ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಚಿಕ್ಕಮಗಳೂರು |
ಬಯ್ಯಪ್ಪನಹಳ್ಳಿ ಯಾರ್ಡ್’ನಲ್ಲಿ ಪಾದಚಾರಿ ಮೇಲ್ಸೇತುವೆ ಗಡರ್ ಅನ್ನು ಸ್ಥಾಪಿಸಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವ ಕಾರಣ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆಯು ಮಾಹಿತಿ ಪ್ರಕಟಿಸಿದ್ದು, ಹಲವು ರೈಲುಗಳ ಸಂಚಾರವು ನಿಯಂತ್ರಿತವಾಗಲಿದ್ದು, ಮರುನಿಗದಿಯಾಗಲಿವೆ ಎಂದು ತಿಳಿಸಲಾಗಿದೆ.
ಯಾವೆಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ?
1. 16021 ಸಂಖ್ಯೆಯ ಎಂಜಿಆರ್ ಚೆನ್ನೈ ಸೆಂಟ್ರಲ್ – ಅಶೋಕಪುರಂ ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 16, 18 ಮತ್ತು 19 ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 15 ನಿಮಿಷ ನಿಯಂತ್ರಿಸಲ್ಪಡುತ್ತವೆ.
2. 17423 ಸಂಖ್ಯೆಯ ತಿರುಪತಿ – ಚಿಕ್ಕಮಗಳೂರು ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 18ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 45 ನಿಮಿಷ ನಿಯಂತ್ರಿಸಲ್ಪಡುತ್ತವೆ.
3. 06243 ಸಂಖ್ಯೆಯ ಮೈಸೂರು – ಕಾರೈಕುಡಿ ವಿಶೇಷ ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 18ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 140 ನಿಮಿಷ ನಿಯಂತ್ರಿಸಲ್ಪಡುತ್ತವೆ.
4. 22135 ಸಂಖ್ಯೆಯ ಮೈಸೂರು – ರೆಣಿಗುಂಟ ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 19ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 80 ನಿಮಿಷ ನಿಯಂತ್ರಿಸಲ್ಪಡುತ್ತವೆ.
5. 12889 ಸಂಖ್ಯೆಯ ಟಾಟಾನಗರ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 19ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 10 ನಿಮಿಷ ನಿಯಂತ್ರಿಸಲ್ಪಡುತ್ತವೆ.6. 06540 ಸಂಖ್ಯೆಯ ಬೀದರ್ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 20 ಮತ್ತು 22ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 40 ನಿಮಿಷ ನಿಯಂತ್ರಿಸಲ್ಪಡುತ್ತವೆ.
7. 22818 ಸಂಖ್ಯೆಯ ಮೈಸೂರು – ಹೌರಾ ಎಕ್ಸ್’ಪ್ರೆಸ್ ರೈಲು ಸೆಪ್ಟೆಂಬರ್ 21ರಂದು ಪ್ರಾರಂಭವಾಗುವ ಸೇವೆ ಮಾರ್ಗದಲ್ಲಿ 40 ನಿಮಿಷ ನಿಯಂತ್ರಿಸಲ್ಪಡುತ್ತವೆ.
8. 15227 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಮುಜಾಪಪುರ್ ಎಕ್ಸ್’ಪ್ರೆಸ್ ಸೆಪ್ಟೆಂಬರ್ 18ರಂದು ಪ್ರಾರಂಭವಾಗುವ ಸೇವೆ ಎಸ್’ಎಂವಿಟಿ ಬೆಂಗಳೂರಿನಿಂದ 165 ನಿಮಿಷ ಮರುನಿಗದಿಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post