ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀರಾಮನ ಆಡಳಿತದಲ್ಲಿ ಶಂಭೂಕ ಒಬ್ಬ ಶೂದ್ರಜಾತ. ಅವನಿಗೆ ಯಾರೋ ತಪಸ್ಸು ಮಾಡಿ ಮೋಕ್ಷ ಪಡೆಯಬಹುದು ಎಂಬ ಸಲಹೆ ಕೊಟ್ಟರು. ಪಾಪ ಅದನ್ನೇ ನಂಬಿದ ಈ ಬಡ ಭಕ್ತ. ಹೆಂಡತಿ ಮಕ್ಕಳನ್ನು ತೊರೆದು ತಪಸ್ಸಿಗೆ ಕುಳಿತ.
ಕೆಲವು ದಿನಗಳ ಬಳಿಕ ಶ್ರೀ ರಾಮನ ರಾಜ ಸಭೆಗೆ ಒಬ್ಬ ಜ್ಞಾನಿ ಬ್ರಾಹ್ಮಣ ಬಂದ. ಶ್ರೀರಾಮನೇ ಅವನನ್ನು ಸ್ವಾಗತಿಸಿದ. ಆಗ ಆ ಬ್ರಾಹ್ಮಣನು ಪ್ರಸನ್ನನಾಗದೇ, ಹೇ ಮಹಾರಾಜಾ, ನಿನ್ನ ಆಡಳಿತ ವಿಫಲವಾಗುತ್ತಿದೆ. ಅಧರ್ಮ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಹಿರಿಯರೆದುರೇ ಕಿರಿಯರ ಮರಣವಾಗುತ್ತಿದೆ. ಧರ್ಮ ಸೂಕ್ಷ್ಮಗಳನ್ನು ಮರೆಯಬೇಡ’ ಎಂದು ಸಲಹೆ ನೀಡಿದ. ಸ್ವಾಗತದಿಂದ ಪ್ರಸನ್ನನಾಗಿ, ರಾಜ ಕೊಟ್ಟ ದಾನ(ಈಗ ಗಂಜಿ ಎನ್ನುತ್ತಾರೆ!) ಪಡೆದು, ಯಾರು ಹೇಗಿದ್ದರೇನು ಎಂದು ಹೋಗಬಹುದಿತ್ತು. ಆದರೆ ಆ ಪ್ರಜ್ಞಾವಂತ ಬ್ರಾಹ್ಮಣನಿಗೆ ಪ್ರಜಾ ಹಿತ, ರಾಜನ ಹಿತ ಬೇಕಾಗಿತ್ತು.
ಈ ವಿಚಾರದಲ್ಲಿ ರಾಮನು ಲಕ್ಷ್ಮಣನೊಡನೆ ಊರು ಸುತ್ತಿದ. ಅಲ್ಲಿ ಒಂದು ವಿಚಾರ ಸಂಗ್ರಹವಾಯ್ತು. ಓರ್ವ ಸ್ತ್ರೀಯು ಮಕ್ಕಳನ್ನು ಹಿಡಿದುಕೊಂಡು ರೋಧಿಸುತ್ತಾ ರಾಮನಿಗೆ ನಮಸ್ಕರಿಸಿ ತನ್ನ ಕಷ್ಟಗಳನ್ನು ಹೇಳಿಕೊಂಡಳು. ಮಕ್ಕಳು ಆಹಾರ ಇಲ್ಲದೆ ಜೀವ ಬಿಡಲು ತಯಾರಾಗಿರುವಂತೆ ಇದ್ದರು. ಮತ್ತೆ ಪ್ರಶ್ನಿಸಲಾಗಿ, ’ಅವಳು ಶಂಭೂಕನ ಪತ್ನಿ. ಪತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಯೂ, ಆ ಪತಿಯು ಸ್ವಾರ್ಥದಿಂದ ತನ್ನ ಮೋಕ್ಷಕ್ಕೆ ನೀವೆಲ್ಲ ಅಡ್ಡಿ ಎಂದು ತಪಸ್ಸಿಗೆ ತೆರಳಿದ್ದಾನೆ’ ಎಂದು ತಿಳಿಯಿತು. ರಾಮನು ಸತ್ಯ ನಿಷ್ಠುರನು. ಕೂಡಲೇ ಶಂಭೂಕನ ಬಳಿಬಂದು ತಪಸ್ಸಿನಿಂದೆಬ್ಬಿಸಿ, ’ಎಲೌ ಶಂಭೂಕ ನೀನು ತಪ್ಪು ಮಾಡಿದ್ದಿ. ನಿನ್ನ ತಪಸ್ಸು ಬಿಟ್ಟು ಮನೆಗೆ ತೆರಳು. ನಿನ್ನ ಮಡದಿ ಮಕ್ಕಳ ಯೋಗ ಕ್ಷೇಮ ನೋಡು’ ಎಂದ.
ಆಗ ಆ ಮೂರ್ಖನು, ’ಹೇ ರಾಜನ್, ದೇವರ ಸಾಕ್ಷಾತ್ಕಾರ ಪಡೆಯಲೂ ರಾಜನಲ್ಲಿ ಕೇಳಬೇಕೇ? ನಾನು ಶೂದ್ರನೆಂಬ ಕಾರಣಕ್ಕೆ ನನ್ನನ್ನು ಶೋಷಣೆ ಮಾಡುವಿರಾ’ ಎಂದು ಕೇಳಿದ. ತಪಸ್ಸಿನ ಏಕಾಗ್ರತೆಗಾಗಿ ಸುರಾಪಾನ ಮಾಡಿ ಕುಳಿತ ಫಲ ಇದು. ಆಗ ಶ್ರೀರಾಮನು, ’ಹೇ ಮನುಷ್ಯಾ, ಶೂದ್ರನಾದರೇನು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾದರೇನು. ಎಲ್ಲರಿಗೂ ಒಬ್ಬನೇ ದೇವರು. ನಾವೆಲ್ಲ ಸಮಾನರು. ಆದರೆ ಕರ್ತವ್ಯ ವಿಮುಖರಾದರೆ ದೇವರ ಕ್ಷಮೆ ಇಲ್ಲ. ನೀನು ನಿನ್ನ ಸಂಸಾರ ಪಾಲನೆ ಮಾಡುತ್ತಾ, ಭಗವನ್ನಾಮ ಉಚ್ಚರಿಸುತ್ತಾ ಇದ್ದರೆ ಅಲ್ಲಿ ನಿನಗೆ ಮೋಕ್ಷ ಸಿಗುತ್ತೆ. ಇತರರನ್ನು ದುಃಖ ಬರಿಸಿ ಅದ್ಯಾವ ಮೋಕ್ಷ ಸಿಗುತ್ತೆ? ನಿನ್ನ ತಪಸ್ಸಿನ ಜ್ವಾಲೆಯು ಅದೆಷ್ಟೋ ಕಿರಿಯರನ್ನು ಬಲಿ ತೆಗೆದುಕೊಂಡಿದೆ. ಹಾಗಾಗಿ ಎದ್ದೇಳು. ನಿನ್ನ ಕರ್ಮ ನಿರತನಾಗು’ ಎಂದ. ಆದರೆ ಶಂಭೂಕ ಮಣಿಯಲಿಲ್ಲ. ಪ್ರಜಾ ಹಿತರಕ್ಷಣೆಗಾಗಿ ಶ್ರೀರಾಮನು ಶಂಭೂಕನಿಗೆ ಶಿರಚ್ಛೇಧನ ಮಾಡಲು ಆದೇಶ ನೀಡಿದ.
ಇದೇ ವಿಚಾರವನ್ನೇ ಹಿಡಿದುಕೊಂಡು ಗಂಜೀ ಪ್ರಿಯರು ಈಗ,’ ರಾಮನು ಶೂದ್ರಜನಾದ ಶಂಭೂಕನಿಗೆ ಮೋಕ್ಷ ಪಡೆಯುವ ಹಕ್ಕಿಲ್ಲ ಎಂದು ತಲೆ ಕಡಿಸಿದ’ ಎಂದು ಅಪಪ್ರಚಾರ ಮಾಡುತ್ತಾರೆ.
ಇದೇ ರೀತಿ ಪಾದರಾಯನಪುರದ ಕಥೆಯೂ ಅಷ್ಟೆ. ಅಲ್ಲಾಹುವಿನ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಅಪಪ್ರಚಾರ. ಅದು ಹೇಗೆ? ರಾಜನಿಗೆ ಪ್ರಜಾಹಿತ ಮುಖ್ಯ. ಅದಕ್ಕಾಗಿ ಪ್ರಜೆಗಳೂ ಅದೇ ಧ್ಯೇಯದಿಂದ ಸಹಕರಿಸಬೇಕು. ಬದಲಾಗಿ ನಮ್ಮ ಧರ್ಮಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ದಾಂಧಲೆ ಮಾಡಿದರೆ ಅಲ್ಲಾಹು ಕ್ಷಮೆ ನೀಡುತ್ತಾನೋ? ಇದಕ್ಕೆ ಕೆಲವು ಮೂರ್ಖ ಧರ್ಮಗುರುಗಳ ಅಸಂಭದ್ಧ ಸಲಹೆ ಬೇರೆ. ಶಂಭೂಕನಿಗೂ ಇಂತದ್ದೇ ನಕಲಿ ಧರ್ಮ ಗುರುಗಳು ಸಲಹೆ ಮಾಡಿದ್ದು. ರಾಮ ಎಂದೂ ತಪ್ಪು ಮಾಡಲ್ಲ. ಒಂದು ವೇಳೆ ತಪಸ್ಸಿನ ಮೂಲಕ ಮೋಕ್ಷ ಸಿಗುತ್ತಿದ್ದರೆ, ಸೀತೆ ಹೋದರೆ ಹೋಗಲಿ, ಲಕ್ಷ್ಮಣ ಹೇಗಿದ್ದರೇನು? ರಾಕ್ಷಸರ ಉಪಟಳ ಹೇಗಿದ್ದರೇನು? ಎಂದು ಮೋಕ್ಷಕ್ಕಾಗಿ ರಾಮನೂ ವನವಾಸಲ್ಲಿದ್ದು ಘೋರ ತಪವನ್ನಾಚರಿಸಬಹುದಾಗಿತ್ತು.
ಕರ್ಮದ ಜತೆಗೆ ಭಗವಂತನಿಗರ್ಪಣೆ ಮಾಡುತ್ತಾ, ಅವನ ಸ್ಮರಣೆ ಇದ್ದಾಗ ಮಾತ್ರ ಮೋಕ್ಷ ಎಂಬುದೇ ಸನಾತನ ಧರ್ಮದ ಮುಖ್ಯ ಸಂದೇಶ.
ಅಂದು ಶಂಭೂಕ ಉದಾಹರಣೆ. ಇಂದು ಪಾದರಾಯನಪುರದ ಉದಾಹರಣೆ.
Get in Touch With Us info@kalpa.news Whatsapp: 9481252093
Discussion about this post