ಡೆಡ್ ಸೀ (ಮೃತ ಸಮುದ್ರ) ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶದಿಂದ ಕೂಡಿದ ಸರೋವರ ಡೆಡ್ಸೀ ಇರುವುದು ಜೋರ್ಡಾನ್, ಇಸ್ರೇಲ್ ಮತ್ತು ಪ್ಯಾಲೆಸ್ತೇನ್ನ ವೆಸ್ಟ್ ಬ್ಯಾಂಕ್ನ ಗಡಿಯಲ್ಲಿ. ಡೆಡ್ಸೀ ದಡವು ಸಮುದ್ರ ಮಟ್ಟದಿಂದ 1407 ಅಡಿ ಕೆಳಗಿದೆ.
ಭೂಮಿಯ ಮೇಲೆ ಸಮುದ್ರ ಮಟ್ಟಕ್ಕಿಂತ ತೀರಾ ಕೆಳಗಿರುವ ಪ್ರದೇಶ ಈ ಡೆಡ್ ಸೀ. ಈ ಸರೋವರವು 997 ಅಡಿ ಆಳವಿದ್ದು ಶೇ. 34.11 ಲವಣಾಂಶದಿಂದ ಕೂಡಿದೆ. ಇದು ಅತಿ ಹೆಚ್ಚು ಆಳದ ಅತಿ ಹೆಚ್ಚು ಲವಣಾಂಶದಿಂದ ಕೂಡಿದ ಭೂಮಿಯ ಮೇಲಿನ ಸರೋವರ.
ಇನ್ನುಳಿದಂತೆ ಅಂಟಾರ್ಟಿಕಾದ ಲೇಕ್ ವಾಂಡನಾ (ಶೇ. 35 ಲವಣಾಂಶ), ಜಿಚಾತಿಯ ಲೇಕ್ ಅಸಲ್ (ಶೇ.34.8) ಅತಿ ಹೆಚ್ಚು ಲವಣಾಂಶದಿಂದ ಕೂಡಿದ ಸರೋವರಗಳು. ಸುತ್ತಲೂ ಭೂಮಿಯಿಂದ ಅವೃತವಾಗಿರುವ ಈ ಸರೋವರದ ಪ್ರಮುಖವಾದ ನೀರಿನ ಸೆಲೆ ಜೋರ್ಡಾನ್ ನದಿ. ಇಲ್ಲಿ ನೀರಿನ ಸಾಂದ್ರತೆಯ 1.24 ಕೆಜಿ/ ಲೀಟರ್ ಇದೆ. ಮತ್ತು ಹಾಗಾಗಿ ಇಲ್ಲಿ ಮನುಷ್ಯರು ನೀರಿನ ಮೇಲೆ ತೇಲುತ್ತಾರೆ. ಇದೇ ಈ ಸರೋವರ (ಹಲವಾರು ಬಾರಿ ಸಮುದ್ರ ಎಂದು ಹೇಳಲಾಗುತ್ತದೆ) ವಿಶೇಷತೆ.
ಡೆಡ್ ಸೀಯು ಸಮುದ್ರಕ್ಕಿಂತ 8.6 ಪಟ್ಟು ಹೆಚ್ಚು ಉಪ್ಪಿನಂಶದಿಂದ ಕೂಡಿದೆ. ಇತಂಹ ವಾತಾವರಣದಲ್ಲಿ ಜಲಚರಗಳೂ ಬದುಕುವುದು ತುಂಬಾ ಕಷ್ಟ. ಮೀನು ಇನ್ನಿತರೆ ಜಲಚರಗಳು ಇಲ್ಲಿ ಕಾಣಲಾಗುವುದಿಲ್ಲ. ಹಾಗಿದ್ದಾಗ್ಯೂ, ಕೆಲವು ಬಗೆಯ ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳು ಇಲ್ಲಿವೆ. ಇತ್ತೀಚಿನ ದಿನ ಗಳಲ್ಲಿ ಡೆಡ್ಸೀ ಆರೋಗ್ಯ ಕುರಿತಾದ ರಿಸರ್ಚ್ ಮತ್ತು ಟ್ರೀಟ್ಮೆಂಟ್ಗಳಿಗೆ ಪ್ರಮುಖ ತಾಣವಾಗಿದೆ.
ನೀರಿನ ಲವಣಾಂಶ, ಮಾಲಿನ್ಯವಾಗದ ವಾತಾವರಣ, ಅತಿ ಕಡಿಮೆ ಸೂರ್ಯನ ಅತಿ ನೇರಳೆ ಕಿರಣಗಳು, ಅತಿ ಹೆಚ್ಚು ವಾತಾವರಣದಲ್ಲಿ ಒತ್ತಡ ಎಲ್ಲವೂ ಸಹ ಈ ಜಾಗವನ್ನು ಅರೋಗ್ಯಕ್ಕೆ ಸಂಬಂಧಪಟ್ಟ ಚಿಕಿತ್ಸೆ ಮತ್ತು ಸಂಶೋಧನೆಗೆ ಉತ್ತಮವಾದ ಸ್ಥಳವನ್ನಾಗಿಸಿದೆ.
ಕಿಂಗ್ ಡೇವಿಡ್ ಈ ಪ್ರದೇಶದಲ್ಲಿ ಇದ್ದ ಬಗ್ಗೆ ಬೈಬಲ್ಲಿನಲ್ಲಿಯೂ ಸಹ ಉಲ್ಲೇಖವಿದೆ. ಈಜಿಪ್ಟಿನ ಮಮ್ಮಿಗಳ ತಯಾರಿಕೆಯಲ್ಲಿ ಮತ್ತು ಇಲ್ಲಿ ಸಿಗುವ ಪೊಟ್ಯಾಷನ್ನು ಗೊಬ್ಬರವಾಗಿ ಉಪಯೋಗಿಸುತ್ತಿದ್ದ ಬಗ್ಗೆ ಉಲ್ಲೇಖವಿದೆ.
Discussion about this post