ವಾಘಾ ಗಡಿ: ಇಡಿಯ ಭಾರತ ಕಾತರದಿಂದ ಕಾದಿದ್ದ ಗಳಿಗೆ ಬಂದೇ ಬಿಟ್ಟಿದ್ದು, ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದ್ದು, ತಾಯಿ ಭಾರತಿಯ ವೀರಪುತ್ರ ತಾಯ್ನೆಲವನ್ನು ಸ್ಪರ್ಶಿಸಿದ್ದಾರೆ.
#BREAKING on #AbhinandanReturns | IAF Wing Commander Abhinandan crosses the border to enter India, tune in to watch LIVE visuals here-https://t.co/LGCyJUWcLF pic.twitter.com/5s8lDWqHO1
— Republic (@republic) March 1, 2019
ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಸುರಕ್ಷಿತವಾಗಿ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
IAF Wing Commander #AbhinandanVarthaman returns to India. pic.twitter.com/0uvWUBchcx
— ANI (@ANI) March 1, 2019
ವಾಘಾ ಅಟಾರಿ ಗಡಿಯಲ್ಲಿ ಶಸ್ತ್ರ ಸಜ್ಜಿತ ಪಾಕ್ ಭದ್ರತಾ ಪಡೆಗಳ ನಡುವೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತ ಬಂದ ಅಭಿನಂದನ್ ಅವರನ್ನು ಭಾರತೀಯ ಸೇನಾ ಅಧಿಕಾರಿಗಳು ಆಲಿಂಗನ ಮಾಡಿಕೊಂಡು ಆತ್ಮೀಯವಾಗಿ ಬರ ಮಾಡಿಕೊಂಡರು. ಸ್ಥಳದಲ್ಲಿದ್ದ ಐಎಎಫ್ ಅಧಿಕಾರಿಗಳು ಸೇರಿ ಅನೇಕ ದೇಶಾಭಿಮಾನಿಗಳು ದೇಶದ ಹೆಮ್ಮೆಯ ಪುತ್ರ ಅಭಿನಂದನ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು.
IAF Wing Commander #AbhinandanVarthaman at Wagah-Attari border, to cross border soon to enter India. pic.twitter.com/a1hVjwroVw
— ANI (@ANI) March 1, 2019
IAF Wing Commander #AbhinandanVarthaman at Wagah-Attari border pic.twitter.com/WGz0LaNvX3
— ANI (@ANI) March 1, 2019
ಭಾರತದ ಕಡೆಯಿಂದ ಎಲ್ಲಾ ರೀತಿಯಲ್ಲಿ ಕಾಗದ ಪತ್ರಗಳ ಕೆಲಸ ಸೇರಿ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾದರೂ, ಲಾಹೋರ್‌ನಲ್ಲಿ ಅಭಿನಂದನ್‌ರನ್ನು ತಡೆದು ಕೆಲ ಕಾಗದ ಪತ್ರಗಳ ಕೆಲಸಗಳನ್ನು ಪಾಕ್ ತಡೆ ಮಾಡಿದೆ ಎಂದು ತಿಳಿದು ಬಂದಿದೆ.ಪಾಕ್ ರ‍್ಕಾರಕ್ಕೆ ಐಎಸ್‌ಐ ಒತ್ತಡ ಹಾಕಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಕಸ್ಟಮ್ಸ್ ಮತ್ತು ವಲಸೆ ವಿಭಾಗದ ಕೆಲ ಪ್ರಕ್ರಿಯೆಗಳಲ್ಲಿ ಪಾಕ್ ಉದ್ದೇಶ ಪರ‍್ವಕವಾಗಿ ವಿಳಂಬ ತೋರಿದೆ ಎಂದು ವರದಿಯಾಗಿದೆ.
ಪಾಕ್ ಹಿಡಿತದಲ್ಲಿದ್ದ ತಮ್ಮ ವೀರಪುತ್ರ ಅಭಿನಂದನ್ ಶುಕ್ರವಾರ ಸಂಜೆ ಬಿಡುಗಡೆಗೊಳ್ಳುವುದು ಖಚಿತವಾಗುತ್ತಿದ್ದಂತೆ ಅವರನ್ನು ಎದುರುಗೊಳ್ಳಲು ಅವರ ಪಾಲಕರು ಶುಕ್ರವಾರ ಬೆಳಗ್ಗೆ ಚೆನ್ನೈನಿಂದ ವಿಮಾನದಲ್ಲಿ ಹೊರಟು ನವದೆಹಲಿ ತಲುಪಿದರು. ಬಳಿಕ ನವದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಲೇ ಪೈಲಟ್ ಅಭಿನಂದನ್ ಪಾಲಕರು ವಿಮಾನದಲ್ಲಿರುವ ಕುರಿತು ಪ್ರಕಟಿಸಿದರು. ತಕ್ಷಣವೇ ಎದ್ದು ನಿಂತ ಇತರೆ ಪ್ರಯಾಣಿಕರು, ಚಪ್ಪಾಳೆ ತಟ್ಟುತ್ತಾ ವಿಮಾನದಿಂದ ಮೊದಲಿಗೆ ಕೆಳಗಿಳಿಯಲು ಅವರಿಗೆ ಅವಕಾಶ ಮಾಡಿಕೊಟ್ಟು ಗೌರವಿಸಿದರು. ಪ್ರಯಾಣಿಕರು ತಮಗೆ ಸಲ್ಲಿಸಿದ ಗೌರವ ವಂದನೆಯನ್ನು ವಿನಮ್ರವಾಗಿ ಸ್ವೀಕರಿಸಿದ ಅಭಿನಂದನ್ ಪಾಲಕರು ವಿಮಾನವಿಳಿದು ಅಮೃತಸರದ ಅಟ್ಟಾರಿ-ವಾಘಾ ಗಡಿಯತ್ತ ತೆರಳಿದರು.
Discussion about this post