ಅಯೋಧ್ಯೆಯರಸ ಪ್ರಭು ಶ್ರೀ ರಾಮಚಂದ್ರನ ಜನ್ಮ ವೃತ್ತಾಂತ
ಅಯೋಧ್ಯೆಯ ಇನವಂಶಜ ಪ್ರಭು ಶ್ರೀರಾಮಚಂದ್ರನ ಸಕಲ ವೃತ್ತಾಂತವನ್ನೂ ಬರೆದವರು ವಾಲ್ಮೀಕಿ ಮಹರ್ಷಿಗಳು. ಸಾಮಾನ್ಯ ಪುರಾತನ ಋಷಿಗಳು ಯಾವುದೇ ಘಟನೆ, ವೃತ್ತಾಂತಗಳನ್ನು ಬರೆಯುವಾಗ ನಭೋ ಮಂಡಲಗಳ ಗ್ರಹಸ್ಥಿತಿಗಳನ್ನು ಉಲ್ಲೇಖಿಸದೆ ಇರುವುದಿಲ್ಲ. ಯಾಕೆಂದರೆ ಬ್ರಹ್ಮಾಂಡದಲ್ಲಿ ಎಲ್ಲವೂ ಅಳಿದು ಹೋಗುವಂತದ್ದು. ಆದರೆ ಗ್ರಹ ನಕ್ಷತ್ರಗಳಿಗೆ ಅಳಿವಿಲ್ಲ ಮತ್ತು ನಿಯಮ ಬದ್ಧವಾದ(systematic) ಆಯಾಮಗಳಲ್ಲಿ ಇರುವಂತದ್ದು. ಯಾವುದು systematicನಲ್ಲಿ ಇರುತ್ತದೋ ಅದರ ಲೆಕ್ಕಾಚಾರ ಮಾಡಬಹುದು. ಆದರೆ ಜ್ಯೋತಿಷ್ಯದ ಪರಿಪೂರ್ಣತೆ ಇರುವವರಿಗೆ ಕಷ್ಟವಿಲ್ಲ. ಯಾಕೆಂದರೆ ಇದಕ್ಕೆಲ್ಲ ಒಂದು ಸೂತ್ರವಿದೆ. ಅಂದರೆ statics ಇರುತ್ತದೆ.
ಈ ಪ್ರಕಾರ ಹೋದಾಗ…!
ಆ ಪ್ರಕಾರದಲ್ಲಿ ಹಿಂದೆ ಹಿಂದೆ ಸರಿದಂತೆ ನಿಖರ ದಿನಗಳು ಸಿಗುತ್ತದೆ. ಪುರಾಣಗಳ ಘಟನೆ, ಮಹಾತ್ಮರ ಜನನದ ಬಗ್ಗೆ ದಿನಾಂಕ ತಿಳಿಯಬೇಕಾದರೆ ಇರುವ ಮಾರ್ಗ ಕೇವಲ ಜ್ಯೋತಿಷ್ಯ ಮಾತ್ರ. ಗ್ರಹ ನಕ್ಷತ್ರ ಸ್ಥಿತಿಗಳು ಪುರಾಣಗಳ ಘಟನಾವಳಿಗಳಲ್ಲಿ ಉಲ್ಲೇಖಿಸಿರುತ್ತದೆ. ಈ ಪ್ರಕಾರ ಹೋದಾಗ ತಿಳಿಯಬಹುದು. ಮರಾಠಿ ಮೂಲದ ಡಾ॥ ಪದ್ಮಾಕರ ವಿಷ್ಣು ವರ್ತಕರ ಸಂಶೋಧನೆಯು ಈ ಲೇಖನಕ್ಕೆ ಆಧಾರ. ಆದರೂ ನಾನೂ ಇದನ್ನು ಒಪ್ಪಿಕೊಳ್ಳಬೇಕಾದರೆ ನನ್ನಲ್ಲಿರುವ ಸಂಶೋಧನಾತ್ಮಕ ಜ್ಞಾನವೂ ಮುಖ್ಯ. ಇಲ್ಲದಿದ್ದರೆ ಇದು copy & past ಮಾಡಿದಂತಾಗುತ್ತದೆ.
144 ವರ್ಷಗಳಿಗೊಮ್ಮೆ ರವಿಯು ಒಂದು ದಿನ ಹಿಂದೆ ಸರಿಯುತ್ತಾನೆ. ಇದರಿಂದ ಆಯನ ವ್ಯತ್ಯಾಸಗಳಾಗುತ್ತದೆ. ಜನವರಿ 14 ನೇ ತಾರೀಕು ಮತ್ತು ಜುಲೈ 14 ತಾರೀಕು ಉತ್ತರಾಯಣ- ದಕ್ಷಿಣಾಯನ ಪ್ರವೇಶ ಕಾಲ ಎಂಬುದು ರೂಢಿಯಾಗಿದೆ. ಅದು ಆಗಿನ ಲೆಕ್ಕಾಚಾರ. ಆದರೆ ಈಗ ಈ ರವಿಯ ಸಂಚಾರ ನಿಯಮದ ಪ್ರಕಾರ ಡಿಸೆಂಬರ್ 22- ಜೂನ್ 22 ಉತ್ತರ- ದಕ್ಷಿಣಾಯನ ಆರಂಭ ಕಾಲವಾಗಿದೆ. ಇದೇ ರೀತಿ ರಾಮಾಯಣದ ಶ್ರೀರಾಮ ಜನನ ಗ್ರಹಸ್ಥಿತಿಯನ್ನಾಧರಿಸಿ ಹಿಂದೆ ಸರಿದಾಗ ಈಗಿನ calendar ಪ್ರಕಾರದ ದಿನ ಲಭ್ಯವಾಗುತ್ತದೆ. ಸದ್ಯ ನನ್ನಲ್ಲಿ ಜಗನ್ನಾಥ ಹೊರ ಎಂಬ ಪಂಚಾಗದಲ್ಲಿ ಲಭ್ಯವಾಗಿದ್ದು ಕ್ರಿಪೂ 5100.
ವಾಲ್ಮೀಕಿ ಮಹರ್ಷಿಗಳ ಉಲ್ಲೇಖ ಹೀಗಿದೆ
ಇನ್ನು ಹಿಂದೆ ಹೋಗಬೇಕಾದರೆ ಕೈಯ ಲೆಕ್ಕಾಚಾರವೇ ಬೇಕಷ್ಟೆ. ಅಷ್ಟು ತಾಳ್ಮೆ ಸಮಯ ನನ್ನಲ್ಲಿ ಇಲ್ಲ. ಒಂದು ಸಾಮಾನ್ಯ ಗಣನೆಯಲ್ಲಿ ನೋಡಿದಾಗ, ಡಾ॥ ಪದ್ಮಾಕರ್ ವರ್ತಕ್ ಬರೆದದ್ದು ನಿಖರವಾಗಿದೆ ಎಂದು ಹೇಳಬಲ್ಲೆ.
ಶ್ರೀರಾಮನು ಜನಿಸಿದ್ದನ್ನು ವಾಲ್ಮೀಕಿ ಮಹರ್ಷಿಗಳು-ಚೈತ್ರ ಮಾಸೇ ಪುನರ್ವಸು ನಕ್ಷತ್ರೇ ಶುಕ್ಲ ನವವ್ಯಾಯಾಂ ತಿಥೌ ಎಂದು ಪ್ರಾರಂಭಿಸಿದ್ದಾರೆ. ಅಲ್ಲದೆ ಉಚ್ಛ ಕ್ಷೇತ್ರಗತ ಕುಜಾದಿ ಪಂಚ ಗ್ರಹಗಳೂ, ಸ್ವಕ್ಷೇತ್ರ ಚಂದ್ರನೂ, ಉಚ್ಛ ಕ್ಷೇತ್ರ ರವಿಯೂ ಜನನಕಾಲದ ಕರ್ಕ ಲಗ್ನಕ್ಕೆ ಇತ್ತು ಎಂಬುದನ್ನೂ ವಾಲ್ಮೀಕಿ ಮಹರ್ಷಿಗಳು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹೀಗಿದ್ದ ಮೇಲೆ ಜ್ಯೋತಿಷ್ಯ ಗಣನೆಗೆ ಇನ್ನೂ ಸುಲಭವೇ ಆಗುತ್ತದೆ.
ಇದಲ್ಲದೆ ಗ್ರಹರ ಅಂಶಗಳನ್ನೂ(degree) ಬರೆದರು. ಕರ್ಕ ರಾಶೌ ಪಂಚಾಂಶೇ ಗುರು, ಮೇಷೇ ದಶಾಂಶೇ ರವಿ, ಮಕರೌ ಅಷ್ಟಾವಿಂಶತಾಂಶೇ ಕುಜ, ತುಲೇ ವಿಂಶತಿ ಅಂಶೇ ಮಂದಃ, ಮೀನೌ ಸಪ್ತವಿಂಶತಾಂಶೇ ಶುಕ್ರ, ಕನ್ಯೇ ಪಂಚದಶಾಂಶೇ ಬುಧಃ ಇತ್ಯಾದಿ ಖಗೋಲ ವರ್ಣನೆಗಳನ್ನು ಮಾಡಿದ್ದಾರೆ. ಆದರೆ ರಾಹು ಕೇತುಗಳ ವರ್ಣನೆ ಸಿಗುವುದಿಲ್ಲ. ಇರಲಿ, ಆ ಗ್ರಹರು ಛಾಯಾ ಗ್ರಹರಷ್ಟೆ. ಇದನ್ನೆಲ್ಲ ವಿಮರ್ಷೆ ಮಾಡಿದಾಗ ಡಾ॥ ವರ್ತಕ್ ಬರೆದ ದಿನಾಂಕ 17.12.7323 BC ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಮೂರ್ಖರಲ್ಲ ನಮ್ಮ ಜನ
ಇದೂ ಅಲ್ಲದೆ ಶ್ರೀರಾಮನ ವಂಶಾವಳಿಯಲ್ಲಿ ಶ್ರೀರಾಮನ ನಂತರದ ಅರಸರು, ಮುಂದೆ ಚಂದ್ರವಂಶದ ಭರತಾದಿ ವಂಶದ ಪೀಳಿಗೆಗಳ ಸಾಮಾನ್ಯ ತಲೆಮಾರು ಲೆಕ್ಕಾಚಾರ ಮಾಡಿದಾಗ ಈ ಕಾಲಕ್ಕೆ ಹತ್ತಿರ ಹತ್ತಿರವಾಗುತ್ತದೆ.
ಸಾವಿರಾರು ವರ್ಷಗಳವರೆಗೆ ಒಂದು ಆಡಳಿತದ ನೆನಪು ಮರುಕಳಿಸುತ್ತಿರಬೇಕಾದರೆ ಅದು ನಡೆದಿರಲೇಬೇಕು. ಯಾವುದೋ ಕಾಲ್ಪನಿಕ ಸಿನಿಮಾ, ಕಾದಂಬರಿ ಕಥೆಗಳು ಅಬ್ಬಬ್ಬಾ ಎಂದರೆ ನೂರು ವರ್ಷ ನೆನಪಿನಂಗಳದಲ್ಲಿ ಇರಬಹುದಷ್ಟೇ. ಅದೂ ಅಲ್ಲದೆ ಶ್ರೀರಾಮನನ್ನು ದೇವರಾಗಿ ಪುರಾತನ ಕಾಲದಿಂದಲೇ ಪೂಜಿಸುತ್ತಿರಬೇಕಾದರೆ ಶ್ರೀರಾಮನೆಂಬ ದೈವೀ ಪುರುಷ ಇದ್ದನೆಂಬುದು ಖಚಿತವಾಗುತ್ತದೆ. ಯಾವುದೋ ಕಾಲ್ಪನಿಕ ವ್ಯಕ್ತಿಯನ್ನು ಸಹಸ್ರಾರು ವರ್ಷಗಳಿಂದ ಪೂಜನೆ ಮಾಡುವಷ್ಟು ಮೂರ್ಖದೇಶ ನಮ್ಮದಲ್ಲವೇ ಅಲ್ಲ.
ಹಾಗಾಗಿ ರಾಮನೂ ಇದ್ದ, ಕೃಷ್ಣನೂ ಇದ್ದ ಮತ್ತು ಅವರು ನಮ್ಮ ಆರಾಧ್ಯ ದೇವರೂ ಕೂಡ ಎಂದು ಎದೆತಟ್ಟಿ ಹೇಳಬಹುದು.
Discussion about this post