ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಡಿಮಾನಿಟೈಸೇಷನ್ #demonetization ಬಳಿಗೆ 2000 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲು ಪ್ರಧಾನಿ ನರೇಂದ್ರ ಮೋದಿ #PMNarendraModi ಅವರಿಗೆ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ.
ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರ ಹೇಳಿಕೆಯಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
2016ರ ನವೆಂಬರ್ 16ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಂತರ ಹಣದ ತುರ್ತು ಅಗತ್ಯ ಪೂರೈಕೆಗಾಗಿ 2000 ರೂ. ಮುಖಬೆಲೆಯ ನೋಟಿನ ಪ್ರಸ್ತಾವನೆಯನ್ನು ಅಧಿಕಾರಿಗಳು ಪ್ರಧಾನಿ ಮುಂದೆ ಇಟ್ಟಿದ್ದರು. ಆದರೆ, ಇದನ್ನು ತಿರಸ್ಕರಿಸಿದ್ದ ಪ್ರಧಾನಿಯವರು 2000 ರೂ. ಮುಖಬೆಲೆಯ ನೋಟುಗಳನ್ನು ಬಡ ಹಾಗೂ ಮಧ್ಯಮ ವರ್ಗದ ಜನರು ಬಳಸಲು ಕಷ್ಟವಾಗುತ್ತದೆ. ಈ ವರ್ಗದ ಜನರು ಹೆಚ್ಚಾಗಿ 100 ಹಾಗೂ 500 ರೂ. ಮುಖಬೆಲೆಯ ನೋಟನ್ನು ಬಳಸುತ್ತಾರೆ ಎಂದು ಆಕ್ಷೇಪಿಸಿದ್ದರು ಎಂದಿದ್ದಾರೆ.
ಆದರೆ, ಮೋದಿ ಆಕ್ಷೇಪಕ್ಕೆ ಆಪ್ತ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟ ನಂತರ ಅವರು ಒಪ್ಪಿಕೊಂಡಿದ್ದರು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post