ನವದೆಹಲಿ: ಮುಂಬೈನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಜೆಟ್ ಏರ್ ವೇಸ್‌ಗೆ ಸೇರಿದ ವಿಮಾನದ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಯಾಣಿಕರ ಕಿವಿ ಹಾಗೂ ಮೂಗಿನಿಂದ ರಕ್ತಸ್ರಾವವಾಗಿ, ತಲೆ ನೋವು ಎದುರಿಸಿದ ಘಟನೆ ನಡೆದಿದೆ.
Panic situation due to technical fault in @jetairways 9W 0697 going from Mumbai to Jaipur. Flt return back to Mumbai after 45 mts. All passengers are safe including me. pic.twitter.com/lnOaFbcaps
— Darshak Hathi (@DarshakHathi) September 20, 2018
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಕ್ಯಾಬಿನ್ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಣೆಯ ಸ್ವಿಚ್ ಆನ್ ಮಾಡಲು ಮರೆತಿರುವುದೇ ಈ ಸಮಸ್ಯೆ ಉಂಟಾಗಲು ಕಾರಣ ಎನ್ನಲಾಗಿದೆ. ಪ್ರಯಾಣಿಕರ ದೂರಿನ ನಂತರ ವಿಮಾನವನ್ನು ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
Earlier visuals of passengers of Jet Airways Mumbai-Jaipur flight after being deplaned when the flight was turned back to Mumbai airport midway, after loss in cabin pressure. Visuals from Mumbai airport. pic.twitter.com/GOXsJYhr7S
— ANI (@ANI) September 20, 2018
ಒಟ್ಟು 166 ಪ್ರಯಾಣಿಕರಿದ್ದ ವಿಮಾನವು ಬೆಳಿಗ್ಗೆ 5:30 ಕ್ಕೆ ಮುಂಬೈನಿಂದ ಜೈಪುರಕ್ಕೆ ಹೊರಟಿತ್ತು. ಸುಮಾರು ಒಂದು ಗಂಟೆ ಬಳಿಕ ಪ್ರಯಾಣಿಕರು ದೂರು ನೀಡಿದ ತಕ್ಷಣವೇ ಪ್ರಯಾಣಿಕರಿಗೆ ಆಕ್ಸಿಜನ್ ಮುಖವಾಡ ನೀಡಲಾಯಿತು. ನಂತರ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಈಗ ಪ್ರಯಾಣಿಕರಿಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತಂತೆ ಈ ಘಟನೆ ಕುರಿತು ಎಎಐಬಿ ತನಿಖೆಗೆ ಆದೇಶಿಸಿದ್ದು, ಡಿಜಿಸಿಎಗೆ ದೂರನ್ನೂ ನೀಡಲಾಗಿದೆ.
Discussion about this post