ಶ್ರೀನಗರ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್’ನಲ್ಲಿ ದಾಳಿ ಆರಂಭಿಸಿದ್ದ ಹಾಗೂ ಭಾರೀ ದಾಳಿಗೆ ಸಂಚು ರೂಪಿಸಿದ್ದ ಉಗ್ರರನ್ನು ವಶಕ್ಕೆ ಪಡೆಯುವ ಮೂಲಕ ಭಾರತೀಯ ಸೇನೆ ಮತ್ತೊಮ್ಮೆ ತನ್ನ ಚಾಣಾಕ್ಷತನವನ್ನು ಪ್ರದರ್ಶಿಸಿದೆ.
ಉರಿ ಸೆಕ್ಟರ್’ನಲ್ಲಿ ಗಸ್ತು ನಿರತರಾಗಿದ್ದ ಯೋಧರಿಗೆ ಶಂಕಿತ ಚಟುವಟಿಕೆಗಳು ಕಂಡುಬಂದ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಅವರು ಗುಂಡಿನ ದಾಳಿ ನಡೆಸಿದರು. ಆ ಮೂಲಕ ಯಾವುದೇ ಸಂಭಾವ್ಯ ಉಗ್ರ ದಾಳಿಯನ್ನು ಸೇನೆ ವಿಫಲಗೊಳಿಸಿದೆ.
ಇಬ್ಬರು ಶಂಕಿತರನ್ನು ಸೇನೆ ವಶಕ್ಕೆ ಪಡೆದಿದ್ದು ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕಣಿವೆ ರಾಜ್ಯದ ಕುಲ್ಗಾಂ ಜಿಲ್ಲೆಯಲ್ಲಿ ಐವರು ಉಗ್ರರನ್ನು ಸೇನೆ ಹೊಡೆದುರುಳಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
ಆದರೆ, ಇನ್ನೊಂದು ಮೂಲಗಳ ಪ್ರಕಾರ ಸೇನಾ ಜವಾನರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇಡಿಯ ಪ್ರದೇಶವನ್ನು ಸೇನೆ ಹಾಗೂ ಸ್ಥಳೀಯ ಪೊಲೀಸರು ಸುತ್ತುವರೆದಿದ್ದು, ಈಗಾಗಲೇ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
Discussion about this post