ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಅಂತರ್ ಜಿಲ್ಲಾ ಪ್ರಯಾಣಕ್ಕೆ ಬ್ರೇಕ್ ಹಾಕಲಾಗಿದೆ.
ರಾಜ್ಯ ಸರ್ಕಾರ ಇಂದು ಸಂಜೆ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಈ ಕುರಿತಂತೆ ಉಲ್ಲೇಖಿಸಲಾಗಿದೆ.
ಸರ್ಕಾರಿ, ಖಾಸಗಿ ಬಸ್’ಗಳು ಹಾಗೂ ಖಾಸಗಿ ವಾಹಗಳು ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ ಎಂದಿರುವ ರಾಜ್ಯ ಸರ್ಕಾರ, ಮಾರ್ಗಸೂಚಿ ಅನ್ವಯ ಅನುಮತಿ ಪಡೆದ ವಾಹನಗಳು ಮಾತ್ರ ಸಂಚರಿಸಬಹುದಾಗಿದೆ.
ತುರ್ತು ಅಗತ್ಯಕ್ಕಾಗಿ ಸಂಚರಿಸುವ ವಾಹನಗಳು ಎಸ್’ಒಪಿ/ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯ ಹಾಗೂ ನೂತನ ಮಾರ್ಗಸೂಚಿಯನ್ವಯ ಸೂಚಿಸಲಾಗಿರುವ ವಿಭಾಗಗಳ ಸಂಸ್ಥೆಗಳ ಮುಖ್ಯಸ್ಥರಿಂದ ಪಡೆದುಕೊಂಡ ಪತ್ರ ಹಾಗೂ ಗುರುತಿನ ಪತ್ರ ಹೊಂದಿರಬೇಕು.
ತುರ್ತು ಸಂದರ್ಭದಲ್ಲಿ ಮಾತ್ರ ಆಟೋ ಹಾಗೂ ಟ್ಯಾಕ್ಸಿಗಳಿಗೆ ಓಡಾಡಲು ಅನುಮತಿಯಿದೆ.
ಆಸ್ಪತ್ರೆಯಲ್ಲಿರುವ ರೋಗಿಗಳನ್ನು ನೋಡಿಕೊಳ್ಳುವ ಅಟೆಂಡರ್’ಗಳಿಗೆ ಓಡಾಡಲು ಅವಕಾಶವಿದೆ.
ಇನ್ನು, ತುರ್ತು ಅಗತ್ಯಕ್ಕಾಗಿ ಸಂಚರಿಸಲು ಮಾರ್ಗಸೂಚಿ ಅನ್ವಯ ಅನುಮತಿ ಪಡೆದ ವಾಹನಗಳು ಮಾತ್ರ ಅಂತರ್ ರಾಜ್ಯಕ್ಕೆ ಸಂಚರಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post