ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳು ಮಾಡಿದ್ದ ಸರಿಯೇ ಎಂಬುದನ್ನು ಆತ್ಮ ವಿಮರ್ಷೆ ಮಾಡಿಕೊಳ್ಳಿ ಎಂದು ಪ್ರತಿಭಟನೆ ನಡೆಸುವವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಯಾರು ಇಂತಹ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೋ ಅವರು ತಾವು ಮಾಡಿದ್ದು ಸರಿಯೇ ಎಂಬ ಬಗ್ಗೆ ತಾವು ಮನೆಯಲ್ಲಿ ಕುಳಿತಾಗ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ತಪ್ಪು ಮಾಹಿತಿ ಹರಡುವ ಪ್ರತಿಭಟನೆಗಳಿಂದ ಪ್ರಚೋದನೆಗೊಳ್ಳಬೇಡಿ, ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ ಎಂದು ದೇಶದ ಜನರಲ್ಲಿ ಅವರು ಮನವಿ ಮಾಡಿದರು.
ಒಂದು ವೇಳೆ ಒಳ್ಳೆಯ ರಸ್ತೆ ವ್ಯವಸ್ಥೆ ಇದ್ದರೆ, ಆ ರಸ್ತೆಯ ಒಳಚರಂಡಿ ವ್ಯವಸ್ಥೆಯನ್ನು ಸ್ವಚ್ಚಗೊಳಿಸುವುದು ನಾಗರಿಕರ ಹಕ್ಕಾಗಿದೆ. ಅದರ ವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ನಮ್ಮ ಕರ್ತವ್ಯಗಳ ಬಗ್ಗೆ ಸಂವೇದನಾಶೀಲರಾಗಲು ಈಗ ಸಮಯ ಬಂದಿದೆ. ವಿಶೇಷವಾಗಿ, ನಾವು ಹೊಸ ದಶಕಕ್ಕೆ ಕಾಲಿಡುತ್ತಿರುವಾಗ ಮತ್ತು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದರು.
Get in Touch With Us info@kalpa.news Whatsapp: 9481252093

















