No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Saturday, February 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

ಅನ್ವರ್ಥ ಧಾರಾವಾಹಿಗಳ ನಡುವೆ ನವಚೈತನ್ಯ ಮೂಡಿಸಿರುವ ವೈಭವದ ‘ಜೊತೆಜೊತೆಯಲಿ’

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 24, 2019
in ಸಿನೆಮಾ
0
ಅನ್ವರ್ಥ ಧಾರಾವಾಹಿಗಳ ನಡುವೆ ನವಚೈತನ್ಯ ಮೂಡಿಸಿರುವ ವೈಭವದ ‘ಜೊತೆಜೊತೆಯಲಿ’
Share on FacebookShare on TwitterShare on WhatsApp

ಧಾರಾವಾಹಿ ಎಂದ ಕೂಡಲೇ ಬಹುತೇಕ ಪುರುಷರಿಗೆ ವಾಕರಿಕೆಯೇ ಸರಿ. ರಾಜಕಾರಣಿಗಳ ಪ್ರಸ್ತಾವನೆ ಬಂದಾಗ ಹೇಗೆ ತಾತ್ಸಾರದ ಕೀಳು ಮನೋಭಾವ ಹುಟ್ಟಿದೆಯೋ, ಹಾಗೆಯೇ ಕನ್ನಡ ಧಾರಾವಾಹಿಗಳ ಮೇಲೆಯೂ ಹತಾಷೆ ಮನೆ ಮಾಡಿದೆ.

ಸೀರಿಯಲ್ ನಿರ್ದೇಶಕರಲ್ಲಿ ಎಸ್. ನಾರಾಯಣ್, ಟಿ.ಎನ್. ಸೀತಾರಾಮ್, ಎಸ್.ಎನ್. ಸೇತುರಾಮ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿಯಂತವರು ಧಾರಾವಾಹಿ ಮಾಡುತ್ತಿದ್ದ ಕಾಲಕ್ಕೂ ಪ್ರಸ್ತುತ ಸೀರಿಯಲ್ ಮೇಕಿಂಗ್ ಸ್ವರೂಪಕ್ಕೂ ಅಜಗಜಾಂತರ ದಿಕ್ಕು ತಪ್ಪಿದೆ.

ಕಳೆದ ಎರಡು ದಶಕಗಳ ಹಿಂದೆ ಪ್ರಮೋಷನಲ್ ಅಕ್ಟಿವಿಟೀಸ್ ಅಂದ್ರೆ ಜನರ ಬಾಯಿಂದ ಬಾಯಿಗೆ ತಲುಪಿಸುವ ಉತ್ಕೃಷ್ಠ ಕಥಾಹಂದರ ಮೂಲಧಾರವಾಗಿತ್ತು. ಇತ್ತೀಚಿನ ಧಾರಾವಾಹಿಗಳ ಬಗ್ಗೆ ನಗರಗಳ ರಸ್ತೆಯುದ್ದಕ್ಕೂ ಪ್ಲೆಕ್ಸ್‌, ಬ್ಯಾನರ್, ನ್ಯೂಸ್ ಚಾನಲ್’ಗಳಲ್ಲಿ ಬೊಬ್ಬೆ ಹಾಕಿದರೂ ಜನರ ಮನ ಮುಟ್ಟುತ್ತಿಲ್ಲ.

ಇಂತಹ ಒಂದು ಮನಃಸ್ಥಿತಿಯ ಕಳೆದ ವಾರ ರಾತ್ರಿ ಮನೆಗೆ ತಲುಪಿದಾಗ ಅಮ್ಮ ಹಾಕಿದ ಸೀರಿಯಲ್ ಚಾನಲ್ ಚೇಂಜ್ ಮಾಡಲಿಕ್ಕೆ ಒಂದು ವಿರಾಮ ಬರುವುದನ್ನು ಕಾಯುತ್ತಿದ್ದೆ. ಒಲ್ಲದ ಮನಸ್ಸಿನಿಂದಲೇ ಹಾಗೆ ಸುಮ್ಮನೇ ಝೀ ವಾಹಿನಿಯ ಜೊತೆಜೊತೆಯಲಿ ಧಾರಾವಾಹಿ ಕಡೆ ಕಣ್ಣು ಹಾಯಿಸಿದೆ.

ಖ್ಯಾತ ಉದ್ಯಮಿ ಆರ್ಯವರ್ಧನ್ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಹೋಗುವ ದಾರಿ ಮಧ್ಯೆ ಅಟೋದಲ್ಲಿ ಹೋಗಬೇಕಾಗುತ್ತದೆ. ಮುಖ್ಯ ಅತಿಥಿ ಹಾಗೂ ನಿರೂಪಕಿ ಒಟ್ಟಿಗೆ ಪ್ರಯಾಣ ಬೆಳೆಸಿದ್ದು ಕಾರ್ಯಕ್ರಮ ಆರಂಭಿಸಿದಾಗ ತಿಳಿಸುತ್ತದೆ ಕಾರ್ಯಕ್ರಮದ ನಿರೂಪಕಿಯಾದ ಅನುಗೆ. ಹೀಗೆ ಪರಿಚಯವಾದ ಆರ್ಯವರ್ಧನ್ ಹಾಗೂ ಅನು ನಡುವಿನ ಬಾಂಧವ್ಯ ಪಾರ್ಟಿ ಮೀಟ್‌ಗೆ ಕರೆಯುವಷ್ಟು, ತಮ್ಮ ಕಂಪೆನಿಯಲ್ಲೇ ಆಕೆಗೆ ಕೆಲಸ ನೀಡಿ, ಆ ವಿಚಾರವನ್ನು ಆಕೆಯ ಮನೆಗೆ ಸ್ವತಃ ತೆರಳಿ ತಿಳಿಸುವಷ್ಟು ಅನ್ಯೂನತೆ ಬೆಳೆಯುತ್ತದೆ.

ಐಷಾರಾಮಿ ಬದುಕಿನ ಪರಿಚಯವಿಲ್ಲದ ಅನು ಮತ್ತು ಕುಟುಂಬ ಆಧುನಿಕ ಔತಣಕೂಟಗಳ ಪರಿಕಲ್ಪನೆಯಿಲ್ಲದವರು ಭಾಗವಹಿಸಿದಾಗ ಮುಗ್ದತೆಯನ್ನು ಕೀಟಾಲೆ ಮಾಡಿ ಪಜೀತಿಗೆ ಸಿಲುಕಿಸುವ ಒಂದು ವರ್ಗದ ವಿಕೃತ ಮನಸ್ಸು ಅನಾವರಣಗೊಳ್ಳುವುದು ಪ್ರಸ್ತುತ ಸಮಾಜದ ಕೆಲವೊಂದು ಮನಸ್ಸುಗಳ ಪ್ರತಿಫಲನವಾಗಿದೆ.

ಅಂತೆಯೇ, ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸುವ ಇಡಿಯ ಸನ್ನಿವೇಶದಲ್ಲಿ ಓರ್ವ ಸೆಕ್ಯುರಿಟಿಯ ಕರ್ತವ್ಯಪರತೆ ಹಾಗೂ ಆ ಘಟನೆಯಿಂದ ನಾನು ಕಲಿಯುವುದು ಇನ್ನೂ ಇದೆ ಎಂದು ಆರ್ಯವರ್ಧನ್ ಹೇಳುವುದು ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು ನೀಡುವುದು ಪ್ರಶಂಸನೀಯವಾಗಿದೆ.

ಇನ್ನು, ಬಡ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಬರದಲ್ಲಿ ರೂಪುಗೊಳ್ಳುವ ಪಾರ್ಟಿಯ ಮಾರ್ಪಡುಗಳ ಸಿದ್ದತೆ. ಚಿಲ್ಲರೆ ಕಾಸಿನಲ್ಲಿ ಜನ ಜಂಗುಳಿಯೊಳಗೆ ಸಿಗುವ ಚಿಕ್ಕ ಚಿಕ್ಕ ಆನಂದಗಳನ್ನು ನಾಯಕಿ ಅನು ಅರ್ಥ ಮಾಡಿಸಿದ ವೈಖರಿಗೆ ಆರ್ಯವರ್ಧನ್ ಮನಸೋತು ಬಿಡುತ್ತಾನೆ. ಈ ಕಥಾ ಹಂದರದಲ್ಲಿ ಬರುವ ಉಳಿದ ಪಾತ್ರಗಳಲ್ಲಿ ಅನು ತಂದೆ ಸಿರಿಮನೆಯವರ ಪಾತ್ರ ಮನೋಜ್ಞವಾಗಿ ಮೂಡಿ ಬರುತ್ತಿದೆ. ಎರಡು ರೂಪಾಯಿಗೂ ಬೆಲೆ ಇದೆ ಎನ್ನುವ ಸಂಭಾಷಣೆ ನೋಡುಗರ ನೆನಪಿನಲ್ಲಿ ಸುಲಭವಾಗಿ ಉಳಿದು ಬಿಡುತ್ತದೆ.

ಒಬ್ಬನಿಗೆ ಎರಡು ಹೆಂಡ್ತಿ ಅಥವಾ ಒಂದು ಅಕ್ರಮ, ಒಂದು ಸಕ್ರಮದಲ್ಲಿ ಗಂಡು ಇಡೀ ಧಾರಾವಾಹಿ ಮುಗಿಯುವ ತನಕ ಮಾಡುವ ಸರ್ಕಸ್, ಬರಿಯ ಹೆಣ್ಣು ‘ಹೀರೋ(!)’-ಹೀರೋಯಿನ್, ವಿಲನ್ ಆಗಿರುವ ಕೊನೆಯಿಲ್ಲದ ಸೀರಿಯಲ್’ಗಳು, ಒಬ್ಬ ಮಂಥರೆಯ ರೀತಿಯವಳು, ಅತ್ತೆ ಸೊಸೆಯ ಹುನ್ನಾರ ಇವೇ ಇತ್ಯಾದಿ ಸೋಗುಗಳನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಈ ಧಾರಾವಾಹಿ ಒಂದಷ್ಟು ಹೊಸ ಭರವಸೆಯನ್ನು ಮೂಡಿಸಿದೆ.

ನಾಯಕ ಪಾತ್ರದ ಖ್ಯಾತ ನಟ ಅನಿರುದ್ಧ ಜತ್ಕರ್ ಸಹ ಪ್ರಬುದ್ಧ ನಟ ಹಾಗೂ ರಂಗಭೂಮಿ ಹಿನ್ನೆಲೆಯ ಕಲಾವಿದನ ಅಂತಃಸತ್ವ ಏನು ಎಂಬುದನ್ನು ಧಾರಾವಾಹಿಯಲ್ಲಿ ತೋರಿಸಿದ್ದಾರೆ. ಹಾಗೆಯೇ, ಪಾತ್ರಕ್ಕೆ ತಕ್ಕ ಶಕ್ತಿಯನ್ನು ತುಂಬುತ್ತಿರುವ ಅವರು ಮುಂದೆಯೂ ಸಹ ಪಾತ್ರವನ್ನು ಜೀವಂತಿಸುತ್ತಾರೆ ಎಂಬ ನಂಬಿಕೆ ಈಗಾಗಲೇ ಪ್ರೇಕ್ಷಕ ವರ್ಗದಲ್ಲಿ ಮೂಡಿದೆ.

ನಾಯಕಿ ಪಾತ್ರದ ಮೇಘಾ ಶೆಟ್ಟಿಯವರು ಪಾತ್ರಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕಿದೆ ಎಂದೆನಿಸುತ್ತದೆ.

ಕನ್ನಡ ಕಿರುತರೆಯ ಇತಿಹಾಸದಲ್ಲೇ ಟಿಆರ್‌ಪಿ ಹೊಂದಿ ಮೊದಲ ವಾರವೇ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿರುವುದರಿಂದ ನಿರ್ದೇಶಕರ ಜವಾಬ್ದಾರಿ ಹೆಚ್ಚಿದೆ.

ಮುಂದಿನ ದಿನಗಳಲ್ಲಿ ಹತ್ತರಲ್ಲಿ ಹನ್ನೊಂದು ಎಂದು ಆಗದೇ ಹೊಸ ಅಲೆ ಸೃಷ್ಟಿಯಾಗಲಿ.

Tags: Actor AnirudhAnirudh JatkarJote Joteyali Kannada SerialKannada SerialsKannada televisionKannada TV ShowssandalwoodTRPಕನ್ನಡ ಕಿರುತರೆಕನ್ನಡ ಸೀರಿಯಲ್ಜೊತೆಜೊತೆಯಲಿ ಧಾರಾವಾಹಿಟಿಆರ್‌ಪಿಧಾರಾವಾಹಿನಟ ಅನಿರುದ್ಧ ಜತ್ಕರ್ಮೇಘಾ ಶೆಟ್ಟಿ
Share204Tweet123Send
Previous Post

ಯುವ ಕಲಾವಿದರಿಗೆಲ್ಲ ಮಾದರಿ ಕಷ್ಟಗಳ ಮೆಟ್ಟಿ ಸಾಧನಾ ಹಾದಿಯಲ್ಲಿರುವ ‘ನೀಲಾ ಜೇವರ್ಗಿ’

Next Post

ಮಲೆನಾಡ ಮಡಿಲಲ್ಲಿರುವ ಈ ಪ್ರಕೃತಿ ಸೌಂದರ್ಯದ ಗಣಿಗೆ ಬೇಕಿದೆ ಕಾಯಕಲ್ಪ, ಯಾವುದು ಗೊತ್ತಾ ಆ ಸ್ಥಳ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಲೆನಾಡ ಮಡಿಲಲ್ಲಿರುವ ಈ ಪ್ರಕೃತಿ ಸೌಂದರ್ಯದ ಗಣಿಗೆ ಬೇಕಿದೆ ಕಾಯಕಲ್ಪ, ಯಾವುದು ಗೊತ್ತಾ ಆ ಸ್ಥಳ?

ಮಲೆನಾಡ ಮಡಿಲಲ್ಲಿರುವ ಈ ಪ್ರಕೃತಿ ಸೌಂದರ್ಯದ ಗಣಿಗೆ ಬೇಕಿದೆ ಕಾಯಕಲ್ಪ, ಯಾವುದು ಗೊತ್ತಾ ಆ ಸ್ಥಳ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

February 28, 2026
ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

February 28, 2026
ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

February 28, 2026
ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

February 28, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 1 ರಂದು ಬೆಂಗಳೂರಿನಿಂದ ಮುಂಬೈಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

February 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL