ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಾಲಕನೊಬ್ಬರ ತನ್ನ ಲಾರಿಯಲ್ಲಿ ಒನ್ ವೇನಲ್ಲಿ ಚಾಲನೆ ಮಾಡಿಕೊಂಡು ಬಂದು ಮಾಡಿದ ಯಡವಟ್ಟಿನಿಂದಾಗಿ ದಾವಣಗೆರೆ ಎಎಸ್’ಪಿ ಗನ್ ಮ್ಯಾನ್ ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ.
ಕಡೂರು ತಾಲೂಕು ಗಂತಲಿ ಮೂಲದ ಜಯಣ್ಣ ತಮ್ಮ ಪತ್ನಿ ಜೊತೆಯಲ್ಲಿ ಬೈಕಿನೊಂದಿಗೆ ಹೋಗುವಾಗ ಈ ಘಟನೆ ನಡೆದಿದೆ. ಡ್ಯೂಟಿಗೆ ಹೋಗಲು ಪತ್ನಿ ಜೊತೆ ದಾವಣಗೆರೆಗೆ ತೆರಳಲು ರೈಲ್ವೇ ನಿಲ್ದಾಣಕ್ಕೆ ಹೊರಟಿದ್ದರು ಎಂದು ಹೇಳಲಾಗಿದೆ.
ಲಾರಿ ಚಾಲಕ ಒನ್ ವೇನಲ್ಲಿ ಬಂದಿದ್ದೇ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ಜಯಣ್ಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಣ್ಣ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post