ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿಂದು 129 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1952ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮೂವರು ಸಾವನ್ನಪ್ಪಿದ್ದರೆ, 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿಯೇ 59 ಪ್ರಕರಣಗಳು ಪತ್ತೆಯಾಗಿವೆ.

ಇನ್ನು, ಈವರೆಗೂ 370 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 97 ಆಗಿದೆ. ಇಂದು ಒಟ್ಟು 387 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 316 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 891 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.
ತಾಲೂಕುವಾರು ವಿವರ: ಶಿವಮೊಗ್ಗ: 59 ಭದ್ರಾವತಿ: 32 ಸಾಗರ: 2 ತೀರ್ಥಹಳ್ಳಿ: 7 ಶಿಕಾರಿಪುರ: 23 ಹೊಸನಗರ: 1 ಇತರೆ ಜಿಲ್ಲೆ: 5
Get In Touch With Us info@kalpa.news Whatsapp: 9481252093
















