ಕೆಲವೊಂದು ವೇಳೆ ಗಡಿಯಲ್ಲಿ ಪಾಕ್ ಯೋಧರು ಹಾಗೂ ಉಗ್ರರು ಹೇಗೆ ದಾಳಿ ಮಾಡುತ್ತಾರೆ ಎಂದರೆ ಅದನ್ನು ಎದುರಿಸುವುದೇ ಸವಾಲು. ಆದರೆ, ಅವರಿಗೂ ತಿಳಿಯದ ರೀತಿಯಲ್ಲಿ ನಮ್ಮ ಯೋಧರು ಸುತ್ತುವರೆದಿರುತ್ತಾರೆ ಎಂದರೆ ನೀವು ನಂಬಲೇ ಬೇಕು.
ಕಲ್ಪ ನ್ಯೂಸ್ ಪ್ರಕಾರ, ನಮ್ಮ ದೇಶದಲ್ಲಿ ಅತ್ಯಂತ ಉನ್ನತವಾದ ಗೌರವ ದೊರೆಯಬೇಕಾದ್ದು ಯಾರಿಗೆ ಗೊತ್ತಾ… ತಮ್ಮ ಜೀವವನ್ನೇ ಪಣಕ್ಕಿಟ್ಟು ನಮ್ಮನ್ನೆಲ್ಲಾ ರಕ್ಷಿಸಿ, ತಾಯಿ ಭಾರತಿಯ ಸೇವೆ ಮಾಡುತ್ತಿರುವ ಯೋಧರು..
ಭಾರತೀಯ ಸೇನೆ ಹಲವಾರು ವಿಭಾಗಗಳನ್ನು ಹೊಂದಿದೆ. ಅದರಲ್ಲಿ ಪ್ರಮುಖವಾದುದು ಗಡಿ ಭದ್ರತಾ ಪಡೆ(ಬಿಎಸ್‌ಎಫ್). ಈ ಯೋಧರು ದೇಶವನ್ನು ರಕ್ಷಿಸಲು ಎಂತೆಂತಹ ಕ್ಲಿಷ್ಟ ಪರಿಸ್ಥಿತಿಗಳನ್ನು ಎದುರಿಸಿ, ಹೋರಾಡುತ್ತಾರೆ ಎಂಬುದರ ಸಣ್ಣ ಮಾಹಿತಿ ಇಲ್ಲಿದೆ.
ಹೌದು… ಗಡಿ ಭದ್ರತಾ ಪಡೆಯೇ ಒಂದು ವಿಶೇಷ. ಅವರ ಕಾರ್ಯವೈಖರಿಯೇ ಒಂದು ರೋಚಕ… ಇವರ ದೊಡ್ಡ ಸಾಧನೆಯೇನು ಗೊತ್ತಾ? ಪಾಕಿಸ್ಥಾನ ಸೈನಿಕರು ಹಾಗೂ ಭಯೋತ್ಪಾದಕರಲ್ಲಿ ಒಬ್ಬನೇ ಒಬ್ಬ ಗಡಿಯಲ್ಲಿ ನುಸುಳದಂತೆ ತಡೆಯುವುದು. ಇವರಲ್ಲಿ ವಿಶೇಷವಾಗಿ ತರಬೇತಿ ಪಡೆದ deadly snipers ತಂಡವೊಂದರ ಯೋಧರ ಸೇವೆ ಮಾತ್ರ ಇಡಿಯ ದೇಶವೇ ತಲೆದೂಗಬೇಕಾದ್ದು.
ಈ ಬಿಎಸ್‌ಎಫ್ ಡೆಡ್ಲಿ ಸ್ನೈಪರ್ ತಂಡದ ಯೋಧರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆಂಡ್ ಟ್ಯಾಟಿಕ್‌ಸ್ ಸಂಸ್ಥೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ.
ಇಲ್ಲಿ ತರಬೇತಿ ಪಡೆದ ನೂರು ಯೋಧರಲ್ಲಿ ಓರ್ವ ಯೋಧನನ್ನು ಸ್ನೈಪರ್ ಆಗಿ ಆಯ್ಕೆ ಮಾಡಲಾಗುತ್ತದೆ. ಈ ರೀತಿ ಆಯ್ಕೆಯಾದ ಯೋಧರಿಗೆ 60 ದಿನಗಳ ಕಾಲ ಅತ್ಯಂತ ಕಠಿಣಾತಿಕಠಿಣವಾದ ತರಬೇತಿ ನೀಡಲಾಗುತ್ತದೆ.
ಸ್ನೈಪರ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಗೊತ್ತಾ?
ಅತ್ಯಂತ ಪ್ರಮುಖವಾಗಿ ಭಾರತದ ಭೂಪ್ರದೇಶದಲ್ಲಿ ಭಯೋತ್ಪಾದಕರು ಕಾರ್ಯಾಚರಿಸಬಹುದಾದ ಪ್ರದೇಶಗಳಲ್ಲಿ ಸ್ನೈಪರ್‌ಗಳು ಕಾರ್ಯ ನಿರ್ವಹಿಸುತ್ತಾರೆ. ದಟ್ಟವಾದ ಪ್ರಕೃತಿಯಿಂದ ಕೂಡಿದ ಪ್ರದೇಶದಲ್ಲಿ ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ ಶತ್ರುಗಳ ಚಲನವಲನಗಳ ಮೇಲೆ ಹದ್ದಿನಕಣ್ಣಿಡುವ ಪ್ರದೇಶಗಳನ್ನು ಇವರಿಗಾಗಿ ಆಯ್ಕೆ ಮಾಡಲಾಗುತ್ತದೆ. ಅಗತ್ಯ ಬಂದಾಗ ಶತ್ರುಗಳ ಮೇಲೆ ದಾಳಿ ಮಾಡಲು ಎಲ್ಲ ರೀತಿಯಿಂದಲೂ ಸಾಧ್ಯವಾಗಬಹುದಾದ ಪ್ರದೇಶವೂ ಇದು ಆಗಿರುತ್ತದೆ.
ಎಲ್ಲಕ್ಕೂ ಪ್ರಮುಖವಾಗಿ ಪಾಕಿಸ್ಥಾನ ಯೋಧರು ಹಾಗೂ ಭಯೋತ್ಪಾದಕರ ಕಾರ್ಯಾಚರಣೆಯ ಪ್ರದೇಶಗಳಿಗೆ ನುಗ್ಗಿ ಅವರಿಗೆ ತಿಳಿಯದಂತೆಯೇ ಶತ್ರುಗಳನ್ನು ಬೇಟೆಯಾಡುವ ವಿಶೇಷ ತರಬೇತಿ ನೀಡಲಾಗಿರುತ್ತದೆ.
ಒಂದು ಗುಂಡು-ಒಂದು ಗುರಿ (one bullet one target) ಎಂಬ ಆಧಾರದಲ್ಲಿ ಯೋಜನೆ ರೂಪಿಸುವ ಸ್ನೈಪರ್‌ಸ್, ಡೇರ್ ಅಂಡ್ ಡೆಡ್ಲಿ ಸನ್ನಿವೇಶಗಳನ್ನು ಎದುರಿಸಲು ತರಬೇತಿ ನೀಡಲಾಗಿರುತ್ತದೆ.
ಹವಾಮಾನ ಹಾಗೂ ಭೂದೃಶ್ಯ ಸನ್ನಿವೇಶಗಳು ಸ್ನೈಪರ್‌ಗಳ ಕಾರ್ಯಾಚರಣೆಯನ್ನು ತೀರಾ ಕಠಿಣಗೊಳಿಸುತ್ತವೆ. ದಟ್ಟ ಅರಣ್ಯ, ಹಿಮ ಹೊದಿಕೆಯ ದಟ್ಟ ಬೆಟ್ಟ ಪ್ರದೇಶಗಳಲ್ಲಿ ಸ್ನೈಪರ್‌ಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ಅಲ್ಲಿ ಅವರೇ ಒಂದು ವೆಪನ್ ಆಗಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಸ್ನೈಪರ್‌ಗಳು ವೀರಸ್ವರ್ಗ ಸೇರುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ.
ಈಗ ಅಮರನಾಥ ಯಾತ್ರೆ ಆರಂಭವಾಗಿದ್ದು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಭಾರತ-ಪಾಕ್ ಗಡಿ ಹಾಗೂ ಎಲ್‌ಒಸಿಯಲ್ಲಿ ನೂರಾರು ಭಯೋತ್ಪಾದಕರ ಸಂಚು ರೂಪಿಸಿ, ಸಿದ್ದವಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಈಗ ಬಿಎಸ್‌ಎಫ್‌ನ ಸ್ನೈಪರ್‌ಗಳನ್ನು ಈ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.
ಇತ್ತೀಚೆಗೆ ಗಡಿಯ ಸುಂದರ್‌ಬನಿಯಲ್ಲಿ ಸ್ನೈಪರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿಎಸ್‌ಎಫ್ ಎಸ್‌ಐ ಎಸ್.ಎನ್. ಯಾದವ್ ಹಾಗೂ ಕಾನ್ಸಟೇಬಲ್ ವಿ. ಪಾಂಡೆ ಪಾಕ್ ಯೋಧರ ಗುಂಡಿಗೆ ವೀರಸ್ವರ್ಗ ಸೇರಿದ್ದರು.
Discussion about this post