No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Monday, May 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-20: ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪುನರ್ಜನ್ಮ-2

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 20, 2018
in ದಕ್ಷ
0
Share on FacebookShare on TwitterShare on WhatsApp

ನಾನು ನೀರಿಗೆ ಬಿದ್ದ ರೀತಿ ನೋಡಿಯೇ ಡಾ.ಸುಬ್ಬಯ್ಯ ಅಪಾಯ ಅರಿತಿದ್ದರಂತೆ, ನಾನು ಒಮ್ಮೆ ಮೇಲಕ್ಕೆ ಬಂದು ಚಡಪಡಿಸುತ್ತ ಕೆಳಕ್ಕೆ ಹೋಗುತ್ತಿದ್ದಂತೆ ಅವರು ಉಳಿದವರನ್ನು ಎಚ್ಚರಿಸಿ, ಸಹಾಯಕ್ಕಾಗಿ ಮೊರೆ ಇಟ್ಟರಂತೆ. ಅಲ್ಲಿದ್ದ ನೂರಾರು ಜನ ಈಜು ನಿಲ್ಲಿಸಿ ಬೊಬ್ಬೆ ಹೊಡೆಯಲಾರಂಭಿಸಿದರೂ, ಆಳಕ್ಕೆ ಇಳಿದು ನನ್ನನ್ನು ರಕ್ಷಿಸುವ ಧೈರ್ಯವನ್ನೂ ಯಾರೂ ತೋರಲಿಲ್ಲ.

ನಮ್ಮ ಗ್ರಹಚಾರಕ್ಕೆ ಅಲ್ಲಿಯವರೆಗೆ ಅಲ್ಲಿಯೇ ಇದ್ದ ಹರೀಶ್ ಬಾತ್‌ಕೋಟ್ ಧರಿಸಿಕೊಂಡು ಸ್ನೇಹಿತರ ಜತೆ ಟೀ ಕುಡಿಯಲು ಹೊರಟಿದ್ದರು. ಆದರೆ ಸ್ವಿಮ್ಮಿಂಗ್‌ಪೂಲ್‌ನಿಂದ ಆರ್ತನಾದ ಕೇಳಿ ಬರುತ್ತಿದ್ದುದರಿಂದ ಅವರು ಓಡೋಡಿ ಬಂದು, ನಾನು ಕೊನೆಯ ಬಾರಿ ಮುಳುಗಿದ ಸ್ಥಳ ಕೇಳಿಕೊಂಡು ನೀರಿಗೆ ಧುಮುಕಿದರಂತೆ, ತಳಪೂರ್ತಿ ಹುಡುಕಾಡಿ ನಾನೆಲ್ಲೂ ಕಾಣಸಿಗದೆ ಮೇಲಕ್ಕೆ ತೇಲಿ ಜೋರಾಗಿ ಉಸಿರೆಳೆದುಕೊಂಡು ಕೊನೆಯ ಪ್ರಯತ್ನವೆಂಬಂತೆ ಮತ್ತೊಮ್ಮೆ ಮುಳುಗಿದರಂತೆ. ನನ್ನ ದೇಹ ಎಲ್ಲೂ ಕಾಣಿಸದೆ ಸುಸ್ತಾಗಿ ಮೇಲೆ ಬರಬೇಕು ಎನ್ನುವಷ್ಟರಲ್ಲಿ ನಾನು ಧರಿಸಿದ್ದ ಹಳದಿ ಸ್ವಿಮ್ಮಿಂಗ್ ಚೆಡ್ಡಿ ಗೋಚರಿಸಿ ಅತ್ತ ಧಾವಿಸಿದರಂತೆ.

ನಿಸ್ತೇಜವಾಗಿ ಬಿದ್ದಿದ್ದ ನನ್ನ ದೇಹ ಕಂಡು. ಚೆಡ್ಡಿಯ ಬೆಲ್‌ಟ್ ಹಿಡಿದು ಮೇಲಕ್ಕೆ ಎಳೆದು ತಂದರಂತೆ. ಉಸಿರಾಟ ನಿಂತುಹೋಗಿ, ನನ್ನ ಮೈಯೆಲ್ಲ ಕಪ್ಪಗಾಗಿತ್ತಂತೆ ಡಾ. ಸುಬ್ಬಯ್ಯ ಅವರು ತಕ್ಷಣ ನನ್ನನ್ನು ಬೋರಲು ಮಲಗಿಸಿ ಹೊಟ್ಟೆಯನ್ನು ಪ್ರೆಸ್ ಮಾಡಿ ನೀರನ್ನು ಹೊರತೆಗೆದರಂತೆ, ಒಮ್ಮೆ ಕಣ್ಣು ಬಿಟ್ಟ ನಾನು, ಸುತ್ತ ಸೇರಿದ್ದ ನೂರಾರು ಜನರನ್ನು ನೋಡಿ ಮತ್ತೆ ಪ್ರಜ್ಞೆ ತಪ್ಪಿದೆನಂತೆ! ಅಷ್ಟರಲ್ಲಿ ಯಾರೋ ಸೀಮೆ ಎಣ್ಣೆ ತಂದು ನನ್ನ ಮೈಕೈಗೆಲ್ಲ ಉಜ್ಜಿ, ಕಂಬಳಿ ಹೊದಿಸಿ ಬಿಸಿ ಮಾಡಿದರಂತೆ. ಆಗ ಪ್ರಜ್ಞೆ ಇಲ್ಲದ ನನ್ನನ್ನು ಕೆ.ಸಿ. ಜನರಲ್ ಆಸ್ಪತ್ರೆಯ ಐಸಿಯುಗೆ ಸೇರಿಸಿದರಂತೆ.

ನನ್ನ ಬ್ಯಾಚ್‌ಮೇಟ್ ಶ್ರೀಮತಿ ಆಂಡಾಳ್ ಆಗ ಮಲ್ಲೇಶ್ವರ ಠಾಣೆಯಲ್ಲಿ ಮಹಿಳಾ ಎಸ್‌ಐ ಆಗಿ ಪ್ರೊಬೆಷನರಿಯಲ್ಲಿದ್ದರು. ಹೆಚ್ಚಾಗಿ ಅವರು ದೈನಂದಿನ ಆಸ್ವಾಭಾವಿಕ ಸಾವಿನ ಪ್ರಕರಣಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಈಜುಕೊಳದಲ್ಲಿ ಮುಳುಗಿ ಯಾವುದೋ ಯುವಕ ಸತ್ತಿದ್ದಾನೆ ಎಂಬ ಸುದ್ದಿ ಕೇಳಿ ಅವರು ಆಸ್ಪತ್ರೆಗೆ ಓಡಿ ಬಂದಿದ್ದರು. ಯುಡಿಆರ್ ಫಾರ್ಮ್ ಭರ್ತಿ ಮಾಡುತ್ತ, ಸತ್ತ ವ್ಯಕ್ತಿಯ ಹೆಸರು ಅಶೋಕ್, 27 ವರ್ಷ ಎಂದು ಬರೆದು, ಈತನ ತಂದೆಯ ಹೆಸರೇನು ಎನ್ನುವುದು ಗೊತ್ತಾಗದೆ ಅವರಿವರಲ್ಲಿ ಕೇಳಿಕೊಂಡು ಓಡಾಡುತ್ತಿದ್ದರಂತೆ! ಅಷ್ಟರಲ್ಲಿ ಅಲ್ಲಿಗೆ ಬಂದ ಇತರ ಪೊಲೀಸರು, ‘ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿದವರು ಚಾಮರಾಜಪೇಟೆ ಪ್ರೊಬೆಷನರಿ ಎಸ್‌ಐ ಅಶೋಕ್‌ಕುಮಾರ್ ಮೇಡಂ,’ ಎಂದಾಗ ಅವರು ಹೌಹಾರಿದರಂತೆ! ‘ಅವರು ಸತ್ತಿಲ್ಲ ಮೇಡಂ, ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ,’ ಎಂದಾಗ ಮತ್ತಷ್ಟು ತಬ್ಬಿಬ್ಬಾದರಂತೆ!

ಮುಂದೆ 1988ರಲ್ಲಿ, ನೀರಿನಲ್ಲಿ ಮುಳುಗಿದ್ದ ಮಹಿಳೆ ಮತ್ತು ಆಕೆಯ ಒಂದೂವರೆ ವರ್ಷದ ಮಗುವನ್ನು ರಕ್ಷಿಸುವ ಸವಾಲು ನನಗೆ ಎದುರಾಗಿತ್ತು. ಅವತ್ತು ನಾವು ಶ್ರೀರಾಂಪುರ ಕಿಟ್ಟಿ ಎಂಬ ರೌಡಿಯನ್ನು ನೆಲಮಂಗಲದಲ್ಲಿ ಹಿಡಿದು ಬೆಳಗಿನ ಜಾವ ವೈಯಾಲಿಕಾವಲ್ ಠಾಣೆಗೆ ಕರೆದುಕೊಂಡು ಬಂದಿದ್ದೆವು. ನೊಂದ ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಗಂಡು ಮಗುವಿನ ಜತೆ ಪ್ಯಾಲೇಸ್‌ಗುಟ್ಟಹಳ್ಳಿ ಬಳಿಯ ಸುಮಾರು 40 ಅಡಿ ಆಳದ ಬಾವಿಗೆ ಹಾರಿದ್ದಳು. ನೂರಾರು ಜನ ಆ ಬಾವಿಯ ಸುತ್ತ ಸೇರಿ ಹಾಹಾಕಾರ ಎಬ್ಬಿಸುತ್ತಿದ್ದರೇ ಹೊರತು ಯಾರೋಬ್ಬರೂ ಬಾವಿಗೆ ಇಳಿಯುವ ಧೈರ್ಯ ತೋರಲಿಲ್ಲ. ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತಾದರೂ ಅವರು ಬರುವಷ್ಟರಲ್ಲಿ ಜೀವ ಹೋಗುವ ಸಾಧ್ಯತೆ ಇತ್ತು. ಹಾಗಾಗಿ ನಾನು ತಡ ಮಾಡದೆ ಯೂನಿಫಾರ್ಮ್, ಶೂ, ಜರ್ಕಿನ್ ಸಮೇತ ಹಗ್ಗದ ಸಹಾಯದಿಂದ ಬಾವಿಗಿಳಿದೆ.

ಮುಳುಗಿದ್ದ ಮಹಿಳೆ ಮತ್ತು ಮಗುವನ್ನು ನೀರಿನಲ್ಲಿ ಎತ್ತಿ ಹಿಡಿದುಕೊಂಡೆ. ಮತ್ತೊಂದು ಜೋಡುಹಗ್ಗದ ಸಹಾಯದಿಂದ ಅವರಿಬ್ಬರನ್ನು ಮೇಲಕ್ಕೆ ಎಳೆದುಕೊಳ್ಳಲಾಯಿತು. ಆದರೆ ಅದು ಪಾಳುಬಾವಿಯಾಗಿದ್ದ ಕಾರಣ ವಿಷಾನಿಲ ಆವರಿಸಿ ನನಗೆ ಉಸಿರುಕಟ್ಟಲಾರಂಭಿಸಿತು. ಹಗ್ಗ ಹಿಡಿದುಕೊಂಡು ಅರ್ಧ ಮಟ್ಟಕ್ಕೆ ಏರುವಷ್ಟರಲ್ಲಿ ನಿಶ್ಯಕ್ತನಾಗಿಬಿಟ್ಟೆ. ಮೇಲಿದ್ದವರೇ ಹಗ್ಗ ಎಳೆಯಬೇಕಾಯಿತು. ಅಸ್ವಸ್ಥನಾಗಿ ಬಿದ್ದ ನನ್ನನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಲಾಯಿತು. ಕಾಕತಾಳಿಯವೆಂದರೆ, ಹಿಂದೆ ನಾನು ಈಜುಕೊಳದಲ್ಲಿ ಮುಳುಗಿದ್ದಾಗ ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ನಾನು ನೀರಿನಿಂದ ಮೇಲಕ್ಕೆತ್ತಿದ ಮಹಿಳೆಯೇನೋ ಬದುಕುಳಿದಳು. ಆದರೆ ಆಕೆಯ ಮಗು ಬದುಕುಳಿಯಲಿಲ್ಲ ಎಂಬ ಸುದ್ದಿ ತಿಳಿದು ದನಾನು ದುಃಖಿತನಾಗಿದ್ದೆ.

ಈಜುಕೊಳದ ಹರೀಶ್ ಮತ್ತು ನನ್ನ ಭಾವ ಡಾ.ಸುಬ್ಬಯ್ಯ ಅವರು ನನ್ನ ಪಾಲಿಗೆ ಪ್ರಾಣದಾತರು. ಬೇಸರದ ಸಂಗತಿ ಎಂದರೆ, ಪಾಣದ ಹಂಗು ತೊರೆದು ನನ್ನ ಜೀವ ಕಾಪಾಡಿದ ಈಜುಕೊಳದ ಕೋಚ್ ಹರೀಶ್ ಸಣ್ಣ ಪ್ರಾಯದಲ್ಲೇ ದಾರುಣವಾಗಿ ತೀರಿಕೊಂಡರು. ನನ್ನ ಜತೆ ಈಜಲು ಬಂದಿದ್ದ ದೇವಯ್ಯ ಕರ್ತವ್ಯದಲ್ಲಿರುವಾಗಲೇ ಅಪಘಾತಕ್ಕೆ ಬಲಿಯಾದರು.

Tags: Bangalore PoliceBullet SavariDakshaKalpa NewsSwimming PoolTiger BB Ashok Kumar
Share196Tweet123Send
Previous Post

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-3

Next Post

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಹೊಸ ಸೂರ್ಯ ಉದಯಿಸುತ್ತಾನೆ | ಪ್ರಧಾನಿ ನರೇಂದ್ರ ಮೋದಿ

ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಹೊಸ ಸೂರ್ಯ ಉದಯಿಸುತ್ತಾನೆ | ಪ್ರಧಾನಿ ನರೇಂದ್ರ ಮೋದಿ

May 4, 2026
ಆಗುಂಬೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು | ಅಪಾಯದಿಂದ ಪಾರು

ಆಗುಂಬೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು | ಅಪಾಯದಿಂದ ಪಾರು

May 4, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಸಾರ್ವಜನಿಕ ಉದ್ಯಮಗಳ ಸಮಿತಿಗೆ ಸಂಸದ ಬಿ.ವೈ. ರಾಘವೇಂದ್ರ ಸತತ ಮೂರನೇ ಬಾರಿಗೆ ಆಯ್ಕೆ

May 4, 2026
ವಿಜಯ್’ಗಾಗಿ ತಿರುಪತಿಯಲ್ಲಿ ಪೂಜೆ ಮಾಡಿಸಿದ ನಟಿ ತ್ರಿಶಾ ಟಿವಿಕೆ ಸಂಪುಟದಲ್ಲಿ ಡಿಸಿಎಂ?

ವಿಜಯ್’ಗಾಗಿ ತಿರುಪತಿಯಲ್ಲಿ ಪೂಜೆ ಮಾಡಿಸಿದ ನಟಿ ತ್ರಿಶಾ ಟಿವಿಕೆ ಸಂಪುಟದಲ್ಲಿ ಡಿಸಿಎಂ?

May 4, 2026
ಬೇಸಿಗೆ ರಜೆ | ಬೆಂಗಳೂರಿನಿಂದ ಕಾನ್ಪುರ, ಚೆನ್ನೈ ನಗರಗಳಿಗೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

ಯಶವಂತಪುರ-ವಿಜಯಪುರ, ಸಿಂಧನೂರು, ಹಿಂದೂಪುರ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

May 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL