌರಾಣಿಕವಾಗಿ ನಟನೆಯಲ್ಲಿ ದರ್ಶನ್ ಕೌರವನಾಗಿ ನಟಿಸಿದ್ದಾರೆ. ಮಾರ್ಚ್ 11 ರಂದು ರಾಬರ್ಟ್ ಚಿತ್ರ ರಿಲೀಸ್ ಆಗಲಿದ್ದು ಚಿತ್ರ ಸೂಪರ್ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾರ್ಚ್ 5, 2021 ರಿಂದ ಅಧಿಕೃತವಾಗಿ ಕೃಷಿ ಕಾಯಕದ ರಾಯಭಾರಿಯಾಗಿದ್ದಾರೆ ಎಂದರು.
ಕೃಷಿ ಇಲಾಖೆ ರಾಯಭಾರಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಸಿನಿಮಾರಂಗದಿಂದ ಈಗ ಬಿ.ಸಿ. ಪಾಟೀಲ್ ಕೃಷಿ ಸಚಿವರಾಗಿದ್ದಾರೆ. ನಾನು ಸರ್ಕಾರದ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತೇನೆ. ರೈತರಿಗೂ ಜನರಿಗೂ ಇರುವುದು ರಕ್ತ ಸಂಬಂಧ. ಇದಕ್ಕೆ ನಾನು ಶ್ರಮಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಕೈಪಿಡಿ-2021ಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಮೇಲ್ಮನೆ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















