ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಳ್ಳಾರಿ: ಹಗರಿ ಬೊಮ್ಮನಹಳ್ಳಿ, ಶ್ರೀ ಆಂಜನೇಯ ಸ್ವಾಮಿ ಕಲಿಯುಗದಲ್ಲಿ ಇದ್ದಾನೆ ಎಂಬ ನಂಬಿಕೆ ಆಸ್ಥಿಕರದ್ದಾಗಿದೆ.
ದೇವರು ಇದ್ದಾನೆ ಎಂದು ನಂಬಿದವರಿಗೆ ಇದ್ದಾನೆ, ಇಲ್ಲ ಎನ್ನುವವರಿಗೆ ಇಲ್ಲ ಎನ್ನುತ್ತಾರೆ ಕೆಲವರು. ಮನೋಶಾಸ್ತ್ರಜ್ಞರೇ ಹೇಳುತ್ತಾರೆ ದೇವಸ್ಥಾನಗಳು ಇಲ್ಲದಿದ್ದರೆ, ಆ ಜಾಗದಲ್ಲಿ ಮಾನಸಿಕ ಆಸ್ಪತ್ರೆಗಳಿರುತ್ತಿದ್ದವು ಎಂದು. ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಹಾಮಾರಿ ಕೊರೊನಾದಿಂದಾಗಿ, ದೇಶದಲ್ಲಿ ಲಾಕ್’ಡೌನ್ ಜಾರಿ ಇರುವ ಕಾರಣ ಹಲವು ಶುಭ ಕಾರ್ಯಕ್ರಮಗಳು ಹಾಗೂ ಜಾತ್ರೆಗಳು, ಭಾರೀ ಅದ್ದೂರಿ ಕಾರ್ಯಕ್ರಮಗಳು ರದ್ದಾಗಿವೆ. ಸಮೂಹ ಸಂಪರ್ಕವೇ ಕಡಿತಗೊಂಡಿದೆ. ಭಾರತ ದೇಶವು ಕೊರೋನದಿಂದ ಮುಕ್ತಿ ಪಡೆಯುವುದು ಯಾವಾಗ? ಇದು ರಾಷ್ಟ್ರದ ಪ್ರತಿಯೊಬ್ಬರ ಯಕ್ಷ ಪ್ರೆಶ್ನೆಯಾಗಿದೆ. ಈ ಪ್ರಶ್ನೆಗೆ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಭವಿಷ್ಯ ನುಡಿದಿದೆ.
ಜಗತ್ತನ್ನೇ ಬೆಂಬಿಡದೇ ಕಾಡುತ್ತಿರೋ ಮಹಾಮಾರಿ ಕೊರೋನಾ ರೋಗವು, ಒಂದು ತಿಂಗಳೊಳಗಾಗಿ ಭಾರತ ದೇಶವನ್ನು ಬಿಟ್ಟು ಹೋಗುತ್ತದೆ ಎಂದು ದೇವರು ಹೂ ಫಲ ನೀಡೋ ಮೂಲಕ ಭವಿಷ್ಯ ನುಡಿದಿದೆ. ಇದು ತಮಗೆ ಆಚ್ಚರಿ ಎನಿಸಿದರೂ ಭಕ್ತರ ಪಾಲಿಗೆ ಸತ್ಯ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಗೋಳ ಗ್ರಾಮದ ಹೊರವಲಯದಲ್ಲಿರುವ ಶ್ರೀಆಂಜನೇಯಸ್ವಾಮಿ, ಭಕ್ತರ ಕೋರಿಕೆಯ ಹಿನ್ನೆಲೆಯಲ್ಲಿ ಹೂ ಅಪ್ಪಣೆ ನೀಡೋ ಮೂಲಕ ಕರುನಾ ರೋಗವು ಒಂದು ತಿಂಗಳೊಳಗಾಗಿ ದೇಶವನ್ನು ಬಿಟ್ಟು ಹೋಗುತ್ತದೆ ಎಂದು ಭವಿಷ್ಯ ನುಡಿದಿದೆ.
ಈ ಹೂವಿನ ಅಪ್ಪಣೆ ಸಂಪ್ರದಾಯ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ ಎಂದು ಬನ್ನಿಗೋಳ ಗ್ರಾಮ ಹಾಗೂ ಸುತ್ತಲಿನ ಹಲವು ಗ್ರಾಮಸ್ಥರ ಹೇಳಿಕೆಯಾಗಿದೆ. ಹಗರಿ ಬೊಮ್ಮನಹಳ್ಳಿ ತಾಲೂಕು ಮಾತ್ರವಲ್ಲದೇ ಇತರೆ ತಾಲೂಕಿನಿಂದಲೂ, ಭಕ್ತರು ಸ್ವಾಮಿಯ ಹೂ ಭವಿಷ್ಯದ ಅಪ್ಪಣೆಗಾಗಿ ಇಲ್ಲಿಗೆ ದಾವಿಸುತ್ತಿದ್ದಾರೆ.
ಶ್ರೀ ಆಂಜನೇಯ ಸ್ವಾಮಿಯ ಹೂವಿನ ಅಪ್ಪಣೆಯ ಭವಿಷ್ಯದ ಹೇಳಿಕೆ ಸತ್ಯವಾಗುತ್ತದೆ ಎಂಬುದು ಭಕ್ತರ ಹಾಗೂ ನಮ್ಮೆಲ್ಲರ ನಂಬಿಯಾಗಿದೆ ಅದಕ್ಕೆ ಸಹಸ್ರಾರು ಜೀವಂತ ಸಾಕ್ಷಿಗಳಿವೆ ಎಂದು ಬನ್ನಿಗೋಳ ಗುರುಸ್ವಾಮಿ ಹಿರೇಮಠ್ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಮತ್ತು ಹೂವಿನ ಅಪ್ಪಣೆಯನ್ನು ಕೇಳುವಾಗಲೂ ಸಹ ಸಾಮಾಜಿಕ ಅಂತರವನ್ನು ಕಾಯ್ದುಳ್ಳಲಾಗಿತ್ತು. ಬನ್ನಿಗೋಳ ಗ್ರಾಮದ ಭಗತ್ ಸಿಂಗ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಗಡಾದ್ ಅಂಜಿನಪ್ಪ, ಪಕ್ಕೇದ ಶಿವರಾಜಕುಮಾರ, ನವಲಿ ರಮೇಶ್, ಗದ್ದಿಕೇರಿ ಬಸವರಾಜ್, ರಂಗನಾಥ್ ಇತರರು ಪಾಲ್ಗೊಂಡಿದ್ದರು.
(ವರದಿ: ಮಂಜುನಾಥ ಶರ್ಮಾ)
Get in Touch With Us info@kalpa.news Whatsapp: 9481252093
Discussion about this post