ಕಲ್ಪ ಮೀಡಿಯಾ ಹೌಸ್
ಸಿದ್ರಾಮಯ್ಯನವರು ಒಂದು ರೂಪಾಯಿಗೆ ಕೆಜಿ ಅಕ್ಕಿ ಕೊಡೋ ಬದ್ಲು ಆ ದುಡ್ಡಲ್ಲಿ ಎಲ್ಲ ಹಾಸ್ಪಿಟಲ್’ಗೂ ಒಂದೊಂದು ಆಕ್ಸಿಜನ್ ಪ್ಲಾಂಟ್ ಹಾಕ್ಸಿದ್ದಿದ್ರೆ ಇವತ್ತು ಆಕ್ಸಿಜನ್ ಕೊರತೆಯಿಂದ ಜನ ಸಾಯ್ತಿರ್ಲಿಲ್ಲ! ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಿ ಓಟು ಗಿಟ್ಟಿಸಿಕೊಳ್ಳೋ ಬದಲು ಪ್ರತಿ ಆಸ್ಪತ್ರೆಗೂ 20-20 ಬೆಡ್ ಜಾಸ್ತಿ ಮಾಡಿದ್ದಿದ್ರೆ ಇವತ್ತು ಹಾಸಿಗೆ ಕೊರತೆಯಿಂದ ಜನ ಸಾಯ್ತಿರ್ಲಿಲ್ಲ!
70 ವರ್ಷ ದೇಶ ಆಳಿದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಹಜ್’ಗೆ ಕಳ್ಸೋ ಬದಲು, ಕಂಡ ಕಂಡಲ್ಲಿ ಹಜ್ ಭವನ ಕಟ್ಟಿಸೋ ಬದಲು, ಸಚಿವರ ಕೈಲಿ, ಅಳಿಯನ ಕೈಲಿ ಹಗರಣಗಳನ್ನು ಮಾಡಿಸಿ ಜನರ ದುಡ್ಡನ್ನು ನುಂಗೋ ಬದಲು ಊರಿಗೊಂದು ಆಸ್ಪತ್ರೆ ಕಟ್ಟಿಸಿದ್ದಿದ್ರೆ ಇವತ್ತು ಜನ ಆಸ್ಪತ್ರೆ ಇಲ್ಲದೇ ಸಾಯ್ತಿರ್ಲಿಲ್ಲ! ಅಂತೆಲ್ಲಾ ಹೇಳಿದ್ರೆ ಬಾಲಿಶ ಅನ್ಸತ್ತಾ?

70 ವರ್ಷ ಮಾಡಿರೋ ಗಲೀಜನ್ನು ತೊಳೆಯೋಕೆ ಇನ್ನೂ ಸ್ವಲ್ಪ ಸಮಯ ಬೇಕು. 2023 ಕ್ಕೂ ನಮಗೆ ಮೋದೀನೇ ಬೇಕು. ಅದಕ್ಕೆ ಇನ್ನೂ 10 ವರ್ಷ ಅಧಿಕಾರವನ್ನು ಪಡೆಯುವ ಆಲೋಚನೆ ಬಿಟ್ಟು ಮರ್ಯಾದೆಯಿಂದ ಕೂತ್ಕೊಳ್ಳಿ. ಪೆಟ್ರೋಲ್ ರೇಟು ಅದೂ ಇದು ಅಂತ ಸಣ್ಣಪುಟ್ಟ ಸಮಸ್ಯೆಗಳನ್ನೇ ಬೂತಗನ್ನಡಿಯಲ್ಲಿ ದೊಡ್ಡದು ಮಾಡಿ ತೋರಿಸೋಕೆ ಹೋದ್ರೆ ಜನ ಕೇಳಲ್ಲ. ಮೂರು ತಿಂಗಳು ಬಿಟ್ಟು ನೋಡಿ ಫ್ರೀ ವ್ಯಾಕ್ಸಿನ್ ಕೊಟ್ಟು ಕೋಟಿ ಜನರ ಜೀವವನ್ನು ಉಳಿಸಿದ ಪುಣ್ಯಾತ್ಮ ಮೋದಿ ಅನ್ನೋದನ್ನ ನೀವೇ ಒಪ್ಕೊಳೋ ಸ್ಥಿತಿ ನಿರ್ಮಾಣ ಆಗತ್ತೆ. ಒಪ್ಕೊಳ್ಳದೇ ಇದೇ ಥರ ಕೀಳು ರಾಜಕೀಯ ಮಾಡ್ತಾ ಇದ್ರೆ ಮುಂದಿನ ಚುನಾವಣೆಯಲ್ಲಿ ನೀವು ಕಾಣೆ ಆಗೋಗ್ತೀರಾ! ಜನ_ಪೆದ್ದರಲ್ಲ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post