ನವದೆಹಲಿ: ಸಿಎಎ ವಿರುದ್ಧದ ಪ್ರತಿಭಟನೆ ಹೆಸರಿನಲ್ಲಿ ಗಲಭೆ ಸೃಷ್ಠಿಯಾಗಿ, 22 ಮಂದಿಯನ್ನು ಬಲಿ ಪಡೆದ ಹಿಂಸಾಚಾರ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.
ಇದೇ ವೇಳೆ ಗಲಭೆ ನಿಯಂತ್ರಣ ಹೊಣೆಯನ್ನು ಕೇಂದ್ರ ಸರ್ಕಾರದಿಂದ ವಹಿಸಿಕೊಂಡ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ತಮ್ಮ ಅತ್ಯದ್ಬುತ ಕಾರ್ಯತಂತ್ರದಿಂದ ಕೇವಲ ಕೆಲವೇ ಗಂಟೆಯಲ್ಲಿ ಗಲಭೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
#WATCH Delhi: National Security Advisor (NSA) Ajit Doval takes stock of the situation in Maujpur area of #NortheastDelhi pic.twitter.com/f8Jc7LR7P0
— ANI (@ANI) February 26, 2020
ಇನ್ನು, ಗಲಭೆ ಪೀಡಿತ ಪ್ರದೇಶಗಳಿಗೆ ಇಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪ್ರಸ್ತುತ ಪರಿಸ್ಥಿತಿ ಹತೋಟಿಯಲ್ಲಿದೆ. ಈ ಪ್ರದೇಶಗಳಲ್ಲಿ ಶೀಘ್ರದಲ್ಲೇ ಶಾಂತಿ ನೆಲೆಸುತ್ತದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಿ, ಶಾಂತಿ ನೆಲೆಸುವಂತೆ ಮಾಡಲು ಸಾರ್ವಜನಿಕರ ಸಹಕಾರವೂ ಸಹ ಅಗತ್ಯ ಎಂದಿದ್ದಾರೆ.
ಅಜಿತ್ ಧೋವಲ್ ಅವರ ಭೇಟಿಯ ವೇಳೆ ಅವರೊಂದಿಗೆ ಮಾತನಾಡಿದ ಓರ್ವ ಪುಟ್ಟ ಬಾಲಕಿ, ನಾನು ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ತರಗತಿಗೆ ಹೋಗದೇ ತೊಂದರೆಯಾಗಿದೆ. ಇಲ್ಲಿನ ಪರಿಸ್ಥಿತಿ ನಮಗೆ ಭಯ ಉಂಟು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
#WATCH Delhi: National Security Advisor (NSA) Ajit Doval interacts with the local residents of #NortheastDelhi. While speaking to a woman resident he says, “Prem ki bhaavna bana kar rakhiye. Hamara ek desh hai, hum sab ko milkar rehna hai. Desh ko mil kar aage badhana hai.” pic.twitter.com/Y1tyAz2LXQ
— ANI (@ANI) February 26, 2020
ಇದಕ್ಕೆ ಪ್ರತಿಕ್ರಿಯಿಸಿದ ಧೋವಲ್, ತಮ್ಮ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ತಮ್ಮ ಸಮಾಜ ಮತ್ತು ನೆರೆಹೊರೆಯವರನ್ನು ಪ್ರೀತಿಸುತ್ತಾರೆ. ಪ್ರತಿಯೊಬ್ಬರೂ ಇತರರೊಂದಿಗೆ ಪ್ರೀತಿ ಮತ್ತು ಸಾಮರಸ್ಯದಿಂದ ಬದುಕಬೇಕು. ಜನರು ಪರಸ್ಪರರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು ಮತ್ತು ಅವುಗಳನ್ನು ಹೆಚ್ಚಿಸಬಾರದು. ಎಲ್ಲವೂ ಶೀಘ್ರ ಸರಿಹೋಗುತ್ತದೆ. ಭಯ ಬೇಡ ಎಂದು ಭರವಸೆ ನೀಡಿದರು.
ಈಶಾನ್ಯ ದೆಹಲಿಯ ಸೀಲಂಪುರ, ಮೌಜ್ಪುರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಭದ್ರತಾ ಅಧಿಕಾರಿಗಳೊಂದಿಗೆ ಚುಟುಕು ಸಭೆ ನಡೆಸಿದ ಧೋವಲ್, ಅಗತ್ಯ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
Discussion about this post