ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಸುಮಾರು ಎರಡು ವಾರಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದ ಇಂಟರ್’ನೆಟ್ ಸೇವೆಯನ್ನು ನಿನ್ನೆ ತಡರಾತ್ರಿಯಿಂದ ಮರುಆರಂಭಗೊಳಿಸಲಾಗಿದೆ.
ಸಂವಿಧಾನದ 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸುವ ಸಲುವಾಗಿ ಆಗಸ್ಟ್ 5ರಂದು ಕಣಿವೆ ರಾಜ್ಯದಲ್ಲಿ ಇಂಟರ್’ನೆಟ್ ಸೇವೆಯಲ್ಲಿ ರದ್ದುಗೊಳಿಸಲಾಗಿತ್ತು. ವಿಧಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ ನಂತರ ಇಡಿಯ ಪ್ರದೇಶದ ನಿಯಂತ್ರಣವನ್ನು ಕೇಂದ್ರ ತನ್ನ ಕೈಗೆ ತೆಗೆದುಕೊಂಡಿದ್ದು, ಅಂದಿನಿಂದ ಇಲ್ಲಿನವರೆಗೂ ಒಂದೇ ಒಂದು ಗಲಭೆ ಸಂಭವಿಸಿಲ್ಲ.
ಈಗ ಪರಿಸ್ಥಿತಿ ಕೊಂಚ ತಿಳಿಯಾಗಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿಯಿಂದ 2ಜಿ ಇಂಟರ್’ನೆಟ್ ಸೇವೆಯನ್ನು ಮರು ಆರಂಭಗೊಳಿಸಲಾಗಿದೆ.







Discussion about this post