ಪೂಂಚ್: ಕಣಿವೆ ರಾಜ್ಯದಲ್ಲಿ ನಿನ್ನೆ ಭಾರತ ವಾಯುಗಡಿಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ಥಾನ ವಿಮಾನಗಳು ಇಂದು ಮತ್ತೆ ಭಾರತವನ್ನು ಪ್ರವೇಶಿಸಲು ಯತ್ನ ನಡೆಸಿವೆ.
ಪೂಂಚ್ ಪ್ರದೇಶದಲ್ಲಿ ಭಾರತದ ವಾಯುಗಡಿಯಲ್ಲಿ ಪ್ರವೇಶಿಸಿ ಪಾಕಿಸ್ಥಾನ ಜೆಟ್ ವಿಮಾನಗಳು ಯತ್ನಿಸಿವೆ. ಆದರೆ, ಹಗಲಿರುಳು ಗಸ್ತು ತಿರುಗುತ್ತಿರುವ ಭಾರತೀಯ ವಾಯುಪಡೆಯ ವಿಮಾನಗಳ ತತಕ್ಷಣವೇ ಪಾಕ್ ವಿಮಾನಕ್ಕೆ ತಿರುಗೇಟು ನೀಡಿದ್ದು, ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ.
ಆದರೆ, ಇನ್ನೊಂದು ಮೂಲಗಳ ಪ್ರಕಾರ ಗಡಿ ಪ್ರವೇಶಿಸಲು ಯತ್ನಿಸಿದ ಪಾಕ್ ವಿಮಾನಗಳನ್ನು ನಮ್ಮ ವಿಮಾನಗಳು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆಯಷ್ಟೆ ವಿಮಾನ, ವಿಮಾನವನ್ನು ಧ್ವಂಸ ಮಾಡಲಾಗಿಲ್ಲ.
ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Discussion about this post