ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಈ ಶತಮಾನದ ಅತ್ಯಂತ ಅಪರೂಪದ ಸೂರ್ಯಗ್ರಹಣ ಆರಂಭವಾಗಿದ್ದು, ಕರ್ನಾಟಕ ಸೇರಿದಂತೆ ದೇಶ, ವಿದೇಶಗಳಲ್ಲಿ ಗೋಚರವಾಗಿದೆ.
Tamil Nadu: Solar eclipse witnessed in Chennai pic.twitter.com/7cDz6NSgmc
— ANI (@ANI) December 26, 2019
ಸರಿಯಾಗಿ ಬೆಳಗ್ಗೆ 08.03ಕ್ಕೆ ಸ್ಪರ್ಷವಾಗಿದ್ದು, 11.11ಕ್ಕೆ ಅಂತ್ಯವಾಗಲಿದೆ. 9 ಗಂಟೆ ವೇಳೆಗೆ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ಸರಳ ರೇಖೆಯಲ್ಲಿ ಗೋಚರವಾಗಲಿದೆ.
Kerala: Solar eclipse begins; latest visuals from Kochi. pic.twitter.com/qdt0O52ZiX
— ANI (@ANI) December 26, 2019
ಈ ಬಾರಿಯ ಸೂರ್ಯಗ್ರಹಣ ಮೈಸೂರು, ಕೊಡಗು ಭಾಗಗಳಿಗೆ ವಿಶೇಷ ಎಂದು ಹೇಳಲಾಗಿದ್ದು, ಹೊರತಂತೆ ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಕೋಟ್ಯಂತರ ಮಂದಿ ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
Also Read: ಡಿ.26 ನೆಯ ತಾರೀಕಿನ ಸೂರ್ಯಗ್ರಹಣದ ಪರಿಣಾಮ ಹೇಗಾಗುತ್ತದೆ?
ಪ್ರಮುಖವಾಗಿ, ಬಾನಂಗಳದಲ್ಲಿ ನಡೆಯುತ್ತಿರುವ ಈ ಪ್ರಾಕೃತಿಕ ವಿಸ್ಮಯವನ್ನು ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಸೇರಿದಂತೆ ಕೋಟ್ಯಂತರ ಮಂದಿ ವೀಕ್ಷಿಸುತ್ತಿದ್ದಾರೆ.
ರಾಜ್ಯ, ದೇಶ, ವಿದೇಶಗಳಲ್ಲಿ ಗ್ರಹಣವನ್ನು ವೀಕ್ಷಿಸಲು ಟೆಲಿಸ್ಕೋಪ್ ಸೇರಿದಂತೆ ಸುರಕ್ಷಿತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Get in Touch With Us info@kalpa.news Whatsapp: 9481252093
Discussion about this post