ಕಲ್ಪ ಮೀಡಿಯಾ ಹೌಸ್ | ಮೈಸೂರು/ಬೆಂಗಳೂರು |
ಬಾಣಾವರ ಬಳಿಯ ಜಾವಗಲ್’ನಲ್ಲಿ #Javagal ನಡೆಯಲಿರುವ ವಾರ್ಷಿಕ ಉರುಸ್ ಹಬ್ಬಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ #IndianRailway ಬಾಣಾವರದಲ್ಲಿ ಹಲವು ರೈಲುಗಳ ನಿಲುಗಡೆಯನ್ನು ಘೋಷಣೆ ಮಾಡಿದೆ.
ಈ ಕುರಿತಂತೆ, ನೈಋತ್ಯ ರೈಲ್ವೆ #SouthWesternRailway ಪ್ರಕಟಣೆ ಹೊರಡಿಸಿದ್ದು, ಜೂನ್ 1ರಿಂದ ಜೂನ್ 4ರವರೆಗೆ ನಾಲ್ಕು ದಿನಗಳ ಕಾಲ ಬಾಣಾವರ #Banavara ರೈಲು ನಿಲ್ದಾಣದಲ್ಲಿ ಹಲವು ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಿದೆ.ಜಾವಗಲ್’ನಲ್ಲಿ ನಡೆಯಲಿರುವ ಉರುಸ್ ಹಬ್ಬಕ್ಕೆ ತೆರಳುವ ಭಕ್ತರಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ರೈಲುಗಳ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿಯ ವಿವರಗಳು ಹೀಗಿವೆ:
- ರೈಲು ಸಂಖ್ಯೆ 56519 ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ ಬಾಣಾವರದಲ್ಲಿ ಬೆಳಿಗ್ಗೆ 08.35ಕ್ಕೆ ಆಗಮಿಸಿ 08.36ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಇಂಟರ್ಸಿಟಿ ಬಾಣಾವರದಲ್ಲಿ ಬೆಳಿಗ್ಗೆ 09.07ಕ್ಕೆ ಆಗಮಿಸಿ 09.08ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 17326 ಮೈಸೂರು – ಬೆಳಗಾವಿ ಎಕ್ಸ್’ಪ್ರೆಸ್ ಬಾಣಾವರದಲ್ಲಿ ಬೆಳಿಗ್ಗೆ 11.32ಕ್ಕೆ ಆಗಮಿಸಿ 11.33ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 12725 ಬೆಂಗಳೂರು – ಧಾರವಾಡ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ಬಾಣಾವರದಲ್ಲಿ ಮಧ್ಯಾಹ್ನ 15.38ಕ್ಕೆ ಆಗಮಿಸಿ 15.39ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 12726 ಧಾರವಾಡ – ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ಬಾಣಾವರದಲ್ಲಿ ಬೆಳಿಗ್ಗೆ 10.29ಕ್ಕೆ ಆಗಮಿಸಿ 10.30ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ಎಕ್ಸ್’ಪ್ರೆಸ್ ಬಾಣಾವರದಲ್ಲಿ ಮಧ್ಯಾಹ್ನ 13.55ಕ್ಕೆ ಆಗಮಿಸಿ 13.56ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 16205 ತಾಳಗುಪ್ಪ – ಮೈಸೂರು ಇಂಟರ್ಸಿಟಿ ಎಕ್ಸ್’ಪ್ರೆಸ್ ಬಾಣಾವರದಲ್ಲಿ ಸಂಜೆ 18.23ಕ್ಕೆ ಆಗಮಿಸಿ 18.24ಕ್ಕೆ ನಿರ್ಗಮಿಸುತ್ತದೆ.
- ರೈಲು ಸಂಖ್ಯೆ 56520 ಹೊಸಪೇಟೆ – ಬೆಂಗಳೂರು ಪ್ಯಾಸೆಂಜರ್ ಎಕ್ಸ್’ಪ್ರೆಸ್ ಬಾಣಾವರದಲ್ಲಿ ಸಂಜೆ 18.43ಕ್ಕೆ ಆಗಮಿಸಿ 18.44ಕ್ಕೆ ನಿರ್ಗಮಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post