ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಇಟಿ ಪರೀಕ್ಷೆ CET Exam ವೇಳೆ ಬೆಂಗಳೂರಿನ ಕೃಪ ನಿಧಿ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಜನಿವಾರ Janivara ತೆಗೆಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ. ಮತ್ತೊಮ್ಮೆ ಜನಿವಾರಕ್ಕೆ ಕೈಹಾಕಿದರೆ ಸರ್ಕಾರಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು ಶಾಂತಿಗೂ ಸಿದ್ದ ಕ್ರಾಂತಿಗೂ ಬದ್ದ, ಸಮಾಜ, ದೇಶ ಎಂದು ಬಂದಾಗ ಹೋರಾಟ ಮಾಡಿದ್ದೇವೆ. ಸಮುದಾಯಕ್ಕೆ ಧಕ್ಕೆ ಆದಾಗ ಸುಮ್ಮನಿರಲು ಸಾಧ್ಯವಿಲ್ಲ. ಸಣ್ಣ ಜನಿವಾರ ಸರ್ಕಾರಕ್ಕಾಗಲಿ, ಪರೀಕ್ಷೆಗಾಗಲಿ ಏನು ಸಮಸ್ಯೆ ಸೃಷ್ಠಿಸಿತ್ತು ಎಂಬುದು ತಿಳಿಯಬೇಕಿದೆ ಎಂದರು.
ಜನಿವಾರ ತೆಗೆಸಿದ್ದು ವೈಯಕ್ತಿಕವೋ, ಶಿಕ್ಷಣದ ನಿಯಮವೋ ಅಥವಾ ಸರ್ಕಾರದ ನಿಯಮವೋ ಎಂಬುದು ಸ್ಪಷ್ಟಪಡಿಸಬೇಕು. ಶಿಕ್ಷಣ ಸಚಿವರು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಕ್ರಮ ತೆಗೆದುಕೊಂಡಿಲ್ಲ. ಸಮುದಾಯವನ್ನ ನಿಂದಿಸಲಾಗಿದೆ. ಪರೀಕ್ಷೆ ವೇಳೆ ಜನಿವಾರ ತೆಗೆಸಿದಂತೆ ಅನ್ಯಧರ್ಮಿಯವರಿಗೆ ಮಾಡಿಲ್ಲ ಯಾಕೆ? ಭಾರತೀಯ ಮಹಿಳೆಗೆ ಕುಂಕುಮ ಬೊಟ್ಟು, ಬಳೆ ತೆಗೆಸಿರುವುದು ಸರಿಯಾದ ಕ್ರಮವಲ್ಲ ಎಂದರು.
ಇಂತಹ ಘಟನೆಗಳು ಮರುಕುಳಿಸದಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















