ಕಲ್ಪ ಮೀಡಿಯಾ ಹೌಸ್ | ಶ್ರೀಹರಿಕೋಟಾ(ತೆಲಂಗಾಣ) |
ತೆಲಂಗಾಣ ಮೂಲಕ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಭಾರತದ ಮೊಟ್ಟ ಮೊದಲ ಖಾಸಗೀ ಸ್ಯಾಟಲೈಟ್ ಅಭಿವೃದ್ಧಿಪಡಿಸಿದ್ದು, ಉಡಾವಣೆಗೆ ಸಿದ್ದವಾಗಿದೆ ಎಂದು ಘೋಷಣೆ ಮಾಡಿದೆ.
ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಇಂತಹ ಒಂದು ಮಹತ್ವದ ಪ್ರಯತ್ನದ ಹಾದಿಯಲ್ಲಿದ್ದು, ಸ್ವದೇಶಿ ವಿಕ್ರಮ್ ಎಸ್ ಸ್ಯಾಟಲೈಟ್’ನ್ನು ಶ್ರೀಹರಿ ಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದೆ. ಪ್ರಮುಖವಾಗಿ ವಾಣಿಜ್ಯ ಬಾಹ್ಯಾಕಾಶ ಪರಿಶೋಧನೆಗೆ ಭಾರತದ ಈ ಪ್ರಯತ್ನವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದೆ.
ಪ್ರಾರಂಭ್ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯು ನವೆಂಬರ್ ಎರಡನೆಯ ವಾರದಲ್ಲಿ ವಿಕ್ರಮ್-ಎಸ್ ಉಡಾವಣಾ ವಾಹನ ಮತ್ತು ಮೂರು ಪ್ರತ್ಯೇಕ ಪೇಲೋಡ್’ಗಳೊಂದಿಗೆ ಉಡಾವಣೆಯಾಗುವ ನಿರೀಕ್ಷೆಯಿದೆ. ಇದೇ ಕಂಪೆನಿ ಆನಂತರದಲ್ಲಿ ಸಂಪೂರ್ಣ ಚಾಲಿತ ವಿಕ್ರಂ-1 ರಾಕೆಟನ್ನು ಸಹ ಉಡಾವಣೆ ಮಾಡಲಿದೆ.
ಏನಿದು `ಪ್ರಾರಂಭ್’ ಮಿಷನ್?
ತೆಲಂಗಾಣ ಮೂಲದ ಸ್ಟಾರ್ಟ್ ಅಪ್ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಈ ಪ್ರಾರಂಭ್(ಆರಂಭ) ಮಿಷನ್ ಮೂಲಕ ಅಭಿವೃದ್ಧಿಪಡಿಸಿರುವ ಸ್ವದೇಶಿ ಉಡಾವಣೆ ವಾಹನವಾದ ವಿಕ್ರಂ-ಎಸ್ ರಾಕೆಟ್ ಉಡಾವಣೆಗೆ ಸಾಕ್ಷಿಯಾಗಲಿದೆ.
ಮೂರು ಪ್ರತ್ಯೇಕ ಪ್ಲೇಲೋಡ್’ಗಳನ್ನು ಈ ರಾಕೇಟ್ ಹೊತ್ತೊಯ್ಯಲಿದ್ದು, ಇದರಲ್ಲಿ ಒಂದನ್ನು ಸ್ಪೇಸ್ಕಿಡ್ಜ್ ಇಂಡಿಯಾ ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಪ್ರಾರಂಭ್ ಮಿಷನ್ ಶ್ರೀಹರಿಕೋಟಾದಿಂದ ಭೂಮಿಯ 120 ಕಿಮೀ ಲ್ಯಾಟಿಟ್ಯೂಡ್’ನಲ್ಲಿ ಉಡಾವಣೆಗೊಳ್ಳಲಿದೆ. ಮೂರು ಹಂತದ ಘನ ಮೋಟಾರ್ ರಾಕೆಟ್ ಹಾರಾಟದ ಸಮಯದಲ್ಲಿ ಸುಮಾರು 80 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಹೊತ್ತೊಯ್ಯುವ ನಿರೀಕ್ಷೆಯಿದೆ.
ಇದು ದೇಶದ ಬಿಗ್ ಡೀಲ್ ಯಾಕೆ?
ಪ್ರಾರಂಭ್ ಮಿಷನ್ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ. ಈವರೆಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶದ ಏಕೈಕ ಸಂಸ್ಥೆಯಾಗಿದ್ದು, ಈಗ ಮೊಟ್ಟ ಮೊದಲ ಖಾಸಗೀ ಸಂಶೋಧನಾ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ.
ಪ್ರಾರಂಭ್ ಮಿಷನ್ ಉಡಾವಣೆಯು ಸಾರ್ವಜನಿಕ ಸಂಸ್ಥೆಯ ಹೊರೆಯ ಒಂದು ಭಾಗವನ್ನು ಖಾಸಗಿ ವಲಯದ ಹೆಗಲಿಗೆ ಹಾಕುವುದರೊಂದಿಗೆ ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ.
ಅತ್ಯಂತ ಪ್ರಮುಖವಾಗಿ, ಖಾಸಗಿ ವಲಯವು ಇದನ್ನು ಅಭಿವೃದ್ಧಿಪಡಿಸಿ, ಉಡಾವಣೆ ಮಾಡಲು ಹೆಜ್ಜೆ ಇಟ್ಟಿರುವುದು ಇದರಲ್ಲಿ ಹೂಡಿಕೆಗೆ ಹೊಸ ಬಾಗಿಲನ್ನು ತೆರೆಯುತ್ತದೆ. ಅಮೆರಿಕಾ, ಯುರೋಪ್ ಹಾಗೂ ರಷ್ಯಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಖಾಸಗೀ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಭಾರತದಲ್ಲೂ ಸಹ ಖಾಸಗೀ ವಲಯ ಇಂತಹ ಹೆಜ್ಜೆ ಇಟ್ಟಿರುವುದು ದೇಶದಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆಗೆ ದಾರಿ ಮಾಡಿಕೊಡುತ್ತದೆ.
ಭಾರತವು ಇತ್ತೀಚೆಗೆ ತನ್ನ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ತೆರೆಯಲು ಮುಂದಾಗಿದ್ದು, ಇದರ ವ್ಯವಸ್ಥೆಯು ಈಗಾಗಲೇ ಕಾರ್ಯಾರಂಭ ಎಂದು ಈ ಬೆಳವಣಿಗೆ ತೋರಿಸುತ್ತದೆ. ಇಸ್ರೋ ಮತ್ತು ಇನ್’ಸ್ಪೇಸ್ ರಾಕೆಟ್ ವ್ಯವಸ್ಥೆಗಳು ಮತ್ತು ಸಂಕೀರ್ಣ ವಿನ್ಯಾಸಗಳ ಬಗ್ಗೆ ಪರಿಣತಿ ಮತ್ತು ತಾಂತ್ರಿಕ ಜ್ಞಾನವನ್ನು ಒದಗಿಸುವಲ್ಲಿ ಖಾಸಗಿ ಕಂಪನಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post