ಸೊರಬ/ಶಿಕಾರಿಪುರ: ಲೋಕಸಭಾ ಚುನಾವಣಾ ಪ್ರಚಾರ ಕ್ಷೇತ್ರದಾದ್ಯಂತ ನಡೆಯುತ್ತಿರುವಂತೆಯೇ ವಿಶ್ವಕರ್ಮ ಸಮಾಜ ಪ್ರಭಾವಿ ನಾಯಕ, ಎಂಎಲ್’ಸಿ ಕೆ.ಪಿ. ನಂಜುಂಡಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮೋದಿ ಕೈ ಬಲಪಡಿಸಲು ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ನಿನ್ನೆ ಸೊರಬದ ಬಿಜೆಪಿ ಕಚೇರಿಯಲ್ಲಿ ನಂಜುಂಡಿ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಮುಖಂಡರಾದ ಪಾಣಿ ರಾಜಪ್ಪ, ವಿಶ್ವಕರ್ಮ ಸಮಾಜದ ಮುಖಂಡರಾದ ಧರ್ಮರಾಜ್, ಅಧ್ಯಕ್ಷ ಅರವಿಂದ್ ನಿರಂಜನ್ ಕುಪ್ಪುಗುಡ್ಡೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಮಾಧ್ಯಮ ಪ್ರಮುಖ್ ಶಿವಯೋಗಿ, ಉಪಸ್ಥಿತರಿದ್ದರು.


















