ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಪತಿಯು ತನ್ನ ಪತ್ನಿಯನ್ನು ಭೂತ, ಪಿಶಾಚಿ #Ghost ಎಂದು ಸಂಬೋಧಿಸುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ #HighCourt ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಕುರಿತಂತೆ ನ್ಯಾ.ಬಿಬೇಕ್ ಚೌದರಿ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪತಿ ಅಥವಾ ಅವನ ಸಂಬಂಧಿಕರು ಪತ್ನಿಯ ಮೇಲಿನ ಕ್ರೌರ್ಯವನ್ನು ಹೇಳುವ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕೆಟ್ಟ ಭಾಷೆಯಲ್ಲಿ ಬೈಯ್ಯುವುದು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.

ಜಾರ್ಖಂಡ್ ರಾಜ್ಯದ ಬೊಕಾರೋ ನಿವಾಸಿ ಶಹದೇವ್ ಗುಪ್ತಾ ಹಾಗೂ ನರೇಶ್ ಕುಮಾರ್ ಗುಪ್ತಾ ಅವರುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಬಿಹಾರದಲ್ಲಿ #Bihar ನರೇಶ್ ಕುಮಾರ್ ಮತ್ತು ಜ್ಯೋತಿ ಎಂಬುವವರು 1993ರಲ್ಲಿ ವಿವಾಹವಾಗಿದ್ದರು. ಬಳಿಕ ಪತಿ ಮತ್ತು ಆತನ ತಂದೆ ಹೆಂಡತಿಯ ಮನೆಯವರಿಗೆ ಕಾರನ್ನು ವರದಕ್ಷಿಣೆಯಾಗಿ ನೀಡುವಂತೆ ಪೀಡಿಸುತ್ತಾರೆ ಎಂಬುದಾಗಿ ಪತ್ನಿಯ ಮನೆಯವರು ಪ್ರಕರಣ ದಾಖಲಿಸಿದ್ದರು.
ಅದರಲ್ಲಿ ಪತಿ ತನ್ನನ್ನು ಭೂತ ಪಿಶಾಚಿ ಎಂದೆಲ್ಲಾ ಸಂಬೋಧಿಸುತ್ತಿರುವುದಾಗಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ನಳಂದಾ ನ್ಯಾಯಾಲಯ ಪತ್ನಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗಂಡನ ಮನೆಯವರು ಪಟನಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆರೋಪಿಗಳಿಂದ ಆಕೆಗೆ ಕಿರುಕುಳ ಮತ್ತು ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿದೆ ಎಂದು ಹೈಕೋರ್ಟ್ ಗಮನಿಸಿದೆ ಆದರೆ ದೂರುದಾರರು ಅರ್ಜಿದಾರರ ವಿರುದ್ಧ ಸ್ಪಷ್ಟವಾದ ಆರೋಪಗಳನ್ನು ಮಾಡಲು ವಿಫಲರಾಗಿದ್ದಾರೆ.
ಹೈಕೋರ್ಟ್ ಅವಲೋಕನದ ಆಧಾರದ ಮೇಲೆ, ಕೆಳ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post