Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸುಮಂಗಲಿಯರ ನೆಚ್ಚಿನ ಜ್ಯೋತಿರ್ಭೀಮೇಶ್ವರ ವ್ರತ

July 20, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - 5 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಈ ಅಮಾವಾಸ್ಯೆ ಬೇರೆ ಅಮಾವಾಸ್ಯೆಗಳಿಗಿಂತಲೂ ಭಿನ್ನ; ಬೇರೆಲ್ಲ ಅಮಾವಾಸ್ಯೆಗಳಲ್ಲಿ ಬರೀ ಕತ್ತಲೆ ತುಂಬಿಕೊಂಡಿದ್ದರೆ ಈ ಅಮಾವಾಸ್ಯೆಯಲ್ಲಿ ದಾಂಪತ್ಯ ಬದುಕಿನ ಬೆಳಕು ತುಂಬಿಕೊಂಡಿದೆ. ಈ ಅಮಾವಾಸ್ಯೆ ತುಂಬೆಲ್ಲ ಪತಿ-ಪತ್ನಿಯರ ಪ್ರಣಯದೀಪ್ತಿಯ ಹಾಲ್ಬೆಳಕು ಚೆಲ್ಲಿಕೊಂಡಿರುತ್ತದೆ. ಗಂಡ ಹೆಂಡತಿಯ ನಡುವೆ ಪರಸ್ಪರ ಪ್ರೀತಿ ವಿಶ್ವಾಸಗಳ ಅಭಿವ್ಯಕ್ತಿಗೆ ಈ ಅಮಾವಾಸ್ಯೆಯು ಒಂದು ವೇದಿಕೆಯಾಗಿ ನಿಂತುಕೊಳ್ಳುತ್ತದೆ.

ಆಷಾಢ ಪೂರ್ಣಿಮೆ; ಏಕಾದಶಿಗಳ ಹಾಗೆ ಆಷಾಢ ಅಮಾವಾಸ್ಯೆಯು ಕೂಡ ಭಾರತೀಯರ ಮನಸ್ಸಿನಲ್ಲಿ ಭಾವುಕವಾಗಿ ನೆಲೆಯೂರಿದೆ. ಅಂದು ವಿವಾಹಿತ ಮಹಿಳೆಯರು ತಮ್ಮ ಪತಿ ಪರಮೇಶ್ವರನ ಆರೋಗ್ಯಾಯುಷ್ಯ ಮತ್ತು ಓಜಸ್ಸು, ತೇಜಸ್ಸುಗಳ ವೃದ್ಧಿಗಾಗಿ ಜೋತಿರ್ಭೀಮೇಶ್ವರನ ವ್ರತವನ್ನು ಮಾಡುತ್ತಾರೆ. ವಾಗಾರ್ಥಗಳಂತೆ ಅನನ್ಯ ಮತ್ತು ಅನ್ಯೋನ್ಯವಾಗಿರುವ ಶಿವ ಪಾರ್ವತಿಯರೇ ಭೀಮನ ಅಮಾವಾಸ್ಯೆಯ ಅಧಿಷ್ಠಾತೃ ದೇವತೆಗಳು. ಅರ್ಧಾಂಗಿ ಕಲ್ಪನೆಗೆ ಅರ್ಥಶ್ರೀ ಹೇಳಿದ ಹರಿಕಾರ ಕೀರ್ತಿ ನಮ್ಮ ಶಿವನನ್ನು ಅಮಾವಾಸ್ಯೆ ಪರ್ವಕಾಲದಲ್ಲಿ ಕೇವಲ ಸುಮಂಗಲೆಯರು ಮಾತ್ರವಲ್ಲ, ವಿವಾಹಾಕಾಂಕ್ಷಿ ಕನ್ಯೆಯರು ಕೂಡ ಮಾಡಿದಲ್ಲಿ ಅವರು ಬಯಸುವಂತಹ ವರನು ಕೈಹಿಡಿಯುವನು ಎಂಬುದೊಂದು ನಂಬಿಕೆ ಆಸ್ತಿಕ ವಲಯದಲ್ಲಿದೆ.

ಸಮಾಜದಲ್ಲಿ ಏನೆಲ್ಲಾ ಬದಲಾವಣೆಗಳಾಗಿದ್ದರೂ ಹಿಂದೂ ಸಂಪ್ರದಾಯದ ಅಚಾರ ವಿಚಾರಗಳಿಗೆ ಮಾತ್ರ ಕುಂದುಂಟಾಗಲ್ಲ ಎಂಬುದಕ್ಕೆ ಆಧುನಿಕ ಹೆಣ್ಣು ಮಕ್ಕಳು ಹಬ್ಬ ಹರಿದಿನಗಳನ್ನು ಆಚರಿಸುವುದೇ ಸಾಕ್ಷಿ.

ಆಕಾಶದ ಮೋಡದಂತೆ ಹಬ್ಬಗಳಿಲ್ಲದೆ ಮಂಕುಕವಿದ ಮಾಸವೇ ಆಷಾಢ ಮಾಸ ಎಂಬುದು ಜನರ ಭಾವನೆ, ಇದಕ್ಕೂ ಮಿಗಿಲಾಗಿ ನವವಧುವನ್ನು ಅತ್ತೆಯ ಮನೆಯಿಂದ (ಗಂಡನಿಂದ ಬಳಿಯಿಂದ) ಬೇರ್ಪಡಿಸಿದ್ದು ಈ ಮಾಸ ಎಂಬ ಮೂದಲಿಕೆ ಬೇರೆ ಇದಕ್ಕಿದೆ. ಆದು ಕಳೆದು ಗಂಡನ ಮನೆಗೆ ಹೋಗಿ ಗಡಿಬಿಡಿಯಿಂದ ಹಬ್ಬ ಆಚರಿಸುವ ಸಂತೋಷ-ಸೌಭಾಗ್ಯಗಳನ್ನು ಪ್ರದರ್ಶಿಸುವ ಶ್ರಾವಣ ಮಾಸದ ಹೊಸ್ತಿಲಲ್ಲಿ ಬರುತ್ತದೆ ಈ ಹಬ್ಬ.

ಭೀಮನ ಅಮಾವಾಸ್ಯೆಯ ವ್ರತ, ಭೀಮೇಶ್ವರ ವ್ರತ, ಜ್ಯೋತಿರ್ಭೀಮೇಶ್ವರ ವ್ರತ- ಈ ರೀತಿ ನಾನಾ ಹೆಸರುಗಳಿಂದ ಕರೆಯುವ ಈ ವ್ರತವು ಪ್ರತಿ ವರ್ಷ ಆಷಾಢಮಾಸದ ಅಮಾವಾಸ್ಯೆಯ ದಿನ ಆಚರಿಸಲ್ಪಡುತ್ತದೆ. ಕನ್ಯೆಯರು ಹಾಗೂ ಸುಮಂಗಲಿಯರು ಅತ್ಯಂತ ಭಕ್ತಿ ಶ್ರದ್ಧೆಯಿಂದ ಈ ವ್ರತವನ್ನು ಆಚರಿಸುವವರು. ಕನ್ಯೆಯರು ಉತ್ತಮವಾದ, ಸಕಲ ಗುಣಸಂಪನ್ನರಾದ ಹಾಗೂ ದೀರ್ಘ ಆಯಸ್ಸು ಇರುವ ವ್ಯಕ್ತಿ ತಮ್ಮ ಜೀವನಸಂಗಾತಿಯಾಗಲಿ ಎಂಬ ಸಂಕಲ್ಪದಿಂದ ಈ ವ್ರತವನ್ನು ಮಾಡಿದರೆ, ಸುಮಂಗಲೆಯರು ತಮ್ಮ ಮಾಂಗಲ್ಯಭಾಗ್ಯ ಶಾಶ್ವತವಾಗಿರಲಿ, ಪತಿಯ ಆಯಸ್ಸು ವೃದ್ಧಿಸಲಿ ಎಂದು ಈ ವ್ರತವನ್ನು ಆಚರಿಸುತ್ತಾರೆ. ಅಮಾವಾಸ್ಯೆಯ ದಿನ ಉಪವಾಸ ಇದ್ದು ಗೋಧೂಳಿ ಸಮಯ ಅಂದರೆ ಸಂಜೆ ಈ ವ್ರತವನ್ನು ಮಾಡುತ್ತಾರೆ. ವ್ರತ ಮಾಡುವವರು ಪೂರ್ವ ಸಂಕಲ್ಪಿತ ಪ್ರಕಾರವೇ ಮಾಡಬೇಕು.

ವ್ರತದ ಹಿನ್ನೆಲೆ
ಈ ವ್ರತ ಪ್ರಾರಂಭವಾಗಿದ್ದು ಕೃತಯುಗದಲ್ಲಿ. ಸೌಮಿತ್ರೆ ಎಂಬ ಮಹಾ ಪತಿವ್ರತೆ ಮೃಕಂಡ ಎಂಬ ಮಹರ್ಷಿಯ ಪತ್ನಿ. ತನ್ನ ಪತಿಗೆ ಅಲ್ಪ ಆಯುಸ್ಸು ಎಂಬ ಘೋರ ಸತ್ಯವನ್ನು ತಿಳಿದ ಅವಳು ಚಿಂತಿತಳಾದಳು. ಆಗ ನಾರದಮಹರ್ಷಿಗಳು ಅವಳ ಆಶ್ರಮಕ್ಕೆ ಬಂದರು. ಸೌಮಿತ್ರೆ ತನ್ನ ಮಾಂಗಲ್ಯ ಭಾಗ್ಯ ಸ್ಥಿರವಾಗಲು ಯಾವುದಾದರೂ ವ್ರತವನ್ನು ಉಪದೇಶಿಸಿ ಎಂದು ಬೇಡಿದಳು. ಆಗ ನಾರದರು ಆಷಾಢಮಾದ ಅಮಾವಾಸ್ಯೆಯ ಪ್ರದೋಷಕಾಲದಲ್ಲಿ ಮಾಡುವ ಭೀಮೇಶ್ವರ ವ್ರತದ ಉಪದೇಶ ಮಾಡಿದರು. ಆ ಸಮಯದಲ್ಲಿ ಆಷಾಢಮಾಸ ನಡೆಯುತ್ತಿತ್ತು. ಅಮಾವಾಸ್ಯೆಯ ದಿನವನ್ನು ನಿರೀಕ್ಷೆ ಮಾಡುತ್ತಿದ್ದ ಅವಳು ನಾರದರು ತಿಳಿಸಿದಂತೆ ವ್ರತವನ್ನು ಶ್ರದ್ಧಾಭಕ್ತಿಯಿಂದ ಮಾಡಿದಳು. ಪರಮೇಶ್ವರನನ್ನು ಆರಾಧನೆ ಮಾಡಿದ್ದ ಕಳಸದಲ್ಲಿ ದಿವ್ಯಜ್ಯೋತಿ ಮೂಡಿತು. ಆಕೆಯ ಪತಿಗೆ ಈ ವ್ರತದ ಪ್ರಭಾವದಿಂದ ದೀರ್ಘಾಯಸ್ಸುವುಂಟಾಯಿತು.

ಭೀಮೇಶ್ವರ ವ್ರತವನ್ನು ಕೃತಯುಗದಲ್ಲಿ ಸೌಮಿತ್ರೆ, ತ್ರೇತಾಯುಗದಲ್ಲಿ ಅನಸೂಯಾದೇವಿ, ದ್ವಾರಪಯುಗದಲ್ಲಿ ರುಕ್ಮುಣಿ, ಕಲಿಯುಗದಲ್ಲಿ ರತ್ನವೇಣಿ. ತ್ರಿಮೂರ್ತಿಗಳನ್ನೇ ಮಕ್ಕಳನ್ನಾಗಿ ಪಡೆದಿದ್ದ ಅನಸೂಯಾದೇವಿ ವ್ರತ ಮಾಡಿದಾಗ ಪರಮೇಶ್ವರನು ಪಾರ್ವತಿ ಸಮೇತವಾಗಿ ಬಂದು ನೈವೇದ್ಯವನ್ನೂ ಸ್ವೀಕರಿಸುತ್ತಿದ್ದನಂತೆ. ರುಕ್ಮಿಣಿದೇವಿ, ಗಾಂಧಾರಿ, ಭಾನುಮತಿ, ಅಂಬಲಾದೇವಿ, ನೇತ್ರತುಂದೆ- ಹೀಗೆ ಅನೇಕ ಸುಮಂಗಲಿಯರು ಇದನ್ನು ಆಚರಿಸಿರುವರು.

ವ್ರತಾಚರಣೆ ಹೇಗೆ?
ಆಷಾಢಮಾಸದ ಅಮಾವಾಸ್ಯೆಯ ದಿನ ಸಂಜೆ ಅಂದರೆ ಗೋಧೂಳಿ ಲಗ್ನದಲ್ಲಿ ಈ ವ್ರತವನ್ನು ಪ್ರಾರಂಭ ಮಾಡಬೇಕು. ಪೂರ್ವ ಅಥವಾ ಉತ್ತರದಿಕ್ಕಿನಲ್ಲಿ ಮಂಟಪವನ್ನು ನಿರ್ಮಿಸಿ ಜೋಡಿ ಕಳಸಗಳನ್ನು ಇಟ್ಟು ಅದರ ಜೊತೆಯಲ್ಲಿ ಜೋಡಿ ದೀಪದ ಕಂಬಗಳನ್ನು ಇಡಬೇಕು. ಪರಮೇಶ್ವರ ಮತ್ತು ಪಾರ್ವತಿಯ ದಿವ್ಯಮಂಗಳ ರೂಪದ ಭಾವಚಿತ್ರ, ಬೆಳ್ಳಿ ಅಥವಾ ಬಂಗಾರದಲ್ಲಿ ಮಾಡಿರುವ ಪ್ರತಿಮೆಗಳನ್ನು ಇಡಬೇಕು. ಗೆಜ್ಜೆವಸ್ತ್ರ, ಅರಿಶಿಣ, ಕುಂಕುಮ, ಅಕ್ಷತೆ, ಚಂದನ, ಹೂ, ಗಂಧ, ಹಣ್ಣು, ಕಾಯಿಗಳನ್ನು ಸಿದ್ಧಮಾಡಿಕೊಂಡು ಹಸಿ ದಾರಕ್ಕೆ 16 ಗಂಟುಗಳನ್ನು ಹಾಕಿ ಅರಿಶಿಣದ ನೀರಿನಲ್ಲಿ ಅದ್ದಿ ದೇವರ ಮುಂದೆ ಇಡಬೇಕು. ಅರ್ಚಕರು ತಿಳಿಸಿದಂತೆ ಹದಿನಾರು ಕ್ರಮಗಳಿಂದ ಪೂಜೆ ಮಾಡಬೇಕು. ಜೊತೆಯಲ್ಲಿ ಶಿವ ಸಹಸ್ರನಾಮ, ಬಿಲ್ವಾಷ್ಟಕ, ಶಿವಾನಂದ ಲಹರಿ ಮುಂತಾದ ಸ್ತೋತ್ರಗಳನ್ನು ಭಕ್ತಿಯಿಂದ ಪಠಿಸಬೇಕು. ನಂತರ ಮಹಾಮಂಗಳಾರತಿಯನ್ನು ಮಾಡಿ ಮುತ್ತೈದೆಯವರಿಗೆ ಬಾಗಿನ ನೀಡಿ ಪತಿಗೆ ನಮಸ್ಕಾರ ಮಾಡಿ 16 ಗಂಟಿನ ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು.

ಈ ಭೀಮನ ಅಮಾವಾಸ್ಯೆಯ ವ್ರತ ಸಕಲ ಸೌಭಾಗ್ಯಗಳನ್ನು ಮತ್ತು ದೀರ್ಘ ಮಾಂಗಲ್ಯಭಾಗ್ಯವನ್ನು ಕರುಣಿಸುವ ವ್ರತವಾಗಿದೆ. ಪತಿವ್ರತೆ ಸಾವಿತ್ರಿ ತನ್ನ ಪತಿಯ ದೇಹ ತ್ಯಾಗವಾಗಿದ್ದರೂ ಈ ವ್ರತವನ್ನು ಮಾಡಿ ಶಿವನ ಕೃಪೆಯಿಂದ ಮತ್ತೆ ಜೀವಂತವಾಗಿ ಪಡೆದಳು. ಪರಮೇಶ್ವರನು ವ್ರತದ ಬಗ್ಗೆ ಕೈಲಾಸದಲ್ಲಿ ಸನಂದ, ಸನತ್ಕುಮಾರ ಮುಂತಾದವರಿಗೆ ಉಪದೇಶಿಸಿದನು. ಅವರು ಈ ವ್ರತದ ಬಗ್ಗೆ ತಿಳಿಸಿದ ಬಳಿಕ ಭೂಲೋಕದಲ್ಲಿರುವ ತಪಸ್ವಿಗಳ ಪತ್ನಿಯರು ವ್ರತ ಮಾಡಿದರು. ನಂತರ ಮೂಲಕ ಭೂಲೋಕದ ಎಲ್ಲ ಕಡೆ ವ್ಯಾಪಕವಾಗಿ ಪ್ರಸಿದ್ಧವಾಯಿತು.

ಜನ್ಮದಿಂದ ಪ್ರಳಯದವರೆಗೂ ಹೊಂದಿಕೊಂಡು ಬಾಳುವ ರುದ್ರಪಾರ್ವತಿಯರಿಗೆ ಪ್ರೇರಕಶಕ್ತಿ ಮತ್ತೊಬ್ಬನಿದ್ದಾನೆ, ತೊಡೆಯ ಮೇಲೆ ಲಕ್ಷ್ಮೀಯನ್ನೇರಿಸಿಕೊಂಡು ಕುಳಿತಿರುವ ನರಸಿಂಹ, ಹೆಂಡತಿಯನ್ನು ಬಿಟ್ಟಿರದ ಆ ಲಕ್ಷ್ಮೀನರಸಿಂಹನೇ ರುದ್ರನ ದಾಂಪತ್ಯದ ಪ್ರೇರಕಶಕ್ತಿ.

ಮಣ್ಣಿನ ಈ ದೇಹ ಮಣ್ಣಾಗುವವರೆಗೂ ಮಿನುಗುತ್ತಾ ಸುದೃಢವಾಗಿ ನಗೆಯ ನಕ್ಷತ್ರಗಳನ್ನು ಹೊಮ್ಮಿಸಿ ಗಂಡನೊಂದಿಗೆ ಬದುಕಬೇಕು .ಅಂತಹ ದಾಂಪತ್ಯದ ಸಂಕೇತವಾಗಿ ತೋರ್ಬೆರಳಿನ ಪ್ರಮಾಣದಷ್ಟು ಕೆಮ್ಮಣಿನ ಪ್ರತಿಮೆ ಮಾಡಿ, ಸಂತಸ -ಸಂಭ್ರಮಗಳ ದ್ಯೋತಕವಾಗಿ ಕಡ್ಡಿಯಲ್ಲಿ ಸುಣ್ಣವನ್ನು ಮೆತ್ತಿಕೊಂಡು ಅದರಿಂದ ಎಲ್ಲ ಕಡೆಯೂ ಮಧ್ಯೆ ಮಧ್ಯೆ ಚುಕ್ಕಿಯನ್ನು ಮಾಡಿ, ಧಾನ್ಯಸಮೃದ್ದಿಗಾಗಿ ಅಕ್ಕಿ ಹರಡಿದ ಹರಿವಾಣದಲ್ಲಿ ಈ ಪ್ರತಿಮೆಗಳಿಗೆ ಅರಿಶಿನದ ಬೇರನ್ನು ದಾರದಿಂದ ಸುತ್ತು ಬರುವಂತೆ ಕಟ್ಟುವುದು, ಸೌಮಂಗಲ್ಯದ ತಾಳಿಯ ಪ್ರತಿನಿಧಿಯನ್ನು ಪೂಜಿಸಬೇಕು , ಆಯುರಾರೋಗ್ಯಶಾಲಿಯಾದ ಮತಿಯನ್ನು ದಯಪಾಲಿಸೆಂದು ಜ್ಯೋತಿ ಸ್ವರೂಪಿ ಶಿವನಲ್ಲಿ ಬೇಡಿಕೊಳ್ಳುವ ನೇಮವಿದು.

ಈ ವ್ರತವನ್ನು ಪತಿಸಂಜೀವಿನಿ ವ್ರತವೆಂದೂ ಕರೆಯತ್ತಾರೆ, ದೀಪದ ಕಂಬದಲ್ಲಿ ಶಿವನನ್ನು ಆವಾಹಿಸಿ ಪೂಜಿಸುವುದರಿಂದ ಇದಕ್ಕೆ ಜ್ಯೋತಿಭೀಮೇಶ್ವರ ವ್ರತವೆಂದು ಹೆಸರು, ಇಲ್ಲಿ ಭೀಮ ಎನ್ನುವುದು ಬಲ ಎಂಬುದಕ್ಕೆ ಪರ್ಯಾಯಪದ. ವಿವಾಹಿತ ಹೆಣ್ಣು ಮಕ್ಕಳು ಒಂಬತ್ತು ವರ್ಷ ಇದನ್ನು ನಡೆಸಿ, ಒಂಬತ್ತು ಎಳೆಯ ಗಂಟು ಹಾಕಿದ ದಾರವನ್ನು ಬಲಗೈ ಮುಂಭಾಗದಲ್ಲಿ ಕಟ್ಟಿಕೊಂಡು ಕೊನೆಯ ವರ್ಷ ಉದ್ಯಾಪನೆ ಮಾಡುವಾಗ ಸಹೋದರರಿಗೆ ಕಾಲುದೀಪಗಳನ್ನು ಉಡುಗೊರೆಯಾಗಿ ಕೊಡುವುದು ವಾಡಿಕೆ. ಒಂಬತ್ತು ಗಂಟು ಹಾಕಿದ ಅರಿಷಿಣದ ದಾರವನ್ನು ವ್ರತ ಮಾಡಿದುದರ ಕುರುಹಾಗಿ ಕೈಗೆ ಕಟ್ಟಿಕೊಳ್ಳುವುದು, ಸುಮಂಗಲಿಯರಿಗೆ ಬಾಗಿನ ಕೊಡುವುದು ಈ ವ್ರತದ ಇತರ ಮುಖ್ಯ ಕ್ರಿಯೆಗಳಾಗಿವೆ.

ಈ ಹಬ್ಬವನ್ನು ಕೆಲವು ಕಡೆ ಅಳಿಯನ ಅಮಾವಾಸ್ಯೆ ಎಂದು ಆಚರಿಸುತ್ತಾರೆ. ಕೆಲವು ಪ್ರಾಂತ್ಯಗಳಲ್ಲಿ ಆಷಾಢದ ಶುರುವಿಗೆ ಮನೆಮಗಳನ್ನು ಅಣ್ಣ ಕರೆತಂದಿರುತ್ತಾನೆ. ಅಂತ್ಯಕ್ಕೆ ಪತಿ ಬಂದು ಅವಳನ್ನು ಕರೆದೊಯ್ಯುತ್ತಾನೆ. ಸಂದರ್ಭದಲ್ಲಿ ಆತನಿಗೆ ವಿಶೇಷ ಸನ್ಮಾನಗಳನ್ನು ಮಾಡಲಾಗುತ್ತದೆ, ಅದ್ದರಿಂದಲೇ ಇದನ್ನು ಅಳಿಯನ ಅಮಾವಾಸ್ಯೆ ಎನ್ನುವುದು.

ದಕ್ಷಿಣ ಕನ್ನಡದಲ್ಲಿ ಇದನ್ನು ಕೊಡೆ ಅಮಾವಾಸ್ಯೆ ಎನ್ನುತ್ತಾರೆ. ಆಷಾಢದ ಮಳೆಯ ಹೊಡೆತ ಕಡಿಮೆಯಾಗುತ್ತ ನಾಯಿಕೊಡೆ (ಅಣಬೆ)ಗಳು ಎಲ್ಲೆಂದರಲ್ಲಿ ಬೆಳೆದುಕೊಳ್ಳುವುದು ಇದಕ್ಕೆ ಒಂದು ಕಾರಣವಾದರೆ, ಕೊಡೆ ಹಿಡಿದು ಮಾಡುವ ಹಬ್ಬ ಎನ್ನುವ ಅರ್ಥದಲ್ಲಿಯೂ ಈ ಹೆಸರು ಬಂದಿದೆ. ಈ ದಿನದಂದು ಕೆಲವು ವಿಶಿಷ್ಟ ಗಿಡಮೂಲಿಕೆಗಳಿಂದ ತಯಾರಿಸುವ ಕಹಿ ಔಷಧವನ್ನು ಕುಡಿಯುವ ರೂಢಿ ಈ ಪ್ರಾಂತ್ಯದಲ್ಲಿದೆ. ಇದರಿಂದ ಮಳೆಗಾಲದ ರೋಗಗಳನ್ನು ತಡೆಗಟ್ಟಬಹುದು ಎಂಬ ನಂಬಿಕೆ ಇದೆ.

ಉತ್ತರ ಕನ್ನಡ ಕರಾವಳಿಯಲ್ಲಿ ಈ ಅಮಾವಾಸ್ಯೆಯನ್ನು ಗಟಾರದ ಅಮಾವಾಸ್ಯೆ ಎನ್ನಲಾಗುತ್ತದೆ. ಶ್ರಾವಣದುದ್ದಕ್ಕೂ ಮಾಂಸಾಹಾರಕ್ಕೆ ಸ್ವಯಂ ನಿಷೇಧ ಹಾಕಿಕೊಳ್ಳುತ್ತಾರಾದ್ದರಿಂದ ಆಷಾಢದ ಗಟಾರದ ಅಮಾವಾಸ್ಯೆ ಎನ್ನುವ ಹೆಸರಿನ ಹಿನ್ನೆಲೆ ಇದು.

ಉತ್ತರ ಭಾರತದಲ್ಲಿ ಈ ಅಮಾವ್ಯಾಸೆಯನ್ನು ಪೀಥೊರಿ ಹಬ್ಬ ಎಂದು ಆಚರಿಸಲಾಗುತ್ತದೆ. ಇದು ಏಳು ಸಪ್ತದೇವತೆಗಳಿಗೆ ಮತ್ತು ಅರವತ್ನಾಲ್ಕು ಯೋಗಿನಿಯರಿಗೆ ಮೀಸಲು. ಪೀಟ್ ಎಂದರೆ ಕಲೆಸಿದ ಹಿಟ್ಟಿನಿಂದ ಮಾಡಿದ ದೇವತೆಗಳ ಮೂರ್ತಿಗಳನ್ನು ಸೌಭಾಗ್ಯ ಸಂಪದಗಳಿಗಾಗಿ ಪೂಜಿಸುತ್ತಾರೆ. ರಜಪೂತರಲ್ಲಿ ಒಳ್ಳೆಯ ಪತಿಗಾಗಿ ಕನ್ಯೆಯರು ಅಕ್ಕಿಯ ಮೇಲೆ ಜೋಡಿ ದೀಪಗಳನ್ನು ಇಟ್ಟು ಅರಿಶಿನ ಕುಂಕುಮ ಹೂಗಳಿಂದ ಶಿವನನ್ನು ಆರಾಧಿಸುತ್ತಾರೆ.

ಭಂಡಾರದ ಸಡಗರ
ಮೈದಾಹಿಟ್ಟಿನಲ್ಲಿ ಭಂಡಾರವನ್ನು ಮಾಡಿ, ಅಣ್ಣ ತಮ್ಮಂದಿರಿಂದ ಹೊಸ್ತಲಿನ ಮೇಲೆ ಅದನ್ನು ಒಡೆಸಿ ದಕ್ಷಿಣೆ ನೀಡುವ ಮೂಲಕ ವ್ರತ ಸಂಪನ್ನವಾಗುತ್ತದೆ. ಇಲ್ಲಿ ಭಂಡಾರ ಎಂದರೆ ಸಂಪತ್ತು ಎಂದರ್ಥ. ಭಂಡಾರ ಅಂದರೆ, ಕರಿದ ಕಡುಬು. ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರಿದಿರುತ್ತಾರೆ. ಬಳಿಕ ಇದನ್ನು ಅಣ್ಣ-ತಮ್ಮಂದಿರಿಂದ ಒಡೆಸುತ್ತಾರೆ. ಅವರಿಗೆ ಆರತಿ ಮಾಡಿ ಕರಿಗಡುಬಿನ ಒಳಗಿದ್ದ ದುಡ್ಡಿನ ಜೊತೆ ಉಡುಗೊರೆ ಕೊಡುತ್ತಾರೆ. ಸೋದರಿ ಆ ಸಮಯದಲ್ಲಿ ಅವನ ಬೆನ್ನಿಗೆ ಪ್ರೀತಿಯಿಂದ ಗುದ್ದುತ್ತಾಳೆ.

ಹಬ್ಬದ ಹಿಂದಿನ ಅಂತರಾರ್ಥ
ಹಬ್ಬದಾಚರಣೆ ಆಡಂಬರದ ಪ್ರದರ್ಶನವೋ ಅಥವಾ ಅದರೊಳಗೊಂದು ತಿರುಳಿದೆಯೋ ಎನ್ನುವ ಪ್ರಶ್ನೆ ಸಹಜ. ಮಹಿಳೆ ಅಬಲೆಯಲ್ಲ ಸಬಲೆ ಎನ್ನುವ ಈ ಕಾಲದಲ್ಲಿ ಗಂಡನ ಪೂಜೆಗೊಂದು ದಿನವೇಕೆ? ಎನ್ನುವ ಪ್ರಶ್ನೆಗಳು ಸಹಜ. ಹಬ್ಬದ ಹಿಂದಿನ ಅಂತರಾರ್ಥ ತಿಳಿದಾಗಲೇ ಅಂತಹ ಪ್ರಶ್ನೆಗಳಿಗೊಂದು ಉತ್ತರ ಸಿಕ್ಕೀತು. ಗಂಡನ ಪೂಜೆಗೆಂದೇ ಮಿಸಲಾದ ದಿನವೇ ಭೀಮನ ಅಮಾವಾಸ್ಯೆ. ಇಲ್ಲಿ ಅಮಾವಾಸ್ಯೆ ಕಾಲನ ಸಂಕೇತ. ಅಮಾವಾಸ್ಯೆಯ ನಂತರ ಬರುವುದೇ ಶುಕ್ಲಪಕ್ಷ. ಚಂದ್ರನ ಲೆಕ್ಕಾಚಾರದಲ್ಲಿ ಕತ್ತಲಿನಿಂದ ಬೆಳಕಿನೆಡೆಗೆ ಪಯಣ ಆರಂಭಿಸುವ ಶುಭ ಘಳಿಗೆಯೇ ಅಮಾವಾಸ್ಯೆ.

ಭೀಮ ಎನ್ನುವುದು ಶೌರ್ಯ. ಸಾಹಸ, ವೀರ್ಯವಂತ ಪುರುಷನ ಸಂಕೇತ. ಹೀಗೆ ಭೀಮನ ಅಮಾವಾಸ್ಯೆಯನ್ನು ಒಟ್ಟುಗೂಡಿಸಿದಾಗ ಬರುವುದೇ ಕಾಲಪುರುಷ. ಲಯಕರ್ತನಾದ ಶಿವನೇ ಕಾಲಪುರುಷ. ಶಿವನಲ್ಲಿ ಒಂದು ವಿಶಿಷ್ಟ ಗುಣವಿದೆ. ಶಿವ ಸಮಾನತೆ, ಶಾಂತತೆ, ಸಾಧನೆ, ಕಾರುಣ್ಯತೆ, ಪರಿಪಾಲನೆ, ವಾತ್ಸಲ್ಯ, ಸೌಹಾರ್ದ ಮನೋಭಾವನೆಯ ಸಂಕೇತವಾಗುತ್ತಾನೆ. ಒಂದು ಕುಟುಂಬ ವ್ಯವಸ್ಥೆಗೆ ಯಜಮಾನನೇ ಆಧಾರ. ಈ ನಿಟ್ಟಿನಲ್ಲಿ ತೆಗೆದುಕೊಂಡರೂ ಶಿವ ನಮಗೆ ಆದರ್ಶವಾಗುತ್ತಾನೆ. ಅರ್ಧನಾರೀಶ್ವರ ತತ್ತ್ವದಲ್ಲಿ ಶಿವ, ಶಕ್ತಿಗೆ ಸಮಾನಾಂತರ ಸ್ಥಾನವಿದೆ. ಕಾರಣ ಹಬ್ಬದ ನೆವದಲ್ಲಿ ಶಿವನ ಆರಾಧನೆಗೆ ಚಾಲನೆ ದೊರೆಯುತ್ತದೆ.

ಅಂದಿನ ಕಾಲಮಾನಕ್ಕೆ ತಕ್ಕಂತೆ ಪತಿ ಪೂಜೆ ಸೂಕ್ತ ಎನಿಸುತ್ತದೆ. ಆ ದಿನಗಳಲ್ಲಿ ಪುರುಷ ಮಾತ್ರ ಹೊರಗೆ ಹೋಗಿ ದುಡಿಯುತ್ತಿದ್ದ, ಕುಟುಂಬ ನಿರ್ವಹಣೆಗೆ ಆತನೇ ಆಧಾರಸ್ತಂಭವಾಗಿದ್ದ. ಹಾಗಾಗಿ ಮನೆಯ ಯಜಮಾನನ ಆರೋಗ್ಯ. ಆಯುಷ್ಯ ಗಟ್ಟಿಯಾಗಿರಲಿ ಎಂದು ಭಗವಂತನಲ್ಲಿ ಬೇಡುವ ಉದ್ದೇಶ ಇದ್ದಿರಬಹುದು. ಆದರೆ ಇಂದು ಕಾಲ ಬದಲಾಗಿದೆ. ಪತಿ-ಪತ್ನಿ ಇಬ್ಬರೂ ಸಮಾನರು. ಸಂಸಾರವನ್ನು ನಿಭಾಯಿಸುವಲ್ಲಿ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ. ಪತಿಯ ಆಯಸ್ಸು, ಇಬ್ಬರ ನಡವಿನ ಬಾಂಧವ್ಯ ಗಟ್ಟಿಗೊಳ್ಳಬೇಕಾದರೆ ಪೂಜೆಯೆಂಬ ಆಚರಣೆಗಿಂತ ಹೆಚ್ಚಾಗಿ ಪರಸ್ಪರ ಸಾಮಾನತೆ-ಸಾಮರಸ್ಯ, ಪ್ರೀತಿ-ವಿಶ್ವಾಸ ನಂಬಿಕೆ ಇರಲೇಬೇಕು. ಪತಿಯೇ ಪರದೈವ, ದೀರ್ಘ ಸುಮಂಗಲಿಯಾಗುವಂತಹ ಭಾಗ್ಯ ಕೊಡು ಎಂದೆಲ್ಲಾ ಬೇಡುತ್ತಾ ಹೆಣ್ಣುಮಕ್ಕಳು ಪತಿಯನ್ನು ಪೂಜಿಸುತ್ತಿದ್ದರು. ಆದರೆ ಸಂಸಾರವೆಂಬ ನೌಕೆಯಲ್ಲಿ ಇಬ್ಬರದೂ ಸಮಪಾಲು, ಸಮಬಾಳು. ಹಾಗೆಯೇ ಸೃಷ್ಟಿಯ ರಚನೆಗೆ ಸ್ತ್ರೀ-ಪುರುಷರ ಸಂಯೋಗ ಇರಲೇಬೇಕು.

ಅವಿವಾಹಿತ ಹೆಣ್ಣುಮಕ್ಕಳು ನನ್ನ ಜೀವನ ಸಂಗಾತಿ ಹೀಗಿರಬೇಕು ಎಂದೆಲ್ಲಾ ಕನಸು ಕಾಣುತ್ತಾರೆ. ಏಳೇಳು ಜನ್ಮಕ್ಕೂ ಪತಿಯಾಗಿರು ಎಂದು ವಿವಾಹ ಬಂಧನಕ್ಕೆ ಒಳಪಡುವ ಆಕೆ ತನ್ನ ಗಂಡನಲ್ಲಿ ಸಾಕ್ಷಾತ್ ಶಿವನಲ್ಲಿದ್ದಂತಹ ಗುಣವನ್ನು ಕಾಣಬಯಸುತ್ತಾಳೆ ಎಂದರೆ ತಪ್ಪಾಗಲಾರದು, ಹಾಗಾಗಿಯೇ ಶಿವ ಮತ್ತು ಪಾರ್ವತಿ ಪ್ರಬುದ್ಧ ದಂಪತಿಗಳಿಗೆ ಮಾದರಿಯಾಗಿ ಕಾಣುತ್ತಾರೆ. ಅವರಲ್ಲಿ ಪರಸ್ಪರ ಗೌರವ ಇತ್ತು; ಪ್ರೀತಿಯ ಭಾವವಿತ್ತು. ಈಶ್ವರ-ಪಾರ್ವತಿಯರಲ್ಲಿ ಅಗಾಧ ಪ್ರೀತಿ, ಬದ್ಧತೆ, ಸ್ತ್ರೀ ಸಮಾನತೆಯ ಮನೋಭಾವವನೆ ಇದ್ದುದರಿಂಲೇ ಇಂದಿಗೂ ಪತಿ-ಪತ್ನಿಯರಿಗೆ ಆದರ್ಶಪ್ರಾಯರು. ಶಿವನ ಅರ್ಧನಾರೀಶ್ವರ ರೂಪಕ್ಕೆ ಒಂದು ಕಥೆಯಿದೆ. ಋಷಿಯೊಬ್ಬ ಸ್ತ್ರೀಗೆ ಪೂಜೆ ಸಲ್ಲಿಸುವುದಿಲ್ಲ ಎಂದಾಗ ಪಾರ್ವತಿಗೆ ತನ್ನ ಎಡಪಾರ್ಶ್ವವನ್ನೇ ಬಿಟ್ಟುಕೊಟ್ಟು ಅರ್ಧನಾರೀಶ್ವರನಾಗುತ್ತಾನೆ ಪರಮೇಶ್ವರ. ನಂಬಿ ಬಂದ ಸತಿಗೆ ತನ್ನ ಅರ್ಧ ಹೃದಯವನ್ನೇ ಕೊಡುವ ಕರುಣಾಳು ಆಗುತ್ತಾನೆ. ಅಂತಹ ಶಿವನಿಗೆ ಶ್ರಾವಣ ಪ್ರಿಯವಾದ ಮಾಸ. ಶ್ರಾವಣ ಮಾಸದ ಆರಂಭಕ್ಕೆ ಮುನ್ನುಡಿಯಾಗುವ ಹಬ್ಬವೇ ಭೀಮನ ಅಮಾವಾಸ್ಯೆ. ಶಿವನಂತಹ ಪತಿಗೆ ಪೂಜೆ ಸಲ್ಲಿಸಿ ಆತನೊಂದಿಗೆ ಜತೆಜತೆಯಾಗಿ ಬಾಳನೌಕೆಗೆ ಬಣ್ಣ ತುಂಬುವ ಕನಸು ಆಕೆಯದ್ದು.

ಶಿವಶಕ್ತಿ ಸ್ವರೂಪ
ಬ್ರಹ್ಮಚರ್ಯ, ಸ್ವಯಂನಿಯಂತ್ರಣ ಹಾಗೂ ಯೋಗಿಗಳ ದೇವ ಶಿವ. ಅದರ ಜತೆಗೇ ಸತಿಯ ಮೇಲೆ ಅತ್ಯಂತ ಪ್ರೀತಿ ಹೊಂದಿದ ಪತಿ. ಬ್ರಹ್ಮಸೃಷ್ಟಿಯ ರಚನಾಕಾರನಾದರೆ, ವಿಷ್ಣುಸೃಷ್ಟಿಯ ರಕ್ಷಕ ಹಾಗೂ ಶಿವ ವಿನಾಶಕಾರಕ. ಶಿವ ಬ್ರಹಾಂಡವನ್ನು ನಾಶ ಮಾಡುವುದಲ್ಲದೆ ಮನದೊಳಗಿನ ಅಹಂಕಾರವನ್ನು ನಾಶ ಮಾಡುತ್ತಾನೆ.

ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯಲಾಗುತ್ತದೆ. ಶಿವ ಮತ್ತು ಪಾರ್ವತಿಯನ್ನು ಶಿವ ಮತ್ತು ಶಕ್ತಿ ಅಂದರೆ ಪುರುಷ ಮತ್ತು ಪ್ರಕೃತಿ ಎಂದು ಗುರುತಿಸಲಾಗುತ್ತದೆ. ಪುರುಷ ಎಂದರೆ ಗಂಡು, ಪ್ರಕೃತಿ ಎಂದರೆ ಸ್ತ್ರೀ ಎಂದರ್ಥ. ಅಂದರೆ ಸೃಷ್ಟಿಯ ಮೂಲ ಪುರುಷ. ಆದರೆ ಸಾಧ್ಯವಿಲ್ಲ. ಹಾಗಾಗಿ ಪುರುಷ ಮತ್ತು ಸ್ತ್ರೀ ಎನ್ನುವ ಭೇದ ಸಲ್ಲದು. ಅವರೀರ್ವರಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕು ಎನ್ನುವುದೇ ಹಬ್ಬದಾಚರಣೆಯ ಹಿಂದಿನ ತಾತ್ಪರ್ಯ.


Get In Touch With Us info@kalpa.news Whatsapp: 9481252093

Tags: ArdhanariswaraDr Gururaj PoshettihalliJyotirbheshmeshwara VrataKannada News WebsiteLatest News Kannadaಅನಸೂಯಾದೇವಿಅಮಾವಾಸ್ಯೆಅರ್ಧನಾರೀಶ್ವರಜ್ಯೋತಿರ್ಭೀಮೇಶ್ವರ ವ್ರತಡಾ.ಗುರುರಾಜ ಪೋಶೆಟ್ಟಿಹಳ್ಳಿಬ್ರಹಾಂಡ
Previous Post

ಕೊರೋನಾ ನಿರ್ವಹಣೆಗೆ ನಾನು ಸೂಚಿಸಿರುವ ಮೂರು ಮುಂಜಾಗ್ರತೆ ಪಾಲಿಸಿ: ಡಾ.ಗಿರಿಧರ್ ಕಜೆ

Next Post

ಬಿಬಿ ರಸ್ತೆ ಸೇರಿದಂತೆ ಶಿವಮೊಗ್ಗದ ಹಲವು ರಸ್ತೆ ಸೀಲ್ ಡೌನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Representational Image

ಬಿಬಿ ರಸ್ತೆ ಸೇರಿದಂತೆ ಶಿವಮೊಗ್ಗದ ಹಲವು ರಸ್ತೆ ಸೀಲ್ ಡೌನ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!