ಇತ್ತೀಚಿನ ದಿನಗಳಲ್ಲಿ ಭಾರತೀಯರ ಕೆರಿಬಿಯನ್ ನಾಡಿಗೆ ಬಂದ ದಿನವನ್ನು ಆಚರಿಸುತ್ತಿದ್ದಾರೆ. 1995ರಿಂದ ಜಮೈಕಾ ‘ಓಲ್‌ಡ್ ಹಾರ್ಬರ್ ಡೇನಲ್ಲಿ (Arrival of Indians) ‘ಭಾರತೀಯದ ಆಗಮನ’ ದಿನವನ್ನಾಗಿ ಪ್ರತಿ ಮೇ 13ರಂದು ಆಚರಿಸುತ್ತಾ ಬಂದಿದ್ದಾರೆ.
2003ರಲ್ಲಿ ಮಾರ್ಟಿನಿಕ್ ಮತ್ತು 2004ರಲ್ಲಿ ಗುಡ್‌ಲೋಪ್ ದೇಶಗಳು ಭಾರತೀಯರು ಕೆರೆಬಿಯನ್‌ಗೆ ಆಗಮಿಸಿದ 150ನೆಯ ವರ್ಷಾಚರಣೆಯನ್ನು ಸಂಭ್ರಮದಿಂದ ನಡೆಸಿದರು. ಈ ಆಚರಣೆಗಳು ಕೇವಲ ಭಾರತೀಯರ ಕೆರಿಬಿಯನ್‌ಗೆ ಬಂದ ಸ್ಮರಣೆಗೆ ಮಾತ್ರವಲ್ಲದೆ, ಅಲ್ಪಸಂಖ್ಯಾತರಾಗಿದ್ದ ಭಾರತೀಯರು ಅಲ್ಲಿನ ಸಂಸ್ಕೃತಿಯಲ್ಲಿ ಬೆರೆತು, ಸಮಾಜ ವಿವಿಧ ಭಾಗಗಳಲ್ಲಿ ಅಂದರೆ, ಕೃಷಿ, ವಿದ್ಯಾಭ್ಯಾಸ, ರಾಜಕೀಯ ಹೀಗೆ ಹತ್ತು ಹಲವು ರೀತಿಯಲ್ಲಿ ಅಲ್ಲಿನ ದೇಶದ ಏಳ್ಗಿಗೆ ದುಡಿದ ಭಾರತೀಯರು ಗೌರವಿಸುವ ಕಾರ್ಯಕ್ರಮವಾಗಿತ್ತು.
ಕೇವಲ ಒಂದು ಗುಂಪು, ಹಲವು ಜನ ಒಟ್ಟು ಸೇರಿ ಮಾಡಿದ ಕಾರ್ಯಕ್ರಮವಲ್ಲ ಇದು, ಬದಲಿಗೆ ಫ್ರೆಂಚ್ ಅಧಿಕಾರಿಶಾಹಿಯಿಂದ ಅಧಿಕೃತವಾಗಿ ಭಾರತೀಯರ ಶ್ರಮವನ್ನು ಗೌರವಿಸುವ ಆಚರಣೆಯಾಗಿತ್ತು.
ಸೇಂಟ್ ಲೂಸಿಯಾ ಮತ್ತು ಇತರೆ ಕೆರಿಬಿಯನ್ ದ್ವೀಪಗಳು ಸಹ ಭಾರತೀಯರ ಆಗಮನ ದಿನವನ್ನು ಆಚರಿಸುತ್ತಾ ಬಂದಿದೆ. ಮೇ 5 ರಿಂದ ಗಯಾನಾದಲ್ಲಿ, ಮೇ 10ರಂದು ಜುಮೈಕಾದಲ್ಲಿ, ಮೇ 30ರಂದು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ, ಜೂನ್ 1ರಂದು ಸೇಂಟ್ ವಿನ್ಸೆಂಟ್‌ನಲ್ಲಿ ಮತ್ತು ಜೂನ್ 5ರಂದು ಸುರಿನಾಮ್‌ನಲ್ಲಿ ಭಾರತೀಯರ ಆಗಮನ ದಿನವನ್ನು ಆಚರಿಸಲಾಗುತ್ತಿದೆ. ಸೇಂಟ್ ಲೂಸಿಯಾದಲ್ಲಿ ಮೇ 6ನ್ನು ಇಂಡೋ-ಕೆರಿಬಿಯನ್ ಹೆರಿಟೇಜ್ ದಿನವನ್ನಾಗಿ ಆಚರಿಸಲಾಗುತ್ತದೆ.
(ಮುಂದುವರೆಯುವುದು)
Discussion about this post