ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದೇಶದಲ್ಲಿ ಹೊಸದಾಗಿ ಏಳು ಹೊಸ ಬುಲೆಟ್ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವನ್ನೂ ಸಹ ಇದರಲ್ಲಿ ಸೇರಿಸಿದೆ.
ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್’ಎಚ್’ಎಐ) ಮಾಹಿತಿ ಪ್ರಕಟಿಸಿದ್ದು, ದೇಶದ ರೈಲು ಸಾರಿಗೆ ಜಾಲದ ಸಮಗ್ರ ಅಭಿವೃದ್ಧಿಗಾಗಿ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳ ಉದ್ದಕ್ಕೂ ಹೆಚ್ಚಿನ ವೇಗದ ರೈಲುಗಳಿಗೆ ಹಳಿಗಳನ್ನು ಹಾಕಲು ಎನ್‌ಎಚ್‌ಎಐ ಶೀಘ್ರದಲ್ಲೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದ ಮೂಲಸೌಕರ್ಯ ಕುರಿತಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವರದಿಗಳ ಪ್ರಕಾರ, ಭಾರತೀಯ ರೈಲ್ವೆ ದೇಶದ 7 ಪ್ರಮುಖ ಹೊಸ ಮಾರ್ಗಗಳಲ್ಲಿ ಬುಲೆಟ್ ರೈಲುಗಳನ್ನು ಓಡಿಸಲು ಯೋಜಿಸಿದೆ.
ಹೊಸ ಮಾರ್ಗಗಳು ಯಾವುವು? ದೆಹಲಿ-ನೋಯ್ಡಾ-ಆಗ್ರಾ-ಲಕ್ನೋ-ವಾರಣಾಸಿ ವಾರಣಾಸಿ-ಪಾಟ್ನಾ-ಹೌರಾ ದೆಹಲಿ-ಜೈಪುರ-ಉದಯ್’ಪುರ-ಅಹ್ಮದಾಬಾದ್ ದೆಹಲಿ-ಚಂಡೀಘಡ್-ಲೂಧಿಯಾನಾ-ಜಲಂಧರ್-ಅಮೃತ್’ಸರ್ ಮುಂಬೈ-ನಾಸಿಕ್-ನಾಗ್ಪುರ್ ಮುಂಬೈ-ಪೂನಾ-ಹೈದರಾಬಾದ್ ಚೆನ್ನೈ-ಬೆಂಗಳೂರು-ಮೈಸೂರು
Get In Touch With Us info@kalpa.news Whatsapp: 9481252093
















