ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-7 |

ನನ್ನ ಜೀವನದಲ್ಲಿ ಇದಕ್ಕೆ ವಿಪರೀತವಾಗಿ ಉಂಟಾದ ಅನುಭವವೊಂದನ್ನು ಹಂಚಿಕೊಳ್ಳುವೆನು.
ನಾನು ಹುಟ್ಟಿ 4 ನೇ ವಯಸ್ಸಿನಲ್ಲಿ ನಾನು ಎಸ್’ಡಿಎಂ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿದೆ. 7ನೇ ತರಗತಿಯವರೆಗೂ ಅಲ್ಲಿಯೇ ಓದಿದೆ. ಆ ವೇಳೆ ಒಂದು ಸಿಹಿ ಸುದ್ದಿ ಬಂತು: ಏನೆಂದರೆ ಆನಂದವನ ಎಂಬ ಗುರುಕುಲ, ಅಲ್ಲಿ ಶಾಸ್ತ್ರ ಮತ್ತು ಶಾಸ್ತ್ರಾಂಗ ಪಾಠವು ಮಾಡುತ್ತಾರೆ ಎನ್ನುವುದಾಗಿತ್ತು. ಆ ಗುರುಕುಲಕ್ಕೆ ಸೇರಿಕೊಂಡರೆ ನೀನು ಉದ್ದಾರ ಆಗುತ್ತೀಯ ಎಂದು ನನ್ನ ತಂದೆ ತಾಯಿ ಹೇಳಿದರು. ಆದರೆ, ಅದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಯಾಕೆಂದರೆ ನಾನು ಆನಂದವನ ಗುರುಕುಲಕ್ಕೆ ಬಂದರೆ ನಾನು ದೊಡ್ಡದಾಗಿ ಶಿಖೆಯನ್ನು ಬಿಡಬೇಕು ಎಂದು ಹೇಳಿದ್ದು ಕಾರಣವಾಗಿತ್ತು.

ಇಲ್ಲಿ ಬಂದ ಮೇಲೆ ತುಂಬಾ ಚೆನ್ನಾಗಿ ಶಾಸ್ತ್ರ, ಶಾಸ್ತ್ರಾಂಗ ಪಾಠ ಹೇಳಿಕೊಟ್ಟರು. ಪ್ರಮುಖವಾಗಿ ಇಲ್ಲಿನ ಗೋವುಗಳು ನನ್ನ ಮನಸ್ಸನ್ನು ಸೂರೆಗೊಂಡವು. ಇಲ್ಲಿಗೆ ಸೇರಿದ ಮೇಲೆ ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ಈ ಗುರುಕುಲವನ್ನು ಪ್ರೀತಿಸಲು ಒಪ್ಪಿತು. ಹೀಗಾಗಿ ನಾವು ಮನಃ ಪೂರ್ವಕವಾಗಿ ಕಾರ್ಯಗಳಲ್ಲಿ ತೊಡಗಬೇಕು ನಿಜ. ಆದರೆ ಅನೇಕ ಬಾರಿ ನಾವು ಒಲ್ಲದ ಮನದಿಂದಲೂ ಒಳ್ಳೆಯ ಕಾರ್ಯದಲ್ಲಿ ತೊಡಗಿ ನಂತರ ಮನಸ್ಸು ಮುದಗೊಳ್ಳುವುದನ್ನು ಅನುಭವಿಸುತ್ತೇವೆ.
ಎಲ್ಲಕ್ಕೂ ಮನಸ್ಸಿದ್ದರೆ ಮಾರ್ಗ, ಸನ್ಮಾರ್ಗದಲ್ಲಿದ್ದರೆ ಮನಸ್ಸು…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post