ಕಲ್ಪ ಮೀಡಿಯಾ ಹೌಸ್ | ತುಮಕೂರು |
ನಗರದಲ್ಲಿ ಗುರುವಾರ ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು. ಅದು ರೈಲಿನ ಬರ್ತ್ ಡೇ #Birthday ಸಾಮಾನ್ಯವಾಗಿ ಎಲ್ಲೂ ನಡೆಯದ ರೈಲಿನ ಹುಟ್ಟುಹಬ್ಬವನ್ನು ನಗರದ ತುಮಕೂರು #Tumkur ಬೆಂಗಳೂರು #Bengaluru ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ ಹತ್ತು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.
ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ಬೆಳಗ್ಗೆ 8 ಕ್ಕೆ ತುಮಕೂರಿನಿಂದ ಬೆಂಗಳೂರಿಗೆ 2013ರ ಆಗಸ್ಟ್ 3 ರಂದು ಹೊಸ ರೈಲಿನ #Train ಸಂಚಾರವನ್ನು ಆರಂಭಿಸಲಾಗಿತ್ತು. ಅಂದಿನಿಂದ ಪ್ರತಿವರ್ಷವೂ ರೈಲ್ವೇ ಪ್ರಯಾಣಿಕರ ವೇದಿಕೆ ಆಶ್ರಯದಲ್ಲಿ ರೈಲಿನ ಜನ್ಮದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ರೈಲಿನ ಪೈಲಟ್ #LocoPilot ಸುಬ್ರಹ್ಮಣ್ಯಂ ಹಾಗೂ ಗಾರ್ಡ್ ಎಂ.ಆರ್.ಎಂ. ನಾಯ್ಡು, ರೈಲು ನಿಲ್ದಾಣದ ವ್ಯವಸ್ಥಾಪಕರಾದ ನಾಗರಾಜು ಅವರ ಮೂಲಕ ಕೇಕ್ ಕಟ್ ಮಾಡಿಸುವ ಮೂಲಕ ರೈಲಿನ ಜನ್ಮದಿನವನ್ನು ಆಚರಿಸಲಾಯಿತು. ವೇದಿಕೆ ಪದಾಧಿಕಾರಿಗಳು ಎಲ್ಲ ಪ್ರಯಾಣಿಕರಿಗೂ ಕೇಕ್ ವಿತರಿಸಿ ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post