ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬೆಂಗಳೂರಿನ ಜಯನಗರದ ಐದನೆಯ ಬಡಾವಣೆಯಲ್ಲಿರುವ ದ್ವಿತೀಯ ಮಂತ್ರಾಲಯದಲ್ಲಿ ಶ್ರೀಗುರು ರಾಯರ ಸನ್ನಿಧಿಯಲ್ಲಿ 349 ಆರಾಧನಾ ಮಹೋತ್ಸವ ಸಂಪನ್ನಗೊಂಡಿದೆ.
ಆಗಸ್ಟ್ 3ರಂದು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರಾರ್ಥನೋತ್ಸವ, ಯಜುರ್ವೇದಿ ನಿತ್ಯ-ನೂತನೋಪಾಕರ್ಮ, ಆರಾಧನೆ ಪಂಚರಾತ್ರೋತ್ಸವ ಉದ್ಘಾಟನೆಯೊಂದಿಗೆ ಆರಾಧನೆ ಆರಂಭವಾಯಿತು.
ಆಗಸ್ಟ್ 4ರಂದು ಋಗ್ವೇದಿ ನಿತ್ಯ-ನೂತನೋಪಾಕರ್ಮ, ಧ್ವಜಾರೋಹಣ, ಗೋ ಪೊಜೆ, ಧನ-ಧಾನ್ಯ ಪೂಜೆಯೊಂದಿಗೆ ಪೂರ್ವಾರಾಧನೆ ಹಮ್ಮಿಕೊಳ್ಳಲಾಗಿತ್ತು.
ಆಗಸ್ಟ್ 5ರಂದು ಪ್ರಧಾನವಾದ ಮಧ್ಯರಾಧನೆ ಪ್ರಯುಕ್ತ ಪಲ್ಲಕ್ಕಿ ಉತ್ಸವ ಮತ್ತು ಮಹಾ ಮಂಗಳಾರತಿ ನೆರವೇರಿತು.
ರಾಯರ ಮಹಾರಥೋತ್ಸವ
ಆಗಸ್ಟ್ 6ರಂದು ಶ್ರೀ ರಾಘವೇಂದ್ರ ಸ್ವಾಮಿಗಳ 349 ನೆಯ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ಗುರುವಾರ ಶ್ರೀಗುರು ರಾಯರ ಮಹಾರಥೋತ್ಸವ ಶ್ರೀಮಠದ ಪ್ರಾಕಾರದಲ್ಲಿ ನೆರವೇರಿಸಲಾಯಿತು.
ಮಹಾ ಮಂಗಳಾರತಿಯು ನೆರವೇರಿಸಿ ಶ್ರೀಗುರುರಾಯರಲ್ಲಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೊನಾತಂಕ ಕಳೆದು ಎಲ್ಲೆಡೆ ಶಾಂತಿ ನೆಮ್ಮದಿ ಹಾಗೂ ಸಮೃದ್ದಿ ಪುನಃ ಸ್ಥಾಪನೆಯಾಗಲಿ ಎಂದು ಶ್ರೀ ಗುರುರಾಯರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಪರಮಪೂಜ್ಯಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆದೇಶದೊಂದಿಗೆ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮತ್ತು ಆರೋಗ್ಯ ಇಲಾಖೆಯ ನಿಯಮಾವಳಿಯಂತೆ ಕೊರೋನಾ ಎಂಬ ವೈರಸ್ ಹಿಮ್ಮೆಟ್ಟಿಸಲು ಸಿಲಿಕಾನ್ ಸಿಟಿಯ ಜಯನಗರದ ಐದನೆಯ ಹಂತದಲ್ಲಿ ಇರುವ ದ್ವಿತೀಯ ಮಂತ್ರಾಲಯ ಶ್ರೀಗುರು ರಾಯರ ಸನ್ನಿಧಾನದಲ್ಲಿ ಕೋವಿಡ್19 ಕಾನೂನುಗಳನ್ನು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಲಾಯಿತು.
ಭಕ್ತರ ಆರೋಗ್ಯ ಮತ್ತು ಶ್ರೀ ಮಠದ ಹಿತ ದೃಷ್ಠಿಯಿಂದ ಶ್ರೀಮಠದ ಪ್ರವೇಶದ್ವಾರದ ಬಳಿ ಭಕ್ತರ ಕೈಗಳಿಗೆ ಸ್ಯಾನಿಟೈಸರ್ ಎಲೆಕ್ಟ್ರಾನಿಕ್ ಡಿವೈಸರ್ ವ್ಯವಸ್ಥೆ ಮಾಡಲಾಗಿತ್ತು.
ಶ್ರೀಮಠದ ಕಾವಲುಗಾರ ಬರುವ ಭಕ್ತರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದ ನಂತರ ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತಾದಿಗಳು ಯಾವುದೇ ಆತಂಕವಿಲ್ಲದೆ ಭಕ್ತರು ಶ್ರೀಗುರುರಾಯರ ದರ್ಶನ ಪಡೆದು ಶ್ರೀಗುರುರಾಯರ ಅನುಗ್ರಹಕ್ಕೆ ಪಾತ್ರರಾದರು. ಕೊರೋನಾ ವೈರಸ್ ಇರುವ ಕಾರಣ ಶ್ರೀಮಠದಲ್ಲಿ ಅತ್ಯಂತ ಸರಳವಾಗಿ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತ್ತು. ಅನ್ನಸಂತರ್ಪಣೆ ಇರಲಿಲ್ಲ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಛಾಯಾಚಿತ್ರಗಳು: ಲಕ್ಷ್ಮೀ ನಾರಾಯಣ್
Get In Touch With Us info@kalpa.news Whatsapp: 9481252093
Discussion about this post