ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚೆನ್ನೈ: ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಎಂಜಿಎಂ ಆಸ್ಪತ್ರೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಎಸ್’ಪಿಬಿ ಅವರ ಆರೋಗ್ಯದಲ್ಲಿ ನಿನ್ನೆಯಿಂದ ಕೊಂಚ ಚೇತರಿಕೆ ಕಂಡುಬಂದಿದ್ದು, ಆರೋಗ್ಯ ಸ್ಥಿರವಾಗಿದೆ ಎಂದಿದೆ.
ಎಸ್’ಪಿಬಿ ಆರೋಗ್ಯ ಸ್ಥಿರವಾಗುತ್ತಿದ್ದರೂ ಅವರನ್ನು ವೆಂಟಿಲೇಟರ್ ಸಪೋರ್ಟ್’ನಲ್ಲಿಯೇ ಇರಿಸಲಾಗಿದ್ದು, ತಜ್ಞ ವೈದ್ಯರ ತಂಡ ನಿರಂತರವಾಗಿ ನಿಗಾ ವಹಿಸಿದೆ. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಮೆರಿಕಾ ಹಾಗೂ ಯುಕೆ ತಜ್ಞರೊಂದಿಗೆ ಎಂಜಿಎಂ ಆಸ್ಪತ್ರೆ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು, ಚಿಕಿತ್ಸೆ ಕುರಿತಾಗಿ ಮಾರ್ಗದರ್ಶನ ಹಾಗೂ ಸಲಹೆ ಪಡೆಯುತ್ತಿದ್ದಾರೆ.
40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ ವಿಶ್ವದ ಏಕೈಕ ಗಾನ ಸಾಮ್ರಾಟ್ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಗುಣಮುಖರಾಗಿ ಮತ್ತೆ ಹಾಡುವಂತಗಲಿ ಎಂದು ದೇಶ ಮಾತ್ರವಲ್ಲ ವಿದೇಶಗಳಲ್ಲೂ ಸಹ ಅಭಿಮಾನಿಗಳು ಮತ್ತು ಇಡಿಯ ಚಿತ್ರರಂಗ ಪ್ರಾರ್ಥಿಸುತ್ತಿದೆ.
Get In Touch With Us info@kalpa.news Whatsapp: 9481252093
















