2011ರ ಜನಗಣತಿಯಂತೆ 2,40,100 ಹಿಂದೂಗಳಿದ್ದಾರೆ. 2000ರ ಜನ ಗಣತಿಯಗೆ ಹೋಲಿಸಿದಾಗ ಶೇ. 4.3 ಪ್ರತಿಶತ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ. ಬಹಳ ಮುಂಚಿನಿಂದಲೂ ಭಾರತೀಯರನ್ನು ಮುಖ್ಯವಾಗಿ ಹಿಂದೂಗಳನ್ನು ವಿರೋಧಿಸುವ ಮನೋಭಾವ ಹಲವು ಗುಂಪುಗಳಲ್ಲಿದೆ. ಹಿಂದೂಗಳನ್ನು ಹಿಂದುಳಿದ ಅನಾಗರಿಕರಂತೆ ಚಿತ್ರಿಸುವ ಪ್ರಯತ್ನವು ಎಗ್ಗಿ ಲ್ಲದೆ ಸಾಗಿತ್ತು ಮತ್ತು ಇಂದಿಗೂ ಒಂದು ಮಟ್ಟಕ್ಕೆ ಅದು ಮುಂದುವರೆದಿದೆ.
1986ರ ಸಾರ್ವತ್ರಿಕ ಚುನಾವಣೆಯ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಗವದ್ಗೀತೆ ಮತ್ತು ಕುರಾನ್‌ನ್ನು ಉಪಯೋಗಿಸದಂತೆ ನೋಡಿಕೊಳ್ಳಲಾಯಿತು ಮತ್ತು ಅಧ್ಯಕ್ಷರ ಪ್ರಮಾಣ ವಚನದಲ್ಲಿ ಸಹ ಹಿಂದೂ ಧರ್ಮಗ್ರಂಥಕ್ಕೆ ಅವಕಾಶವಿಲ್ಲದಾಯಿತು. ಇದನ್ನು ಅಲ್ಪಸಂಖ್ಯಾತ ಭಾರತೀಯ ಹಿಂದೂಗಳಿಗೆ ಮತ್ತು ಧರ್ಮಕ್ಕೆ ಮಾಡಿದ ಅವಮಾನ ಎಂದೇ ಪರಿಗಣಿಸಲಾಯಿತು.
ತದನಂತರ ನಡೆದ ಪ್ರತಿಭಟನೆಗಳ ಫಲವಾಗಿ ಭಾರತೀಯರನ್ನು ಗೌರವದಿಂದ ಕಾಣುವ ವಾತಾವರಣ ಸ್ವಲ್ಪಮಟ್ಟಿಗೆ ಸೃಷ್ಟಿ ಯಾಯಿತು. ಈ ನಡುವೆ ಇವಾಂಜೆಲಿಕಲ್ ಮತ್ತು ಪೆಂಟಾಕೋಸ್ಟಲ್ ಕ್ರೈಸ್ತ ಮಿಷನರಿ ಗಳು ಹಿಂದೂಗಳನ್ನು ಮತಾಂತರ ಮಾಡುವ ಕಾರ್ಯಕ್ಕೆ ಕೈಹಾಕಿದ ನಂತರ ಇಂಡೋ – ಟ್ರೆನಿಕಾಡಿಯನ್ ಹಿಂದೂ ಗುಂಪುಗಳಿಗೆ ಮತ್ತು ಆಫ್ರೋ-ಬ್ರಿನಿಡಾಡಿ ಯನ್ ಗುಂಪುಗಳ ನಡುವೆ ದ್ವೇಷದ ವಾತಾವರಣ ಸೃಷ್ಟಿಯಾಗಿದೆ.
ಗಯಾನಾದಂತೆ ಬ್ರಿನಿಡಾಡ್‌ನಲ್ಲೂ ಜಾತಿಪದ್ಧತಿಯ ಸೋಂಕಿಲ್ಲ. ಆದರೆ ಒಟ್ಟಾರೆ ಹಿಂದೂಗಳ ಏಳಿಗೆಗೆ, ಪರಧರ್ಮೀಯರ ದಾಳಿಯನ್ನು ಸಂಘಟಿತರಾಗಿ ಎದುರಿಸಲಿಕ್ಕೆ ಸನಾತನ ಧರ್ಮ ಮಹಾಸಭಾ ಎಂಬ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಧರ್ಮ ಜಾಗೃತಿಗಾಗಿ ಈ ಸಂಸ್ಥೆ ಸ್ಥಾಪನೆಯಾದರೂ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಮತ್ತು ಅವರಲ್ಲಿ ಧರ್ಮಪ್ರಜ್ಞೆ ಮೂಡಿಸುವುದು ಅವರ ಆದ್ಯತೆಯ ವಿಷಯಾಗಿದೆ.
1952ರಲ್ಲಿ ಸೆಂಟ್ ಆಗಸ್ಟಿನನ್ನು ಕೇಂದ್ರಸ್ಥಾನವನ್ನಾಗಿರಿಸಿಕೊಂಡು ಭಡಸೆಸಗನ್ ಮರಾಜ್‌ರಿಂದ ಸ್ಥಾಪನೆಯಾದ ಈ ಸಂಸ್ಥೆ ಇಂದು ದೇಶಾದ್ಯಂತ 150 ದೇವಾಲಯಗಳನ್ನು 50 ಶಾಲೆಗಳನ್ನು ಮತ್ತು ತನ್ನದೇ ಆದ ರೇಡಿಯೋ ಜಾಗೃತಿ 120.7 fm ನ್ನು (Radio jaagriti 120.7fm) ಹೊಂದಿದೆ. ಇದರ ಅಧೀನ ಸಂಸ್ಥೆ ‘ಪಂಡಿಕ್‌ಸ್ ಪರಿಷದ್’ನಲ್ಲಿ 200 ಜನ ಪಂಡಿತರ ಸಮೂಹವಿದೆ.
(ಮುಂದುವರೆಯುವುದು)
Discussion about this post