ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದೆಡೆ ದೇಶದಾದ್ಯಂತ ಪಿಎಫ್’ಐ ಕಚೇರಿ, ಕಾರ್ಯಕರ್ತರ ನಿವಾಸಗಳ ಮೇಲೆ ಎನ್’ಐಎ ದಾಳಿ ನಡೆಸಿದ್ದರೆ, ಇನ್ನೊಂದೆಡೆ ಇದೇ ಸಂಘಟನೆಯಿಂದ ಭಾರೀ ವಿಧ್ವಂಸಕ ಕೃತ್ಯವೊಂದಕ್ಕೆ ಸಂಚು ರೂಪುಗೊಂಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಪೊಲೀಸರು ಬಂಧಿಸಿರುವ ನಾಸಿರ್ ಪಾಷಾ ಹಾಗೂ ಅಶ್ರಫ್ ಬಳಿಯಲ್ಲಿ ಡೈರಿಯೊಂದು ದೊರೆತಿದ್ದು, ಇದರಲ್ಲಿ ಉಲ್ಲೇಖಗೊಂಡಿರುವ ಟ್ರೈನಿಂಗ್ ಪ್ಲಾನ್ ಎಂಬ ಮಾಹಿತಿ ತನಿಖಾಧಿಕಾರಿಗಳ ತಲೆ ಕೆಡಿಸಿದೆ ಎಂದು ಹೇಳಲಾಗಿದೆ.
ಡೈರಿಯಲ್ಲಿ ಉಲ್ಲೇಖಗೊಂಡಿರುವ ಟ್ರೈನಿಂಗ್ ಪ್ಲಾನ್ ಎಂಬ ಮಾಹಿತಿಯ ಜಾಡು ಹಿಡಿದು ಡಿಜೆ ಹಳ್ಳಿ ಹಾಗೂ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ನಾಸಿರ್ ಪಾಷಾ ಹಾಗೂ ಅಶ್ರಫ್’ರನ್ನು ತೀವ್ರ ವಿಚಾರಣೆಗೆ ಒಳ ಪಡಿಸಿದರೂ ಸಹ ಅವರುಗಳು ಮಾತ್ರ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ವರದಿಯಾಗಿದೆ.
ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ದಾಳಿ ಹಿಂದಿನ ದಿನವೂ ಸಹ ಇವರುಗಳಿಗೆ ಲಕ್ಷಾಂತರ ರೂಪಾಯಿ ಹಣ ಫಂಡ್ ಹರಿದುಬಂದಿದೆ ಎಂದು ಹೇಳಲಾಗಿದ್ದು, ಈ ಕುರಿತ ತನಿಖೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post