ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕರೋನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಅವಧಿಯನ್ನು 15-20 ನಿಮಿಷಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ಸೂಚಿಸಿದ್ದಾರೆ.
ಮಸೀದಿ ಹಾಗೂ ಸತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಸೀದಿಗಳಲ್ಲಿ ವಜ್ಹೂ ಮಾಡುವ ಸ್ಥಳದಲ್ಲಿ ಹ್ಯಾಂಡ್’ವಾಷ್ ಮತ್ತು ಸ್ಯಾನಿಟೈಸರ್’ಗಳ ಸೌಲಭ್ಯ ಕಲ್ಪಿಸಬೇಕು. ಮಸೀದಿಗಳಲ್ಲಿ ಎಲ್ಲರೂ ಬಳಸುವ ಟವಲ್ ಮತ್ತು ಟೋಪಿಗಳನ್ನು ತೆರವು ಮಾಡಬೇಕೆಂದು ಈಗಾಗಲೇ ಬೆಂಗಳೂರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ತೀರ್ಮಾನಿಸಿದೆ.
ರಾಜ್ಯ ಸರ್ಕಾರವು ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿರುವಂತೆ ಶಿವಮೊಗ್ಗ ಜಿಲ್ಲೆಯ ಮದರಸಾ ಹಾಗೂ ಮಖ್ತಬ್‌ಗಳಿಗೂ ರಜೆ ಘೋಷಿಸಿಬೇಕು.
ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಅವಧಿಯನ್ನು 15-20 ನಿಮಿಷಗಳಲ್ಲಿ ಪೂರ್ಣಗೊಳಿಸುವಂತೆ ಮತ್ತು ಮಸೀದಿಗಳ, ದರ್ಗಾಗಳ ಹಾಗೂ ಮದರಸಾಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಮಸೀದಿ ಹಾಗೂ ಸತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಸೀದಿಗಳಲ್ಲಿ ವಜ್ಹೂ ಮಾಡುವ ಸ್ಥಳದಲ್ಲಿ ಹ್ಯಾಂಡ್‌ವಾಷ್ ಮತ್ತು ಸ್ಯಾನಿಟೈಸರ್‌ಗಳ ಸೌಲಭ್ಯ ಕಲ್ಪಿಸಬೇಕು. ಮಸೀದಿಗಳಲ್ಲಿ ಎಲ್ಲರೂ ಬಳಸುವ ಟವಲ್ ಮತ್ತು ಟೋಪಿಗಳನ್ನು ತೆರವು ಮಾಡಬೇಕೆಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಸೂಚಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post