ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಂದಿ ಹಾಗೂ ದನಕರುಗಳಿಂದ ಬೆಳೆ ಉಳಿಸಿಕೊಳ್ಳಲು ಹೊಲಕ್ಕೆ ಹಾಕಿದ್ದ ವಿದ್ಯುತ್ ಎರಡು ಕಾಡಾನೆಗಳನ್ನು ಬಲಿ ಪಡೆದಿದೆ.
ಸಮೀಪದ ಆಯನೂರಿನ ಚೆನ್ನಹಳ್ಳಿಯ ಬಳಿ ವಿದ್ಯುತ್ ತಗುಲಿ ಎರಡು ಕಾಡು ಆನೆಗಳು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಹಂದಿ ಹಾಗೂ ಜಾನುವಾರುಗಳ ಹಾವಳಿಯನ್ನ ತಪ್ಪಿಸಲು ವಿದ್ಯುತ್ ತಂತಿ ಹಾಕಿದ್ದರ ಪರಿಣಾಮ ರಾತ್ರಿ ವೇಳೆಯಲ್ಲಿ ಬಂದ ಕಾಡಾನೆಗಳು ಸಾವನ್ನಪ್ಪಿವೆ.
ಒಂದು 28 ವರ್ಷ ಮತ್ತೊಂದು 20 ವರ್ಷದ ಆನೆ ಸತ್ತಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಚೆನ್ನಹಳ್ಳಿಯ ಚಂದ್ರಪ್ಪ ಎಂಬುವರಿಗೆ ಸೇರಿದ ಹೊದಲ್ಲಿ ಜೋಳ ಬೆಳೆಯಲಾಗಿತ್ತು.
ಆನೆಗಳು ರಾತ್ರಿಯ ವೇಳೆಯಲ್ಲಿ ಬಂದು ಹಾವಳಿ ಮಾಡಲು ಯತ್ನಿಸಿವೆ. ವಿದ್ಯುತ್ ತಗುಲಿ ಎರಡೂ ಕಾಡಾನೆಗಳು ಸತ್ತಿದೆ ಎಂದು ಅರಣ್ಯ ಇಲಾಖೆಯವರು ಸ್ಪಷ್ಟಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post