ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಆಫ್ಗಾನ್ ಗಡಿಯ ಬಳಿಯಲ್ಲಿ ಉಗ್ರರೊಂದಿಗೆ ಘರ್ಷಣೆಯಲ್ಲಿ ಪಾಕಿಸ್ತಾನದ ಸೇನಾ ಕ್ಯಾಪ್ಟನ್ ಸೇರಿದಂತೆ ಆರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಹವಾಲ್ದಾರ್ ಅಮ್ಜದ್ ಅಲಿ (39, ಸ್ವಾಬಿ), ನಾಯಕ್ ವಕಾಸ್ ಅಹ್ಮದ್ (36, ರಾವಲ್ಪಿಂಡಿ), ಸಿಪಾಯಿ ಐಜಾಜ್ ಅಲಿ (23, ಶಿಕಾರ್ಪುರ), ಸಿಪಾಯಿ ಮುಹಮ್ಮದ್ ವಲೀದ್ (23, ಝೀಲಂ), ಮತ್ತು ಸಿಪಾಯಿ ಮುಹಮ್ಮದ್ ಶಹಬಾಜ್ (32, ಖೈರ್ಪುರ) ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯ ಪ್ರಕಾರ, ಕುರ್ರಂನ ಡೋಗರ್ ಪ್ರದೇಶದಲ್ಲಿ ನಿಗದಿತ ಮಾಹಿತಿಯನ್ನು ಆಧಾರಿಸಿ ಕಾರ್ಯಾಚರಣೆಯಲ್ಲಿ ಕನಿಷ್ಠ ಏಳು ಉಗ್ರರು ಸಾವನ್ನಪ್ಪಿದ್ದಾರೆ.
ಇಂದು ಸಾವನ್ನಪ್ಪಿದವರಲ್ಲಿ, ಮಿಯಾನ್ವಾಲಿಯ 24 ವರ್ಷದ ವೈದ್ಯಕೀಯ ಅಧಿಕಾರಿ ಕ್ಯಾಪ್ಟನ್ ನೋಮನ್ ಸಲೀಮ್ ಕೂಡ ಸೇರಿದ್ದಾರೆ. ವಿದೇಶಿ ಪ್ರಾಯೋಜಿತ ಮತ್ತು ಬೆಂಬಲಿತ ಭಯೋತ್ಪಾದನೆಯ ಬೆದರಿಕೆಯನ್ನು ಅಳಿಸಿಹಾಕಲು ‘ಅಜ್ಮ್-ಎ-ಇಸ್ತೆಹ್ಕಾಮ್’ ಅಡಿಯಲ್ಲಿ ನಿರಂತರ ಭಯೋತ್ಪಾದನಾ ನಿಗ್ರಹ ಅಭಿಯಾನವು ಪೂರ್ಣ ವೇಗದಲ್ಲಿ ಮುಂದುವರಿಯುತ್ತದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ.

ಭದ್ರತಾ ಪಡೆಗಳು 2,366 ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸಿದ್ದು, 1,124 ಉಗ್ರರನ್ನು ಬಂಧಿಸಲಾಗಿದೆ ಮತ್ತು 368 ಭಯೋತ್ಪಾದಕರನ್ನು ಎನ್ಕೌಂಟರ್’ಗಳಲ್ಲಿ ಕೊಲ್ಲಲಾಗಿದೆ ಎಂದು ವರದಿ ತಿಳಿಸಿದೆ.
ಫೀಲ್ಡ್ ಮಾರ್ಷಲ್ ಅಹ್ಮದ್ ಕಾಝಿಂ 100 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾನೆ. ಕಾಝಿಂ ತಲೆಗೆ ಪಾಕಿಸ್ತಾನ ಸರ್ಕಾರ 10 ಕೋಟಿ ಪಾಕಿಸ್ತಾನಿ ರೂ. ಬಹುಮಾನ ಘೋಷಿಸಿದೆ. ಕಳೆದ ವಾರವಷ್ಟೇ ಲಕ್ಕಿ ಮರ್ವಾತ್ ಜಿಲ್ಲೆಯಲ್ಲಿ ನಡೆದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಎಂಟು ಟಿಟಿಪಿ ಉಗ್ರರನ್ನು ಹತ್ಯೆ ಮಾಡಿ, ಐವರನ್ನು ಗಾಯಗೊಳಿಸಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಈ ಪ್ರತೀಕಾರದ ದಾಳಿ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post