ಶಿವಮೊಗ್ಗ: ಮಲೆನಾಡನ್ನೇ ಬೆಚ್ಚಿ ಬೀಳಿಸಿದ ಶಿವಮೊಗ್ಗ ಪ್ರವಾಹ ಪರಿಸ್ಥಿತಿ ಮರೆಯಲಾಗದ ದುಃಸ್ವಪ್ನವದರೂ ಇಂತಹ ವೇಳೆಯಲ್ಲಿ ಬೆನ್ನೆಲುಬಾಗಿ ನಿಂತ ಮಂದಿ ಸಾವಿರಾರು. ಇವರಲ್ಲಿ ಶಿವಮೊಗ್ಗ ಕೇರಳ ಸಮಾಜದವರೂ ಸಹ.
ಎಲ್ಲರೂ ಕ್ಷೇಮವಿದ್ದರೆ ನಾವೂ ಕ್ಷೇಮವಿರುತ್ತೇವೆ ಎಂಬ ಧ್ಯೇಯದಿಂದ ಶಿವಮೊಗ್ಗದ ಕೇರಳ ಸಮಾಜಂ ಮತ್ತು ಸಮನ್ವಯ ಮಹಿಳಾ ಸಮಾಜದವರು ನಿನ್ನೆ ಗಾರ್ಡನ್ ಏರಿಯಾದ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದರು. ನಂತರ ಶಿವಮೊಗ್ಗೆಯಲ್ಲಿನ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಚಟುವಟಿಕೆ ಹಮ್ಮಿಕೊಂಡಿದ್ದರು.
ರಾಜೀವ್ ಗಾಂಧಿ ಬಡಾವಣೆಗೆ ಸದಸ್ಯರೆಲ್ಲ ಭೇಟಿ ನೀಡಿ ಅಲ್ಲಿನ ಪ್ರವಾಹ ಸಂತ್ರಸ್ತರಿಗೆ, ಸಂಕಷ್ಟ ಸ್ಥಿತಿ ಅರಿತು ಸಮಾಧಾನ ಹೇಳಿ, ಆತ್ಮ ವಿಶ್ವಾಸ ತುಂಬಿದರು. ಅಲ್ಲಿ 500 ಮನೆಗಳಿಗೆ ತಲಾ ಐದು ಕೆಜಿ ಅಕ್ಕಿ ಮತ್ತು ಬೇಳೆ ಪೊಟ್ಟಣಗಳನ್ನು ವಿತರಿಸಿದರು.
ಇದೇ ತಂಡವು ಬಾಪೂಜಿ ನಗರಕ್ಕೂ ತೆರಳಿತು. ಅಲ್ಲಿ 60 ಮನೆಗಳ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಲಾಯಿತು.
ಇಡೀ ತಂಡದಲ್ಲಿ ಸಮಾಜಂ ಅಧ್ಯಕ್ಷ ಕೆ. ಚಂದ್ರಶೇಖರ್, ಉಪಾಧ್ಯಕ್ಷ ಪಿ. ಪ್ರಮೋದ್, ಕಾರ್ಯದರ್ಶಿ ವಿ. ಗಿರೀಶ್ ಕುಮಾರ್, ಸಹಕಾರ್ಯದರ್ಶಿ ಕೆ. ಶಿವಕುಮಾರ್, ಖಜಾಂಚಿ ಭರತನ್ ಹಾಗೂ ಹದಿನೇಳಕ್ಕೂ ಮಿಕ್ಕಿ ಸದಸ್ಯರು ಹಾಜರಿದ್ದರು.
ಸಮನ್ವಯ ಮಹಿಳಾ ಸಮಾಜದ ಶ್ರೀಮತಿ ನಿರ್ಮಲಾ ಕಾಶಿ, ದೇವಿ, ಶಾಂತಾ ಸೌಮ್ಯಾ ಮತ್ತು ಇತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ವರದಿ: ಡಾ. ಸುಧೀಂದ್ರ
Discussion about this post