ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಪಾಕಿಸ್ತಾನ #Pakistan ಮತ್ತು ನೆರೆಯ ದೇಶಗಳ ಕೆಲವು ಭಾಗಗಳಲ್ಲಿ ಶುಕ್ರವಾರ ಮುಂಜಾನೆ 5.8 ತೀವ್ರತೆಯ ಭೂಕಂಪ #Earthquake ಸಂಭವಿಸಿದೆ.
ಪಾಕಿಸ್ತಾನ ಹವಾಮಾನ ಇಲಾಖೆ (PMD) ಪ್ರಕಾರ, ಭಾರತದ ಸರಾಸರಿ ಸಮಯ 2 ಗಂಟೆಗೆ ತಜಿಕಿಸ್ತಾನ್-ಕ್ಸಿನ್‌ಜಿಯಾಂಗ್ (ಚೀನಾ) ಗಡಿ ಪ್ರದೇಶದಲ್ಲಿ 159 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇಸ್ಲಾಮಾಬಾದ್, ಕಾರ್ಚಿ, ಲಾಹೋರ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಖೈಬರ್ ಪಖ್ತುನ್ಖ್ವಾದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ, ತಜಿಕಿಸ್ತಾನ್, ಚೀನಾ ಮತ್ತು ಅಫ್ಘಾನಿಸ್ತಾನ್ ಪೀಡಿತ ದೇಶಗಳಲ್ಲಿ ಸೇರಿವೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದ್ದು, ತಜಿಕಿಸ್ತಾನ್ ಮತ್ತು ಅಫ್ಘಾನಿಸ್ತಾನ್ ಸ್ವಲ್ಪ ಕಂಪನ ಅನುಭವಿಸಿವೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















