ಅಡುಗೆ ತಯಾರಿಸುವುದರಿಂದ ತನ್ನ ತಂದೆಗೆ ಸ್ನಾನ ಮಾಡಿಸುವವರೆಗೂ ಎಲ್ಲಾ ಹೊಣೆಯು ಈಕೆಯ ಮೇಲಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಲೋಟಸ್ ಔಚರೀಚ್ ಸಂಸ್ಥೆಯು ತನ್ನ ಕಾರ್ಯಕ್ರಮದ ಮೂಲಕ ಈಕೆಗೆ ಬೆನ್ನೆಲುಬಾಗಿ ನಿಂತಿದೆ. ಲ್ಯಾಂಡ್‌ಮೈನ್‌ನಿಂದ ಬಾಧಿತ ವಿದ್ಯಾರ್ಥಿನಿಯರ ಸಹಾಯಕ್ಕಾಗಿ Girls access to education (GATE) ಮೂಲಕ ಸ್ಕಾಲರ್‌ಶಿಪ್ ನೀಡುತ್ತಿದೆ.
ಪುಸ್ತಕ, ಯೂನಿಫಾರ್ಮ್, ಶಾಲೆ ಖರ್ಚು ವೆಚ್ಚ ಭರಿಸುವ ಜೊತೆಗೆ ಆಕೆಯ ಕುಟುಂಬಕ್ಕೆ ಪ್ರತಿ ತಿಂಗಳು ತಿಂಗಳಿಗೆ ಸಾಕಾಗುವಷ್ಟು ಅಕ್ಕಿಯನ್ನು ನೀಡುತ್ತಿದೆ. ಟುವಾನ್ ಚೆನ್ನಾಗಿ ಓದಿ ವಿದ್ಯಾವಂತಳಾಗಬೇಕೆಂದು ಆಸೆ ಪಡುತ್ತಿದ್ದಾರೆ ಮತ್ತು ಲೋಟಸ್ ಔಚರೀಚ್‌ನ ಸ್ಕಾಲರ್‌ಶಿಪ್ ಮತ್ತು ಆಹಾರ ಧಾನ್ಯದ ಸಹಾಯದ ಹೊರತಾಗಿ ತನ್ನ ಮಗಳು ವಿದ್ಯಾವಂತಳಾಗುವುದು ಕಷ್ಟ ಎಂದು ಲೋಟಸ್ ಔಚರೀಚ್‌ನ ಸಹಾಯವನ್ನು ನೆನೆಯುತ್ತಾರೆ.
ಮತ್ತೊಂದು ಉದಾಹರಣೆ ನೋಡುವುದಾದರೆ, ‘ಟಮ್ ಸಾಕ್ಫೇಕ್’ನ ತಂದೆಗೆ 7 ಜನ ಮಕ್ಕಳು. ಅದರಲ್ಲಿ ಒಂದು ಅದಾಗಲೇ ಡೆಂಘಿ ಜ್ವರಕ್ಕೆ ಬಲಿಯಾಗಿತ್ತು. ಉಳಿದ ಮಕ್ಕಳಿಗೆ ಆಹಾರ ತರುವ ಸಲುವಾಗಿ ಅಲೆಯುವಾಗ ಸಿಡಿದ ಲ್ಯಾಂಡ್‌ಮೈನ್‌ನಿಂದಾಗಿ ಆತನ ಕಾಲು ಸಂಪೂರ್ಣ ಛಿದ್ರಗೊಂಡಿತ್ತು.
ಇಡೀ ಕುಟುಂಬಕ್ಕೆ ಆಹಾರವಿಲ್ಲದೆ ನರಳುವ ಪರಿಸ್ಥಿತಿಯಲ್ಲಿದ್ದಾಗ ಇದೇ ಲೋಟಸ್ ಔಚರೀಚ್ ಅವರ ನೆರವಿಗೆ ಬಂದಿತು. ಪ್ರತಿ ತಿಂಗಳು 55 ಡಾಲರ್ ($55) ಮಾಸಾಶನ ನೀಡುತ್ತಿದೆ ಮತ್ತು 25 ಡಾಲರನ್ನು ($25) ಅಕ್ಕಿ ಖರೀದಿಸಲು ನೀಡುತ್ತಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಸಾಕ್ಫೇಕ್ 47 ವಿದ್ಯಾರ್ಥಿಗಳ 3ನೆಯ ರ‌್ಯಾಂಕ್ ಪಡೆಯುತ್ತಿದ್ದಾಳೆ.
(ಮುಂದುವರೆಯುವುದು)
Discussion about this post