ಶ್ರೀನಗರ: ನಿರಂತರ ಉಗ್ರರ ಪೀಡಿತ ರಾಜ್ಯ ಜಮ್ಮು ಕಾಶ್ಮೀರದಲ್ಲಿ 40 ಸಾವಿರ ಯೋಧರ ನಿಯೋಜನೆಯ ಭಾರೀ ಕುತೂಹಲ ಹುಟ್ಟು ಹಾಕಿರುವ ಬೆನ್ನಲ್ಲೇ, ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿರುವುದು ತೀವ್ರ ಸಂಚಲನ ಸೃಷ್ಠಿಸಿ, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಜಮ್ಮು ಕಾಶ್ಮೀರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಂದರೆ ಹೆಚ್ಚುವರಿಯಾಗಿ 40 ಸಾವಿರ ಯೋಧರನ್ನು ನಿಯೋಜನೆ ಮಾಡಿರುವುದು ಯಾವ ಕಾರಣಕ್ಕಾಗಿ ಎಂಬ ಪ್ರಶ್ನೆಯಲ್ಲಿ ಕಾಶ್ಮೀರಿಗರಲ್ಲಿ ಹುಟ್ಟುಹಾಕಿದ್ದು, ಕಣಿವೆ ರಾಜ್ಯವನ್ನು ಮೂರು ಪ್ರತ್ಯೇಕ ಭಾಗವನ್ನಾಗಿ ವಿಭಾಗಿಸುವ ಅಥವಾ ರಾಜ್ಯಕ್ಕಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಸಾಧ್ಯತೆಯಿದೆ. ಹಾಗಾಗೀ, ಈ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎನ್ನಲಾಗಿದೆ.
ಇದರ ಬೆನ್ನಲ್ಲೇ, ದಶಕಗಳ ಹಿಂದೆ ಉಗ್ರರ ಸವಾಲನ್ನು ಸ್ವೀಕರಿಸಿ ಲಾಲ್ ಚೌಕದಲ್ಲಿ ಮೋದಿ ಧ್ವಜಾರೋಹಣ ಮಾಡಿದ್ದರು. ಈಗಲೂ ಸಹ ಅದೇ ಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದು, ಇದಕ್ಕಾಗಿ ಈ ತಯಾರಿ ನಡೆಸಲಾಗಿದೆ ಎಂದು ಹೇಳಲಾಗಿದ್ದರೂ, ಇದರ ಸಾಧ್ಯತೆ ಕಡಿಮೆ ಎಂದೂ ಸಹ ಅಂದಾಜಿಸಲಾಗಿದೆ.
ಇನ್ನು, ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ಭಾರೀ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿ, ಜಮ್ಮು ಕಾಶ್ಮೀರವನ್ನು ತೊರೆಯುವಂತೆ ಯಾತ್ರಾರ್ಥಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಕುರಿತಂತೆ ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಭದ್ರತಾ ಪ್ರಕಟಣೆ ಹೊರಡಿಸಿದ್ದು, ಸದ್ಯ ರಾಜ್ಯದಲ್ಲಿರುವ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿ ಬದಲಾವಣೆಯಾಗುತ್ತಿದ್ದು, ಯಾತ್ರಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
Critical Condition Turned Around with Timely Medical Intervention
Kalpa Media House | Bengaluru(WhiteFiled) | A 26-year-old man from West Bengal, who had been suffering from a serious condition...
Read moreDetails
















